Tags » Kannada Kavana

ಇನಿಯ ಓ ಇನಿಯ ..

ಇನಿಯ ಓ ಇನಿಯ
ನಿನದೇ ಈ ಹೃದಯ
ಬಂದು ನೀ ಸನಿಹ
ಛೇಡಿಸು ಈ ವಿರಹ

ಒಂದೇ ಮಾತಲಿ ಹೇಳುವೆನು
ನೀನಿನ್ನೂ ನನ್ನವನು
ನಿನಗಾಗಿ ಕಾದಿರುವೆನು
ತರುವೆಯಾ ಕನಸೊಂದನು..

ಮನದ ಕಿರುತೆರೆ ನಾಯಕ ನೀನು
ಪ್ರೇಮಸ್ವರಕೆ ಹಾಡುವ ಗಾಯಕಿ ನಾನು
ಕಣ್ಣ ಮುಂದೆ ನೀನೊಮ್ಮೆ ಬರಬೇಕಿದೆ ಇನ್ನು
ನಿನ್ನ ನೋಡಿ ಮುಗುಳ್ನಗಬೇಕಿದೆ ನಾನು

Kannada Blogs

ನಾನು ಇರುಳಾಗುವೆ...

ನಾನು ಇರುಳಾಗುವೆ
ನೀನು ಬೆಳದಿಂಗಳಾಗುವುದಾದರೆ
ನಾನು ಅಲೆಯಾಗುವೆ
ನೀನು ಕಡಲಾಗುವುದಾದರೆ
ನಾನು ದುಂಬಿಯಾಗುವೆ
ನೀನು ಹೂವಾಗುವುದಾದರೆ
ನಾನು ಮೋಡವಾಗುವೆ
ನೀನು ಮಳೆಯಾಗುವುದಾದರೆ
ನಾನು ನೀನಾಗುವೆ
ನೀನು ನನ್ನ ಅಪ್ಪಿದರೆ
ಈ ಪ್ರೀತಿಯ ಒಪ್ಪಿದರೆ

Blogs In Kannada

ಕನಸಿನ ಮಳೆಯಲಿ...

ಕನಸಿನ ಮಳೆಯಲಿ ನೆನೆದ
ಮನಸಿನ ಮನವಿಯ ನೀ ಕೇಳು..
ಕಡಲಿನ ತೀರದಿ ಕೈಹಿಡಿದು
ತುಸುದೂರ ನಡೆಯೋಣವೇ ನೀ ಹೇಳು..
ಕನಸಿನ ಕದ ನೀನೇ ತೆರೆದೆ
ಹೃದಯದ ಮೇಲೆ ನೀನೇನು ಬರೆದೆ
ನೂತನ ಲೋಕಕೆ ಹಾರಿ ಹೋಗೋಣವೆ ನೀ ಹೇಳು ..

ದಿನವೂ ಒಂದೇ ಕನಸು ಬೀಳುತಿದೆ
ಹೃದಯ ಒಂದೇ ಹಾಡು ಹಾಡುತಿದೆ
ಕೂಗಿ ಹೇಳುವೆ ನೀ ನನ್ನ ದೇವತೆ
ನೀನೊಮ್ಮೆ ಓದು ನಾ ಬರೆದ ಕವಿತೆ..

ಮಳೆಹನಿಗಳು ಹೊಸ ಹಾಡು ಬರೆದಿವೆ
ಎಲ್ಲ ದಾರಿಗಳು ನಿನ್ನನ್ನೇ ಸೇರಿವೆ
ಕೂಗಿ ಹೇಳುವೆ ನೀ ನನ್ನ ದೇವತೆ
ನಿನೋದು ಮಳೆಹನಿಗಳ ಗೀತೆ .

Kannada Blogs

ಬೇಗ ಬಾ ನೀನು...

ಬೇಗ ಬಾ ನೀನು
ನನ್ನ ಸನಿಹ
ಅಳಿಸು ಬಾ ನೀನು
ನನ್ನ ವಿರಹ
ನೂತನ ಸ್ನೇಹವಿದು
ಮಾತಿಗೂ ಸಿಗದು
ಮೊಗ್ಗಾದ ಮೋಹವಿದು
ನೀ ಬರದೆ ಅರಳದು..

ಪಿಸುಮಾತಾಡುತ
ತುಸುದೂರ ಹೋಗೋಣ..
ತಿಳಿ ಸಂಜೆಯ
ತಂಗಾಳಿಗೆ ಜೊತೆಯಾಗೋಣ..
ಕಡಲಿನ ನೀರವ
ಧ್ಯಾನದಲ್ಲಿ ನಾವೂ ಬೇರೆಯೋಣ..
ತೀರ ತಲುಪುವ ಅಲೆಗಳನು
ಖುದ್ದಾಗಿ ಸ್ವಾಗತಿಸೋಣ..

ಎದೆಯ ಪುಸ್ತಕವ ತೆರೆದು
ಪುಟವಂದನು ನೀ ಓದಬೇಕಿದೆ..
ಕನಸುಗಳ ಕೂಡಿಡಲು
ನಿನ್ನೆದೆಯಲ್ಲಿ ಜಾಗ ಬೇಕಿದೆ
ಕಣ್ಣು ಮಿಟುಕಿಸದೆ ಪ್ರತಿಕ್ಷಣವೂ
ನಿನ್ನ ನಾ ನೋಡಬೇಕಿದೆ
ಗೆಳತಿ ನೀನಿಲ್ಲಿ ಬರಬೇಕಿದೆ
ನನ್ನೊಳಗೆ ನೀ ಸೇರಬೇಕಿದೆ

Kannada Blogs

ಅವಳೊಂದು ಸುಂದರ ಸುಳ್ಳು...

ಅವಳೊಂದು ಸುಂದರ ಸುಳ್ಳು
ನನ್ನೆದೆಯ ಚುಚ್ಚುವ ಮುಳ್ಳು
ನಾನು ಸೋತಾಗ ನಕ್ಕು
ಗೆದ್ದಾಗ ನನ್ನ ಬಿಟ್ಟು ಹೋದವಳು..

ನನ್ನ ಏಕಾಂತಕ್ಕೆ
ವೈರಾಗ್ಯ ಕೊಡಿಸಿ
ನನ್ನ ಏಕಾಂಗಿ ಮಾಡಿ
ಮೊತ್ತೊಬ್ಬರ ಪ್ರೇಮಾಂಗಿಯಾದವಳು

ಬಾಳದಾರಿಯಲಿ ಅಕಸ್ಮಾತ್ ಸಿಕ್ಕು
ನನ್ನೊಂದಿಗೆ ನಾಲ್ಕು ಹೆಜ್ಜೆ ಹಾಕಿ
ದಾರಿ ತಪ್ಪಿಸಿ ಮರೆಯಾದವಳು..

ಕತ್ತಲೆಯ ಬಾಳಿನಲಿ
ಹಣತೆ ಹಿಡಿದು ಬಂದು
ಬೆಳಕಿನ ಆಸೆ ಹುಟ್ಟಿಸಿ
ಹಣತೆಯನ್ನು ಅವಳೇ ಆರಿಸಿ
ನನ್ನ ಬದುಕಿಗೆ ಕತ್ತಲಾದವಳು..

ಅವಳನ್ನು ಮತ್ತೆ ಪ್ರೀತಿಸಿವುದು
ಅಮಾವಾಸ್ಯೆ ರಾತ್ರಿಯಲಿ
ಚಂದಿರ ಕಾಣಲು ನಿಂತಂತೆ
ನೀರಿರದ ಬಾವಿಯಲ್ಲಿ
ಪ್ರತಿಬಿಂಬ ನೋಡಲು ಕೂತಂತೆ
ಸಮುದ್ರದ ಮಧ್ಯದೊಳಗೆ
ತೀರವ ಹುಡುಕಿದಂತೆ
ಶಾಯಿಯಿರದ ಲೇಖನಿಯಲ್ಲಿ
ಕವನ ಬರೆದಂತೆ.!

Kannada Blogs

ಹೊಸಬೆಳಕು ನೀ ಬಂದರೆ...

ಹೊಸಬೆಳಕು ನೀ ಬಂದರೆ
ಹೊಸಬದುಕು ನೀನು ಜೊತೆಯಾದರೆ
ಸಾಕೀ ವಿರಹ ನೀ ಬಾರೆ ಸನಿಹ
ಜೀವವೇ ಕೊಡುವೆ
ನೀ ಬೇಡುವುದಾದರೆ..

ಏನು ಬೇಕು
ಎಲ್ಲ ಕೇಳು
ನಿನ್ನ ಅಪ್ಪಿ ನಾ ಕೊಡುವೆ
ಏನೇ ಆಗಲಿ
ಏನೇ ಹೋಗಲಿ
ನಿನ್ನನ್ನೇ ನಾ ಒಪ್ಪಿಕೊಳ್ಳುವೆ .

ನನ್ನಲ್ಲಿ ನೀನೇ ಇರುವೆ
ಕಂಡಲ್ಲಿ ನೀನೇ ಸಿಗುವೆ
ಏನಿದು ಹೊಸ ಭಾವ ಮೂಡಿದೆ
ಈ ಭಾವಕೊಂದು ಜೀವ ನೀಡು
ಮರು ಮಾತನಾಡದೆ..

Blogs In Kannada

ಇಳಿ ಸಂಜೆಯ ತಿಳಿ ಮೌನ...

ಕಡಲ ಮುಂದೆ
ನನ್ನ ಹೆಗಲಿಗೆ ನೀನು ಒರಗಿ
ಕೂತಿದ್ದನ್ನು ನೆನೆದು
ಹೃದಯ ಕೊರಗುತ್ತಿದೆ ..
ಪ್ರಾಣ ಬಿಡುವವರೆಗೂ
ನೀನು ಬಿಡುಅಂದರೂ ಬಿಡಲೊಲ್ಲೆ ಎಂದು
ನನ್ನ ಕೈ ಬೆರೆಳುಗಳ ಜೊತೆ ನಿನ್ನ ಕೈ
ಬೆಸೆಯುತ್ತಿದ್ದನು ನೆನೆದು ಕಣ್ಣೀರು ಜಿನುಗುತ್ತಿದೆ .

ಇಳಿ ಸಂಜೆಯ
ತಿಳಿ ಮೌನದಲ್ಲಿ
ನೀನು ಆಡಿದ ಮಾತುಗಳನ್ನೆಲ್ಲಾ
ಅಲೆಗಳು ಕೂಗಿ ಹೇಳಿದಂತಿದೆ ..
ದಡದಲ್ಲಿ ನಾವಿಬ್ಬರೂ
ಜೊತೆಗೆ ನಡೆದಾಡಿದ ಗುರುತನ್ನು
ಅಳಿಸಲು ಅಲೆಗಳು ಮರೆತಂತಿದೆ ..

ನಾನೇಕೆ ನಿನ್ನ ಬಳಿ ಬಂದೆ
ನೀನ್ಯಾಕೆ ನನ್ನ ಬಿಟ್ಟು ಹೋದೆ
ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಿದ್ದರೆ
ಎದೆಗೆ ಯಾರೋ ತಿವಿದಂತಿದೆ
ಆ ನೋವಿನಲ್ಲೇ ಬರೆದ ಸಾಲುಗಳಿಂದಲೇ
ನಾನು ‘ಕವಿ’ಯಾದಂತಿದೆ.
– ಸಜ್ಜನ

Kannada Blogs