(ನಗೆ ನಗಾರಿ ಸಿನೆಮಾ ಬ್ಯೂರೋ)
‘ಮೊಗ್ಗಿನ ಮನಸ್ಸು’ ಎಂಬ ಸಿನೆಮಾದ ‘ಪುರುಷ’ ನಿರ್ದೇಶಕರು ಹಾಗೂ ‘ಪುರುಷ’ ನಿರ್ಮಾಪಕರು, ‘ಪುರುಷ’ ಗೀತ ಸಾಹಿತಿಗಳು ಆ ಸಿನೆಮಾದ ಪೋಸ್ಟರಿನಲ್ಲಿ ‘ಇದು ಹುಡುಗಿಯರಿಗೆ ಮಾತ್ರ’ ಎಂದು ಬರೆಸಿ ಕುಚೋದ್ಯವನ್ನು ಮಾಡಿದ್ದಾರೆ. ‘ಈ ಸಿನೆಮಾ ಹುಡುಗರ ಹೃದಯಕ್ಕೆ ಹಾನಿಕರವಾದದ್ದು’ ಎಂದು ಬೇರೆ ಎಚ್ಚರಿಕೆಯನ್ನು ನೀಡಿದ್ದಾರೆ. ಈ ಎಲ್ಲಾ ಸಂಗತಿಗಳನ್ನು ಗಮನಿಸಿ ವಿಪರೀತ ಕುತೂಹಲಿಗಳಾದ ನಗೆ ಸಾಮ್ರಾಟರು ಸಿನೆಮಾವೊಂದನ್ನು ಬಿಟ್ಟು ಉಳಿದ ಸಂಗತಿಗಳಲ್ಲಿ ಆಸಕ್ತಿ ವಹಿಸಿ ವರದಿಗಾರಿಕೆಗೆ ನಡೆದರು.
ಒಂದು ಸಿನೆಮಾ ಹೇಗಿದೆ ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಆ ಬ್ರಹ್ಮನೂ ಉತ್ತರಿಸಲಾರ ಎಂಬುದು ನಗೆ ಸಾಮ್ರಾಟರ ನಂಬಿಕೆ. ಇದಕ್ಕೆ ಕಾರಣಗಳಿವೆ. ನಿರ್ದೇಶಕ ಬೆವರು ಸುರಿಸಿ ಮಾಡಿದ ಸ್ವಂತ ಚಿತ್ರಗಳು ಖಾಲಿ ಕುರ್ಚಿಗಳಿಗಾಗಿ ಮರುಗುತ್ತಾ ಥೀಯಟರಿನಿಂದ ಥಿಯೇಟರಿಗೆ ‘ಮಿಂಚಿನ ಓಟ’ದಲ್ಲಿ ತೊಡಗಿದರೆ ಎಲ್ಲಿಂದಲೋ ಕದ್ದು ತಂದ ಮಾಲು ಭಾರೀ ಯಶಸ್ಸನ್ನು ಪಡೆದು ಬಿಡುತ್ತದೆ. ನಿರ್ದೇಶಕ ‘ಕಲಾ ಸಾಮ್ರಾಟ’ನಾಗಿಬಿಡುತ್ತಾನೆ. ಕೆಲವರು ಅತ್ಯಂತ ಜಾಣ್ಮೆಯಿಂದ ‘ಕಾಪಿ’ ಪದವನ್ನು ಆ ಬಿರುದಿನ ಹಿಂದೆ ಸೇರಿಸಿ ಗೊಣಗಿಕೊಂಡು ಸುಮ್ಮನಾಗುತ್ತಾರೆ. ಹೀಗಾಗಿ ಸಿನೆಮಾ ಹೇಗಿದೆ ಅನ್ನೋದರ ಬಗ್ಗೆ ಸಾಮ್ರಾಟರು ವರದಿಯಲ್ಲಿ ಏನನ್ನೂ ಹೇಳಲಿಚ್ಚಿಸುವುದಿಲ್ಲ. ಮೇಲಾಗಿ ಒಂದು ಪತ್ರಿಕೆ ಸಿನೆಮಾ ಭಯಂಕರ ಚೆನ್ನಾಗಿದೆ ಅಂತ ನಾಲ್ಕೈದು ನಕ್ಷತ್ರಗಳನ್ನು ಕೊಟ್ಟರೆ ಮತ್ತೊಂದು ಪತ್ರಿಕೆ ಇದು ಇಡೀ ವರ್ಷದ ತೋಪು ಸಿನೆಮಾ ಅಂತ ನಾಲ್ಕೈದು ಕೋಳಿ ಮೊಟ್ಟೆಗಳನ್ನು ಕೊಡುತ್ತದೆ. ಕೆಲವು ‘ಹಸಿದ’ ವಾರದ ಅಚ್ಚರಿಗಳು ಪೂರ್ಣ ಚಂದ್ರನನ್ನೇ ತಂದು ಕೈಲಿಟ್ಟು ಸಿನೆಮಾ ಬೋ ಪಸಂದಾಗಿದೆ ಅಂತ ಭೋಂಗು ಬಿಡುತ್ತವೆ. ಅದನ್ನೆಲ್ಲಾ ಓದಿಕೊಂಡು ಪ್ರೇಕ್ಷಕನೇನಾದರೂ ಸೀತಾರಾಮ ಜಪ ಜಪಿಸಿಕೊಂಡು ಥಿಯೇಟರಿಗೆ ಹೋದರೆ ‘ಮೀರಾ’ಳಂತೆ ಎಲ್ಲಾ ಬಿಟ್ಟು ಬೀದಿಯಲ್ಲಿ ಹಾಡುತ್ತಾ ಸಾಗಬೇಕಾಗುತ್ತದೆಯಷ್ಟೇ.
ಇವೆಲ್ಲದರ ನಡುವೆ ‘ಪುರುಷ’ರೇ ರಚಿಸಿರುವ ಈ ಸಿನೆಮಾವನ್ನು ಸ್ಪೆಷಲೀ ಫಾರ್ ಗರ್ಲ್ಸ್ ಎಂದು ನಿರ್ದೇಶಕರು ಕರೆದಿರುವುದರ ಹಿಂದೆ ಭಾರೀ ಮಸಲತ್ತು ನಡೆದಿದೆ ಎಂದು ನಗೆ ಸಾಮ್ರಾಟರ ಇಂದ್ರಿಯಗಳಿಗೆ ಹೊಳೆಯಿತು. ಸಿನೆಮಾ ಹುಡುಗಿಯರಿಗೆ ಮಾತ್ರ ಎಂದು ಹೇಳಿ ಪೋಸ್ಟರುಗಳಲ್ಲೆಲ್ಲಾ ಕೇವಲ ಹುಡುಗಿಯರನ್ನೇ ಹಾಕುವುದರಿಂದಾಗಿ ಅವಶ್ಯಕವಾಗಿ ಹುಡುಗರ ಗಮನ ಸೆಳೆಯಬಹುದು ಎಂಬುದು ನಿರ್ದೇಶಕರ ಬುದ್ಧಿವಂತಿಕೆ. ಹುಡುಗಿಯರ ಸಿನೆಮಾ ನೋಡುವುದಕ್ಕಾಗಿ ಎಲ್ಲಾ ಹುಡುಗಿಯರು ಕಾಲೇಜು, ಸ್ಕೂಲುಗಳನ್ನು ತಪ್ಪಿಸಿ ಕಷ್ಟ ಪಟ್ಟು ಸಿನೆಮಾ ಥಿಯೇಟರಿಗೆ ಬರುತ್ತಾರೆ. ಅದೂ ಅಲ್ಲದೆ ಕಾಲೇಜುಗಳಿಂದ ಮೈಲು ದೂರವಿರುವ ಥಿಯೇಟರುಗಳಿಗೆ ಹುಡುಗಿಯರು ನಡೆದುಕೊಂಡು ಹೋಗಬೇಕು. ಅವರ ಕಷ್ಟವನ್ನು ನೋಡಲಾಗದೆ ಚಿಗುರು ಮೀಸೆಗಳು ಪಲ್ಸರು, ಕರಿಜ್ಮಾಗಳನ್ನು ಫಳಫಳಿಸುತ್ತಾ ಅವರ ನೆರವಿಗೆ ಧಾವಿಸುತ್ತಾರೆ. ಬೈಕಿನ ಬೆನ್ನ ಮೇಲೆ ಅವರನ್ನು ಏರಿಸಿಕೊಂಡು ಥಿಯೇಟರಿನ ಎದುರು ಬಿಡುತ್ತಾರೆ. ಕ್ಯೂನಲ್ಲಿ ನಿಂತು ಬಡಿದಾಡಿ ಎರಡು ಟಿಕೇಟು ತಂದು ಒಂದನ್ನು ಹುಡುಗಿಗೆ ಕೊಟ್ಟು ಆಕೆ ಪ್ರಸನ್ನಳಾದರೆ ತನ್ನ ಟಿಕೇಟನ್ನೂ ತೋರಿಸಿ ಆಕೆಯ ಅಪ್ಪಣೆಯನ್ನು ಪಡೆದು ಥಿಯೇಟರಲ್ಲಿ ಮೂರು ತಾಸಿನ ಯಾತನೆಯನ್ನು ಸಹಿಸಿಕೊಳ್ಳುತ್ತಾನೆ. ಈ ನಡುವೆ ಇಂಟರ್ವೆಲ್‌ಗಳಲ್ಲಿ ಇರುವ ಇಪ್ಪತ್ತು ನಿಮಿಷದಲ್ಲಿಯೇ ಕಿಸೆಯನ್ನು ಬೋಳಿಸಿಕೊಂಡು ಹುಡುಗಿಯ ಎಮೋಶನ್‌ಗಳನ್ನು ನಿಯಂತ್ರಣದಲ್ಲಿರಿಸಿ ದಣಿದು ಹೈರಾಣಾಗಿ ಉಳಿದರ್ಧ ಸಿನೆಮಾದಲ್ಲಿ ಕೊಂಚ ತೂಕಡಿಸಿ ರೆಸ್ಟು ತಗೊಂಡು ಎದ್ದು ಹೊರಬರುತ್ತಾನೆ. ಈ ಮನಃಶಾಸ್ತ್ರದ ಗುಟ್ಟುಗಳನ್ನು ಅರಿತ ನಿರ್ದೇಶಕರು ಸಿನೆಮಾವನ್ನು ಸ್ಪೆಷಲೀ ಫಾರ್ ಗರ್ಲ್ಸ್ ಎಂದು ಕರೆದಿದ್ದಾರೆ.
‘ಈ ಸಿನೆಮಾ ಹುಡುಗರ ಮನಸ್ಸಿಗೆ ಹಾನಿಕಾರಕ’ ಎಂದು ನಿರ್ದೇಶಕರೇ ಎಚ್ಚರಿಸಿದ್ದರೂ ನೀವೇಕಯ್ಯಾ ಥಿಯೇಟರ್‌ಗೆ ಹೋಗುತ್ತಿದ್ದೀರಿ ಎಂದು ಸಾಮ್ರಾಟರು ಥಿಯೇಟರ್ ಮುಂದೆ ಠಳಾಯಿಸಿದ್ದ ಕೆಲವು ಯುವಕರನ್ನು ಕೇಳಲು ಮುಂದಾದರು. ಒಬ್ಬ, ‘ಅಯ್ಯೋ ಹೋಗ್ರಿ, ನಾನ್ಯಾಕೆ ಸಿನೆಮಾ ನೋಡ್ಲಿ? ಐದು ಟಿಕೆಟ್ ಇದೆ. ಬೇಕಾ ಒಂದು ಬರೀ ಐನೂರು...’ ಅಂದ. ಸಾಮ್ರಾಟರು ಆ ಬ್ಲಾಕ್ ಬೆಲ್ಟ್ ನಾಗನಿಂದ ತಪ್ಪಿಸಿಕೊಂಡು ಮತ್ತೊಬ್ಬನ ಬಳಿ ಬಂದು ಪ್ರಶ್ನಿಸಿದರು.
‘ಸಾರ್. ನಮಗೆ ಈ ಎಚ್ಚರಿಕೆಗಳೆಲ್ಲಾ ಯಾವ ಮಹಾ ಸಾರ್? ಸಿಗರೇಟ್ ಪ್ಯಾಕಿನ ಮೇಲೆ ಅಷ್ಟು ದೊಡ್ಡ ದೊಡ್ಡ ಅಕ್ಷರಗಳಲ್ಲಿ ‘ಇದು ಆರೋಗ್ಯಕ್ಕೆ ಹಾನಿಕಾರಕ’ ಅಂತ ಇದ್ದರೂ ನಾವು ದಿನಕ್ಕೆ ಎರಡೆರಡು ಪ್ಯಾಕ್ ಬೂದಿ ಮಾಡೊಲ್ಲವೇ? ಆರೋಗ್ಯವನ್ನೇ ಕೇರ್ ಮಾಡದ ನಾವು ಆಫ್ಟರಾಲ್ ಹೃದಯಕ್ಕೆ ಹಾನಿಯಾಗತ್ತೆ ಅಂತ ಸುಮ್ಮನಿರೋದಕ್ಕೆ ಆಗುತ್ತಾ? ನೋ ಚಾನ್ಸ್! ಅದ್ಕೇ ಮೊದಲನೇ ದಿನ ಮೊದಲ್ನೇ ಶೋಗೆ ಬಂದಿದ್ದೀನಿ. ಇದು ಸರ್, ಯೂಥ್ ಪವರ್ ಅಂದ್ರೆ...’ ಸಾಮ್ರಾಟರು ಆ ನವಯುವಕನ ಪ್ರವರವನ್ನು ತಮ್ಮ ರದ್ದಿ ಕಾಗದದ ಬುಕ್ಕಿನಲ್ಲಿ ಗೀಚಿಕೊಂಡು ಮತ್ತೊಬ್ಬನ ಬಳಿ ಸಾರಿದರು.
‘ಅಯ್ಯೋ ಸಾರ್, ಬರೀ ಮೋಸ. ಇದು ಹುಡುಗಿಯರಿಗಾಗಿ ಸ್ಪೆಷಲ್ ಸಿನೆಮಾ ಅಂತ ಪೋಸ್ಟರ್‌ನಲ್ಲಿ ನೋಡಿ ನಾನು ಮೊದಲ್ನೇ ದಿನದಿಂದ ಬಿಡದೆ ಐದು ದಿನ ಕಂಟಿನ್ಯೂಸಾಗಿ ಥಿಯೇಟರ್ಗೆ ಬರ್ತಿದೀನಿ, ಹುಡುಗೀರು ಬಂದಿರ್ತಾರೆ ಅಂದ್ಕಂಡು. ಒಂದಲ್ಲ, ಎರಡಲ್ಲ ಸಾರ್ ಐದು ದಿನ ಇಪ್ಪತು ಶೋಗೂ ಬಂದಿದೀನಿ... ಸಿನೆಮಾ ನೋಡೋಕಲ್ಲ, ಹುಡುಗಿಯರ ಸಿನೆಮಾ ನೋಡೋಕೆ ಬರೋ ಹುಡುಗಿಯರನ್ನ ನೋಡೋದಕ್ಕೆ ಸಾರ್. ಆದ್ರೆ ಫುಲ್ ಮೋಸಾ ಸರ್. ಐದೂ ದಿನ ಧಿಯೇಟರ್ ತುಂಬಾ ಬರೀ ಹುಡುಗರೇ ತುಂಬಿಕೊಂಡಿದ್ದಾರೆ. ಎಲ್ರಿಗೂ ತಾವು ಫೂಲ್ ಆಗಿದ್ದೀವಿ ಅಂತ ಗೊತ್ತಾಗಿ ಹೋಯ್ತು ಸಾರ್. ಈ ಡೈರಕ್ಟರು ಎರಡು ತಿಂಗ್ಳು ಲೇಟಾಗಿ ನಂಗೆಲ್ಲಾ ಏಪ್ರಿಲ್ ಫೂಲ್ ಮಾಡಿದಾರೆ ಸಾರ್!’ ಎಂದು ತನ್ನ ಅಳಲನ್ನು ತೋಡಿಕೊಂಡ ಮತ್ತೊಬ್ಬ.
ಸಾಮ್ರಾಟರು ಥಿಯೇಟರಿನ ಹಿಂದೆ ಮುಂದೆ ಅಕ್ಕ ಪಕ್ಕವೆಲ್ಲಾ ಅಲೆದಾಡಿ ವರದಿಯನ್ನು ಸಿದ್ಢ ಪಡಿಸಿ ನಗೆ ನಗಾರಿಯ ಕಛೇರಿಗೆ ಹಿಂದಿರುಗುತ್ತಿದ್ದಾಗ ಮತ್ತೊಂದು ಥಿಯೇಟರಿನಲ್ಲಿ ‘ಈ ಸಿನೆಮಾ ‘ಭಕ್ತರ’ ಸ್ಪೆಷಲ್’ ‘ಇದನ್ನು ನೋಡುವುದು ‘ನಾಸ್ತಿಕರ’ ‘ಅಸ್ತಿತ್ವಕ್ಕೇ ಹಾನಿಕಾರಕ’ ಎಂಬ ಸಿನೆಮಾ ಪೋಸ್ಟರ್ ಮೇಲಿನ ಬರಹ ಓದಿ ತಲೆ ಸುತ್ತಿ ಬಿದ್ದವರು ಕಛೇರಿಗೆ ತಲುಪಿದಾಗಲೇ ಕಣ್ಣು ಬಿಟ್ಟಿದ್ದು. ಅದೂ ಎಡಗಣ್ಣು ಮಾತ್ರ!
( ನಗೆ ನಗಾರಿ ಸಿನಿಮಾ ಬ್ಯೂರೋ)
‘ಕನ್ನಡದ ಹಿರಿಯ ನಾಯಕ ನಟರುಗಳಿಗೆ ಇತ್ತೀಚೆಗೆ ತೀರಾ ಅವಮಾನವಾಗುತ್ತಿದೆ. ಸಿನೆಮಾಗಳಿಗೆಲ್ಲಾ ಶಾಲಾ ಕಾಲೇಜು ಹುಡುಗರು ನಾಯಕರಾಗುತ್ತಿದ್ದಾರೆ. ವರ್ಷಕ್ಕೆ ಡಬ್ಬಾದಿಂದ ಹೊರಬರುವ ಚಿತ್ರಗಳಲ್ಲಿ ಶೇಕಡಾ ನೂರಕ್ಕೆ ನೂರರಷ್ಟು ಯುವ ನಾಯಕರೇ ಹೆಚ್ಚಾಗಿದ್ದಾರೆ. ಇದು ಚಿತ್ರರಂಗದ ಆರೋಗ್ಯಕ್ಕೆ ಒಳ್ಳೆಯದಲ್ಲ. ಸರ್ವ ಸಮಾನತೆಯ ಸಿದ್ಧಾಂತದ ಮೇಲೆ ಸಿನೆಮಾಗಳು ತಯಾರಾಗಬೇಕು. ಹೀಗಾಗಿ ನಾವು ಹಿರಿಯ ನಾಯಕರಿಗೆ ವರ್ಷಕ್ಕೆ ಕನಿಷ್ಟ ಪಕ್ಷ ಇಪ್ಪತ್ತು ಪರ್ಸೆಂಟ್ ಸಿನೆಮಾಗಳಲ್ಲಾದರೂ ಹೀರೋ ಪಾತ್ರವನ್ನು ಮೀಸಲು ಇಡಬೇಕು ಎಂದು ಒತ್ತಾಯ ಪಡಿಸುತ್ತಿದ್ದೇವೆ.’ ಎನ್ನುತ್ತದೆ ಚಿತ್ರರಂಗದಲ್ಲಿ ಮಾಡಲು ಕೆಲಸವಿಲ್ಲದ ‘ಕ್ರಿಯಾಶೀಲ’ರ ಸಂಘಟನೆ ಹೊರಡಿಸಿರುವ ಪತ್ರಿಕಾ ಪ್ರಕಟಣೆ. ಈ ಪ್ರಕಟಣೆ ಕೇವಲ ನಗೆ ನಗಾರಿಯ ಕಛೇರಿಯನ್ನು ತಲುಪಿರುವುದರ ಹಿಂದಿನ ರಹಸ್ಯದ ಬಗ್ಗೆ ಪ್ರತಿಸ್ಪರ್ಧಿ ಪತ್ರಿಕೆಗಳು ತನಿಖೆ ನಡೆಸಬಹುದು!
‘ಕನ್ನಡದಲ್ಲಿ ಅನಾರೋಗ್ಯಕರವಾದ ಬೆಳವಣಿಗೆಯೊಂದು ನಡೆಯುತ್ತಿದೆ. ಇದರಿಂದ ನಟನೆ ಎಂಬ ಕಲೆಗೇ ಅವಮಾನ ಮಾಡಿದ ಹಾಗಾಗುತ್ತದೆ.’ ಎಂದು ನಗೆ ಸಾಮ್ರಾಟರೊಂದಿಗೆ ಮಾತಿಗಿಳಿದ ನಿರುದ್ಯೋಗಿ ಕ್ರಿಯಾಶೀಲರ ಸಮಿತಿಯ ಕಾರ್ಯದರ್ಶಿ ‘ ಈಗ ನೋಡಿ ಕಲಾವಿದನ ನಿಜವಾದ ಸಾಮರ್ಥ್ಯ ಹಾಗೂ ಪ್ರತಿಭೆಯ ಅನಾವರಣವಾಗುವುದು ಆತ ಪಾತ್ರವೊಂದನ್ನು ಆವಾಹಿಸಿಕೊಂಡು ನಟಿಸಿದಾಗ. ಉದಾಹರಣೆಗೆ ರಾಜನ ಪಾತ್ರವನ್ನು ಮಾಡುವಾಗ ನಾಯಕ ನಟ ಬಡವನಾದರೂ, ಸಿರಿವಂತಿಕೆಯ ಗತ್ತನ್ನು ಒಂದು ದಿನವೂ ಅನುಭವಿಸಿ ಗೊತ್ತಿರದಿದ್ದರೂ ರಾಜನ ಪಾತ್ರಕ್ಕೆ ತಕ್ಕ ಹಾಗೆ ಅಭಿನಯಿಸಬೇಕು. ಪಾತ್ರಕ್ಕೂ, ನಿಜ ವ್ಯಕ್ತಿತ್ವಕ್ಕೂ ನಡುವಿರುವ ಕಂದಕ ಹೆಚ್ಚಿದಷ್ಟೂ ಅದು ಕಲಾವಿದನಿಗೆ ಬಲವಾದ ಸವಾಲನ್ನು ಒಡ್ಡುತ್ತದೆ. ಅದನ್ನು ನಿಭಾಯಿಸುವವನು ಒಳ್ಳೆಯ ನಟ.’ ಎಂದರು.
‘ನಿಮ್ಮ ಫಿಲಾಸಫಿ ಎಲ್ಲಾ ಸರಿ ಸಾರ್. ಅದಕ್ಕೂ ಪ್ರಸ್ತುತ ನೀವು ಮಾಡುತ್ತಿರುವ ಹಕ್ಕೊತ್ತಾಯಕ್ಕೂ ಏನು ಸಂಬಂಧ ಸಾರ್?’ ತಲೆ ಕೆರೆದುಕೊಂಡು ಪ್ರಶ್ನಿಸಿದರು ನಗೆ ಸಾಮ್ರಾಟ್.
‘ಸಂಬಂಧವಿಲ್ಲದೆ ಮಾತನಾಡುವುದು ನನಗೆ ಸಂಬಂಧಿಸಿದ ವಿಚಾರವಲ್ಲ. ನಾನಿನ್ನೂ ರಾಜಕೀಯಕ್ಕೆ ಇಳಿಯುವ ಮನಸ್ಸು ಮಾಡಿಲ್ಲ. ಒಂದು ವೇಳೆ ಜನಪ್ರಿಯತೆಯ ಭಾರ ಜಾಸ್ತಿಯಾದರೆ ಅದನ್ನು ಕಳೆದುಕೊಂಡು ಸ್ವಲ್ಪ ನಿರಾಳವಾಗುವುದಕ್ಕೆ ಆ ಯೋಚನೆ ಮಾಡಬಹುದು. ಆಗ ಸಂಬಂಧವಿಲ್ಲದ ಹಾಗೆ ಮಾತನಾಡುವುದಕ್ಕೆ ಪ್ರಯತ್ನ ಪಡುತ್ತೇನೆ.
‘ಈಗ ಪ್ರಸ್ತುತ ಹಕ್ಕೊತ್ತಾಯದ ವಿಷಯಕ್ಕೆ ಬರುತ್ತೇನೆ. ನೋಡಿ ಈಗ ಕಾಲೇಜು ಹುಡುಗ ಪಾತ್ರಕ್ಕೆ ಕಾಲೇಜಿನಲ್ಲಿ ಓದುತ್ತಿರುವ ಹುಡುಗನನ್ನೇ ಹಾಕಿಕೊಳ್ಳುತ್ತಿದ್ದಾರೆ. ಯುವಕನ ಪಾತ್ರಕ್ಕೆ ಯುವ ನಟನನ್ನೇ ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ಅವರಿಗೆ ಪಾತ್ರವನ್ನು ಆವಾಹಿಸಿಕೊಳ್ಳುವ ಅವಕಾಶವನ್ನೇ ಕೊಟ್ಟಂತಾಗುವುದಿಲ್ಲ. ಯುವಕರು ಯುವಕರ ಹಾಗೆ ನಟಿಸಲು ಏನು ಮಹಾ ಪ್ರತಿಭೆ ಬೇಕು ಹೇಳಿ? ಪ್ರಾಣಿ ಪ್ರಾಣಿಯಂತಿರುವುದಕ್ಕೆ ಯಾವುದಾದರೂ ಪರಿಶ್ರಮ ಬೇಕೇ? ಪ್ರಾಣಿ ಮನುಷ್ಯನ ಹಾಗೆ ಮಾಡುವುದಕ್ಕೆ ಅಗಾಧವಾದ ಪ್ರತಿಭೆ ಬೇಕು.  ವಯಸ್ಸು ನಲವತ್ತು ದಾಟಿ, ಕ್ರಾಪಿನ ಜಾಗದಲ್ಲಿ ಜಾರುವ ಬುರುಡೆ ಬಂದವರಿಗೆ ಇಪ್ಪತ್ತರ ಹರೆಯದ ನಾಯಕನ ಪಾತ್ರವನ್ನು ಕೊಡಬೇಕು. ಆಗ ನಟನಾ ಸಾಮರ್ಥ್ಯ ಅನಾವರಣ ಗೊಳ್ಳುತ್ತದೆ. ಇಪ್ಪತ್ತರ ತರುಣನಿಗೆ ಹದಿನೆಂಟರ ತರುಣಿಯ ಸೊಂಟ ಬಳಸಿ ಕುಣಿಯುವುದು ಕಷ್ಟವಾಗುವುದಿಲ್ಲ ಅದಕ್ಕೆ ಯಾವ ಸಾಧನೆಯೂ ಬೇಕಿಲ್ಲ. ಆದರೆ ನಲವತ್ತೈದರ ನಟ ತನ್ನ ಮಗಳ ವಯಸ್ಸಿನ ನಟಿಯೊಂದಿಗೆ ಮರ ಸುತ್ತುವುದು ನಿಜಕ್ಕೂ ಎಕ್ಸ್ಟ್ರಾರ್ಡಿನರಿ. ಅದಕ್ಕಾಗಿಯೇ ನಾವು ಕನ್ನಡದಲ್ಲಿ ತಯಾರಾಗುವ ಸಿನೆಮಾಗಳಲ್ಲಿ ಶೇ. ೨೦ರಷ್ಟು ಸಿನೆಮಾಗಳಿಗೆ ನಲವತ್ತು ದಾಟಿದವರನ್ನೇ ಯುವ ನಾಯಕನ ಪಾತ್ರಕ್ಕೆ ಆರಿಸಬೇಕು ಎಂದು ಆಗ್ರಹಿಸುತ್ತಿದ್ದೇವೆ.’ ಎಂದು ವಿವರಿಸಿದರು.
ಸಂದರ್ಶನ ಮುಗಿಸಿದ ನಗೆ ಸಾಮ್ರಾಟರಿಗೆ, ಹೌದು ಇವರು ಬರೀ ನಾಯಕ ನಟರುಗಳ ಬಗ್ಗೆ ಮಾತನಾಡುತ್ತಿದ್ದಾರಲ್ಲ, ನಟೀ ಮಣಿಯರ ವಿಚಾರವೇನು ಎಂದು ಕೇಳುವ ಮನಸ್ಸಾಯಿತು. ಆದರೆ ನಲವತ್ತು ಮೀರಿದ ನಟಿ ಮಣಿಯರು ಹದಿನೆಂಟರ ಹುಡುಗನ ಬೆನ್ನು ತಬ್ಬಿಕೊಂಡು  ಬೈಕಿನಲ್ಲಿ ಕಾಲೇಜಿಗೆ ಬರುವ ದೃಶ್ಯವನ್ನು ಕಲ್ಪಿಸಿಕೊಂಡು ತಮ್ಮ ಪ್ರಶ್ನೆ ಮಹಿಳಾ ಉಟ್ಟು ಓರಾಟಗಾರ್ತಿಯರ್ಯಾರ ಕಿವಿಗೂ ಬೀಳದಂತೆ ಎಚ್ಚರವಹಿಸಿ ಅಲ್ಲಿಂದ ಜಾರಿಕೊಂಡರು!
ಬಹಳ ಜನ ಮಾಜಿದ್ ಮಜೀದಿಯ ’Childre of Heaven' ಬಗ್ಗೆ ಮಾತಾಡುತ್ತಿದ್ದಾರೆ. ಇದು ಹೀಗೆ ಸೆಲೆಬ್ರೇಟ್ ಮಾಡಲೇಬೇಕಾದ ಸಿನೆಮಾಗಳಲ್ಲಿ ಒಂದಾದ್ದರಿಂದ, ನನ್ನದೂ ಎರಡು ಅಕ್ಕಿಕಾಳು. ಸ್ವಲ್ಪ ಹಳೆಯ ಅಕ್ಕಿ. ಹಿಂದೆ ಎಲ್ಲೋ ಬರೆದಿದ್ದನ್ನು ಇಲ್ಲಿ ಹಾಕುತ್ತಿದ್ದೇನೆ. ಇಂಗ್ಲಿಶ್‍ನಲ್ಲಿ ಬರೆದಿದ್ದೆ. ಹಾಗೇ ಹಾಕುತ್ತಿದ್ದೇನೆ.
Majid Majidi's Shoes
The excellent Iranian director Majid Majidi's Children of Heaven (Bacheha-Ye Aseman, 1997) is not an ambitious movie. The fact that it is not so, and that it is intentionally so, is what makes it stand out. It needs an able artist to seize a tiny thread of an idea and explicate an engaging piece of art. And one can trust Majidi to do that.
The entire movie is based on a seemingly contrived incident. Ali, a 9 year old kid accidentally loses his 7 year old sister Zahra's shoes on the way back from the cobbler's. Zahra cannot go to school without her shoes. But Ali doesn't want her to report this to their father because he doesn't have any money to buy new shoes. So, the two young siblings hatch out a plan so that they will save themselves from their father's wrath and also to avoid adding to his troubles. The movie then moves on a fast track portraying the kids' little escapades.
What makes the movie outstanding is the careful juxtaposition of different frames, each frame celebrating the different qualities of what makes a poor yet happy and closely bound family. I think this is where Majidi focuses and scores. The acting is very good, of course. One of the lead characters, Ali, who has the most screen time, played by Amir Farrokh Hashemian is very good. But I find Zahra, played by Bahare Seddiqi, better. However, I was most impressed by Mohammad Amir Naji, who plays the role of Ali and Zahra's father. His chracter and performance is very real.
Children of Heaven is not a movie that will give us a lot of food for thought. It is a kind of movie that will leave behind a longing feeling to see more such movies made that capture our own contexts and lives.
I'll end this post by talking about one of the several scenes that I particularly liked. The masjid sends sugar to Ali's father through Ali asking him to break it into small sugar cubes. At night we see Ali's father cutting the sugar and talking to his family. His wife asks Zahra to serve her father some tea. Zahra pours tea in a cup and brings it to her father. Father thanks Zahra but tells her that she forgot to get sugar. Zahra is a little amused at this. She suggests to her father that "there's so much sugar here", which he has been cutting. Why doesn't he use just one cube? Her father smiles and remarks that it's not right. The Masjid has given it to him because they trust him. Zahra's mother promptly asks her get sugar from the kitchen. Scenes like this have been beautifully rendered in the movie celebrating the simple family values and love. A nice engaging 90 minutes.
ಹಿಂದೆ ಮಜೀದಿಯ ಒಂದು ಇಂಟರ್‍ವ್ಯೂ ಓದಿದ್ದೆ. ಇಂಗ್ಲಿಶ್ ಬರದ ಮಜೀದಯ ಮೊಗ, ಸಂದರ್ಶಕ "ಶೂ" ಎಂದ ತಕ್ಷಣ  ಅರಳಿದ ಬಗೆಯ ಬಗ್ಗೆ ಬರೆದಿದ್ದ.  ಏಕೆಂದರೆ ಆ ಶಬ್ದ ಅವನಿಗೆ ಗೊತ್ತು. ಅದು ತೀರಾ ಆಪ್ತ.
Iranian Filmmaker, Majid Majidi welcomed me               out on his hotel terrace. His wavy reaching hair,               puppy dog eyes, and graying mustache reminded me of               Albert Einstein. I framed and focused, "Smile!" I               shouted, I was in a good mood. But Majid, peered               rather tentatively at the camera. "Smile!" I shouted               again, it didn't occur to me until well into the               interview, that Majid knew a completely different               word for "Smile."
"Could you tie your shoe?" I requested. Then he               smiled. "Shoe" he knew. That's the motif his sweet               film Children of Heaven runs on ... the simple               shoe.
ಆ ಸಂದರ್ಶನವನ್ನು ಇಲ್ಲಿ ಓದಿ.
ಇತ್ತೀಚೆಗೆ ಚೇತನಾಳ ಬ್ಲಾಗಿನಲ್ಲಿ ಹಳೆಯ ಧಾರಾವಾಹಿಗಳ ಬಗ್ಗೆ ಚರ್ಚೆ ನಡೆದಿತ್ತು. ಅಲ್ಲಿ ಒಟ್ಟಾರೆಯಾಗಿ ಕಂಡುಬರುತ್ತಿದ್ದ ಮೂಡು ಹೇಗಿತ್ತೆಂದರೆ, ಎಲ್ಲರ ಅಚ್ಚುಮೆಚ್ಚಿನ ಧಾರಾವಾಹಿಗಳು ಹಳೆಯವೆ. ಇದಕ್ಕೆ ಸ್ವಲ್ಪ ಮಟ್ಟಿಗೆ nostalgia ಕಾರಣ: ಚಿಕ್ಕಂದಿನಲ್ಲಿ ಸಣ್ಣಸಣ್ಣ ಊರುಗಳಲ್ಲಿ ಓರಗೆಯವರು, ಕಿರಿಯರು, ಹಿರಿಯರು ಎಲ್ಲರೂ ಒಟ್ಟಿಗೆ ಕೂತು ಭಕ್ತಿಯಿಂದ ನೋಡುತ್ತಿದ್ದ ಧಾರಾವಾಹಿಗಳು; ನಾನಂತೂ ತೀರ ಚಿಕ್ಕವನಿದ್ದಾಗ ಮಹಾಭಾರತ ಇತ್ಯಾದಿಗಳನ್ನು ಬೇರೆಯವರ ಮನೆಯಲ್ಲಿ ಹೋಗಿಯೇ ನೋಡಿದ್ದು; ಹೀಗೆ ಚಿಕ್ಕಂದಿನ ಸಾಮೂಹಿಕ ಚಟುವಟಿಕೆಗಳು ನಮ್ಮನ್ನು ಕಾಡಿ ಮೃದುವಾಗಿಸುವುದು ಹೌದು. ಅದು ಹೀಗಿದ್ದಾಗ್ಗ್ಯೂ, ವಸ್ತುನಿಷ್ಠವಾಗಿ ವಿಶ್ಲೇಷಿಸಿದರೆ, ಧಾರಾವಾಹಿಗಳ ಗುಣಮಟ್ಟ ಕುಸಿಯುತ್ತ ಬಂದಿರುವುದು ನಿಜ. ಧಾರಾವಾಹಿಗಳಷ್ಟೇ ಅಲ್ಲ, ಸಿನೆಮಾಗಳೂ ಕೂಡ. (ಭಾರತದಲ್ಲಿ) ೭೦ರ ದಶಕದಲ್ಲಿ ಬಂದಷ್ಟು ಒಳ್ಳೆಯ ಸಿನೆಮಾಗಳು ನಂತರ ಬರಲೇ ಇಲ್ಲ. ಇತ್ತಿಚಿನ ದಿನಗಳಲ್ಲಿ ಪರಿಸ್ಥಿತಿ ಸ್ವಲ್ಪಮಟ್ಟಿಗೆ ಬದಲಾಗುತ್ತಿರುವುದು ಧನಾತ್ಮಕ ವಿಚಾರ. ಒಟ್ಟಾರೆಯಾಗಿ ನಮಗಿಂತ ಒಳ್ಳೆಯ ಕ್ವಾಲಿಟಿ ಹೊಂದಿರುವ ಇಂಗ್ಲಿಶ್ ಸಿನೆಮಾಗಳೂ ಇದಕ್ಕೆ ಹೊರತಲ್ಲ. ಹಾಗೆಯೇ ನಮ್ಮಲ್ಲಿ ಸಿನೆಮಾ ಸಂಗೀತ, ಹಾಗೂ ಹಾಡುಗಳ "ಸಾಹಿತ್ಯ". ಅವುಗಳ ಬಗ್ಗೆಯಂತೂ ಹೇಳುವುದೇ ಬೇಡ.
ಇದೆಲ್ಲ ಮತ್ತೆ ಮನಸ್ಸಿನಲ್ಲಿ ಬಂದದ್ದು ಯಾಕೆಂದರೆ ಮೊನ್ನೆ 12 Angry Men ಎಂಬ ಸಿನೆಮಾ ನೋಡಿದೆ. ಸಿಡ್ನಿ ಲುಮೆಟ್ ನಿರ್ದೇಶಿಸಿದ ಮೊದಲ ಸಿನೆಮಾ. ೧೯೫೧ರ ಸಿನೆಮ. ಕಪ್ಪುಬಿಳುಪು ಸಿನೆಮಾ. ರೆಜಿನಾಲ್ಡ್ ರೋಸ್ ಎಂಬಾತನ ಅದೇ ಹೆಸರಿನ ನಾಟಕವೊಂದನ್ನು ಆಧರಿಸಿದ್ದು. ಅದನ್ನು ನೋಡಿದ ಕೂಡಲೇ ಮತ್ತೆ ಅದೇ, "Oh, they don't make them like this anymore!" ಎಂಬ familiar ಫೀಲಿಂಗು.
12 Angry Men, ಸರಳ ಕಥಾವಸ್ತುವಿನ, ನೇರ ನಿರೂಪಣೆಯ ಸಿನೆಮಾ. ಈ ಸಿನೆಮಾದ ಅತ್ಯಂತ ಎದ್ದುಕಾಣುವ ತಂತ್ರವೆಂದರೆ, ಬಹುತೇಕ ಇಡೀ ಸಿನೆಮಾ ಒಂದೇ ಒಂದು ಕೋಣೆಯ ಒಳಗೆ, ಒಂದು ಟೇಬಲ್ಲಿನ ಸುತ್ತ ನಡೆಯುವುದು. ಮೊದಲಿನ ಒಂದು ನಿಮಿಷದಷ್ಟು ಕಾಲ ಕೋರ್ಟಿನಲ್ಲೂ, ಕೊನೆಯ ಕೆಲ ಕ್ಷಣಗಳು ಕೋರ್‍ಟಿನ ಹೊರಗೂ, ಮತ್ತೆ ನಡುವೆ ಒಂದೆರಡು ನಿಮಿಷ ಮೇಲೆ ಹೇಳಿದ ಕೊಠಡಿಗೆ ಹೊಂದಿಕೊಂಡ ಶೌಚದ ಕೋಣೆಯಲ್ಲೂ ನಡೆಯುತ್ತವೆ. ಉಳಿದ್ದದ್ದೆಲ್ಲ ಆ ಕೋಣೆಯಲ್ಲೆ. ಯಾವುದೇ ಹಿನ್ನೆಲೆ ಸಂಗೀತವಿಲ್ಲದ, ಸಹಜವಾದ ಶಬ್ದಗಳನ್ನು -- ಕೆಮ್ಮುವುದು, ಸೆಕೆಗೆ ಉಸ್ಸೆನ್ನುವುದು, ಗುಸುಗುಸು ಮಾತಾಡುವುದು -- ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತ, ಎಚ್ಚರಿಕೆಯ ಕ್ಯಾಮರಾ ಬಳಕೆಯಿಂದ ನಿಧಾನವಾಗಿ ಮುಂದರಿಯುವ ಈ ಸಿನೆಮಾ, ತನ್ನ ಯಾವುದೇ ವಿಪರೀತ ತಂತ್ರಗಾರಿಕೆಯ ಹಂಗಿಲ್ಲದ ಸ್ವಭಾವದಿಂದಲೇ ಮನಸೂರೆಗೊಳ್ಳುತ್ತದೆ.
ಕೆಳವರ್ಗದ ವಸತಿಯಿರುವ ಜಾಗವೊಂದರಲ್ಲಿ ಒಂದು ಕೊಲೆಯಾಗಿದೆ. ಒಬ್ಬ ಲ್ಯಾಟಿನೋ ಹುಡುಗ ತನ್ನ ತಂದೆಯನ್ನು ಕೊಂದಿರುವ ಆರೋಪದ ಮೇಲೆ ಕೋರ್ಟಿನಲ್ಲಿದ್ದಾನೆ. ಸಿನೆಮಾ ಶುರುವಾದಾಗ ಎಲ್ಲ ವಾದವಿವಾದಗಳು ಮುಗಿದಿವೆ. ಜಜ್ ಒಮ್ಮೆ ಕೇಸಿನ ವಿವರಗಳನ್ನು ಸಂಕ್ಷಿಪ್ತವಾಗಿ ಹೇಳಿ, ಅಲ್ಲಿ ಕೂತ ನ್ಯಾಯಾಧಿಕರಣಕ್ಕೆ (jury) ಮುಂದಿನ ವಿಚಾರವನ್ನು ಬಿಡುತ್ತಾನೆ. ೧೨ ಮಂದಿ ಸದಸ್ಯರಿರುವ ಆ ಜ್ಯೂರಿ, ಆಪಾದಿತ ಅಪರಾಧಿಯೋ ಅಲ್ಲವೋ ನಿರ್ಧರಿಸಬೇಕು. ಆದರೆ, ಜಜ್ ಹೇಳುತ್ತಾನೆ - ಎರಡರಲ್ಲಿ ಯಾವ ನಿರ್ಧಾರಕ್ಕೆ ನೀವು ಬಂದರೂ ಸರಿಯೇ, ಆದರೆ ಅದು ಒಮ್ಮತದ ನಿರ್ಧಾರವಾಗಿರಬೇಕು; ಅಲ್ಲದೇ, ಮೊಕದ್ದಮೆಯ ಅಂಶಗಳು ಹಾಗೂ ಆರೋಪಿಯ ವಿರುದ್ಧದ ಸಾಕ್ಷ್ಯ, ಸಂದೇಹಾತೀತವಾಗಿದ್ದಲ್ಲಿ (beyond reasonable doubt) ಮಾತ್ರ ಆರೋಪಿಯನ್ನು ಅಪರಾಧಿಯೆಂದು ಪರಿಗಣಿಸತಕ್ಕದ್ದು.
ಅಲ್ಲಿಂದ ಮುಂದೆ ಜ್ಯೂರಿಯ ಕೋಣೆಗೆ ಬಂದು ಎಲ್ಲರೂ ಸೇರುತ್ತಾರೆ. ಜ್ಯೂರಿಯ ಪ್ರಕಾರ ಇದೊಂದು Open and Shut case; ಆ ಹುಡುಗ ಕೊಲೆ ಮಾಡಿದ್ದಾನೆನ್ನುವುದು ನಿಚ್ಚಳ; ಸಂದರ್ಭ ಹಾಗಿದೆ, ಅಪ್ಪ ಹಾಗೂ ಮಗನಲ್ಲಿ ವಿಪರೀತ ಮನಸ್ತಾಪವಿದೆ; ಮೇಲಿಂದ ಮೇಲೆ ತನ್ನನ್ನು ಹೊಡೆಯುವ ಬೈಯ್ಯುವ ಅಪ್ಪನನ್ನು ಕೊಲ್ಲುವ ಹೇತು ಮಗನಲ್ಲಿರುವುದು ಈ ಕೇಸಿನಲ್ಲಿ ಸ್ಪಷ್ಟ; ’ನಿನ್ನನ್ನು ಕೊಂದೇ ತೀರುತ್ತೇನೆ,’ ಎಂದು ಆ ಹುಡುಗ ಕಿರುಚಿದ್ದನ್ನು ಕೇಳಿದ್ದೇವೆಂದು ಹೇಳುವ ಸಾಕ್ಷಿಗಳಿವೆ; ಕೊಲೆಗೆ ಬಳಸಿದ ಆಯುಧ ಸ್ಥಳದಲ್ಲೇ ಸಿಕ್ಕಿದೆ; ಅವನು ಚಾಕುವಿನಿಂದ ತಿವಿದಿದ್ದನ್ನು ನೋಡಿದೆ ಎಂದು ಹೇಳುವ ಎದುರು ಮನೆಯ ಹೆಂಗಸಿದ್ದಾಳೆ; ಅವನು ಕೊಲೆ ಮಾಡಿದ ನಂತರ ಅವಸರದಿಂದ ಪರಾರಿಯಾದದ್ದನ್ನು ನೋಡಿದೆ ಎಂದು ಹೇಳುವ ಕೆಳಗಿನ ಮನೆಯ ಮುದುಕನಿದ್ದಾನೆ; ಆ ಹುಡುಗ "ಆಯುಧವನ್ನು ಮರಳಿ ತೆಗೆದುಕೊಳ್ಳಲು ಬಂದಾಗ" ಬಂಧಿತನಾಗಿದ್ದಾನೆ. ಜಜ್‍ನಿಗೆ ಕೂಡ ಸುಮ್ಮನೆ ಶಿಕ್ಷೆವಿಧಿಸುವ ಬದಲು ಇದನ್ನು ಎಳೆಯುವುದು ಬೇಸರದ ವಿಚಾರ, ಆದರೆ ಅವನು ಅವಸರ ಮಾಡಲಾರ. ಅನಿವಾರ್ಯವಾಗಿ ನ್ಯಾಯಮಂಡಳಿಗೆ ಅದನ್ನು ಬಿಟ್ಟಿದ್ದಾನೆ. ಹೀಗಿರುವಾಗ, ನ್ಯಾಯಮಂಡಳಿಯ ಎಲ್ಲ ಸದಸ್ಯರಿಗೂ ಅವನು ಅಪರಾಧಿಯೆಂಬುದು ಸ್ಪಷ್ಟ. ಒಬ್ಬನನ್ನು ಬಿಟ್ಟು.
ಅಲ್ಲಿಗೆ ಬಿಕ್ಕಟ್ಟು ಶುರುವಾಗುತ್ತದೆ. ನಿರ್ಧಾರ ಒಮ್ಮತದ್ದಾಗಬೇಕು. ಆದರೆ ಒಬ್ಬ ಮೂರ್ಖ ಉಳಿದ ೧೧ ಜನರ ವಿರುದ್ದ ನಿಂತಿದ್ದಾನಲ್ಲ! "ನಾವೆಲ್ಲ ಅವನು ಅಪರಾಧಿ ಎಂದು ಹೇಳುತ್ತಿದ್ದೇವೆ. ನಿನಗೆ ಅವನು ನಿರಪರಾಧಿ ಎಂದೆನ್ನಿಸುತ್ತಿದೆಯೇ?" ಎಂದೊಬ್ಬ ಅವನನ್ನು ಕೇಳುತ್ತಾನೆ. ಅವನು ಸರಳವಾಗಿ, ನಿಧಾನವಾಗಿ ಹೇಳುತ್ತಾನೆ, "ನನಗೆ ಗೊತ್ತಿಲ್ಲ." ಇನ್ನೊಬ್ಬ ಕೇಳುತ್ತಾನೆ -- ಅವನಿಗೆ ಇದನ್ನು ಮುಗಿಸಿ ಬೇಸ್‍ಬಾಲ್ ಪಂದ್ಯ ನೋಡಲು ಹೋಗುವ ಅವಸರ -- "ಛೇ! ಈಗೇನು ಮಾಡುವುದು?" ಅವನು ಮತ್ತೆ ಹೇಳುತ್ತಾನೆ, "ನನಗೆ ಗೊತ್ತಿಲ್ಲ. ಸುಮ್ಮನೆ ಮಾತಾಡೋಣ. ಸ್ವಲ್ಪ ಹೊತ್ತು, ಇದರ ಬಗ್ಗೆ." "ಮಾತಾಡೋಣ?!" "ಹೌದು. ೧೮ ವರ್ಷದ ಹುಡುಗನೊಬ್ಬನನ್ನು ೫ ನಿಮಿಷದ ಮಾತೂ ಇಲ್ಲದೆ ವಿದ್ಯುತ್ ಕುರ್ಚಿಯ ಮೇಲೆ ಕೂಡಿಸಿ ಕೊಲ್ಲುವುದು ನನ್ನಿಂದ ಸಾಧ್ಯವಿಲ್ಲ. ಮಾತಾಡೋಣ ಇನ್ನೊಮ್ಮೆ, ಎಲ್ಲ ವಿವರಗಳ ಬಗ್ಗೆ."
ಮುಂದೆ ಕೇಸಿನ ವಿವರಗಳಷ್ಟೆ ಅಲ್ಲದೆ ಜ್ಯೂರಿಯ ಸದಸ್ಯರ ಸ್ವಭಾವಗಳು, ಅವರ ವಿವಿಧ ಹಿನ್ನೆಲೆಗಳು, ಪೂರ್ವಗ್ರಹಗಳು, ವೈಯಕ್ತಿಕ ರೋಷಗಳು, ತರ್ಕಬದ್ಧ ವಾದಗಳು, ವಿತಂಡ, ವಿರೋಧಾಭಾಸ ಎಲ್ಲವೂ ಅನಾವರಣಗೊಳ್ಳುತ್ತವೆ. ೧೨ ವಿಭಿನ್ನ ಮಂದಿ: ಯಾವುದೇ ಪರಿಗಣನೆಯಿಲ್ಲದೆ ಒಬ್ಬ ಮನುಷ್ಯನನ್ನು ಸಾವಿಗೆ ತಳ್ಳಲು ಮನಸ್ಸಿಲ್ಲದ ಆರ್ಕಿಟೆಕ್ಟ್; ಈ ವಿಷಯದಲ್ಲಿ ಯಾವುದೇ ಆಸಕ್ತಿಯಿಲ್ಲದ, ಯಾವುದೋ ಒಂದು ನಿರ್ಧಾರಕ್ಕೆ ಬೇಗನೇ ಬಂದು ಬೇಸ್‍ಬಾಲ್ ನೋಡಲು ಹೋಗಬಯಸುವ ಮನುಷ್ಯ; ಜೋರುಬಾಯಿಯ, ಕೆಳವರ್ಗದ ಜನರನ್ನು ದ್ವೇಷಿಸುವ, ಆದ್ದರಿಂದ ಹುಡುಗ ತಪ್ಪಿತಸ್ಥ ಎಂದು ನಿರ್ಧರಿಸಿರುವ ಮುದುಕನೊಬ್ಬ; ತನ್ನ ಮಗ ತನ್ನನ್ನು ಬಿಟ್ಟು ಹೋಗಿದ್ದು ಮನಸ್ಸಲ್ಲಿಟ್ಟುಕೊಂಡು, ಈ ಹುಡುಗನ ಬಗ್ಗೆ ದ್ವೇಷ ಕಾರುವ ಮತ್ತೊಬ್ಬ; ಅತ್ತಿಂದಿತ್ತ ಓಲಾಡುವ ಸೇಲ್ಸ್‍ಮನ್; ಭಾವನೆಗಳ ಕೈಗೆ ಬುದ್ಧಿ ಕೊಡದೆ, ತರ್ಕಬದ್ಧವಾಗಿ ಯೋಚಿಸುವ, ನಿಷ್ಠುರ ಆದರೆ ಮುಕ್ತ ಮನಸ್ಸಿನ ಅಕೌಂಟಂಟ್. ಹೀಗೆ ಸಮಾಜದ ಒಂದು cross-section ಆ ಸಣ್ಣ ಕೋಣೆಯಲ್ಲಿ ನೆರೆದು, ಬೇಸಿಗೆಯ ತಾಳಲಾರದ ಸೆಖೆಯಲ್ಲಿ ಚರ್ಚಿಸುತ್ತಿದೆ.
ಸಿನೆಮಾ ಮುಂದುವರೆದಂತೆ ಸಾಕ್ಷಿಗಳು, ಸನ್ನಿವೇಶಗಳು, ಮೇಲ್ನೋಟಕ್ಕೆ ತೋರುವಷ್ಟು ನಿಖರವಾಗಿಲ್ಲವೆನ್ನುವುದು ತಿಳಿದು ಬರುತ್ತದೆ. ವಾಗ್ವಾದಗಳು, ಚರ್ಚೆಗಳು ಇಷ್ಟವಾಗುವ ನನ್ನಂಥವರಿಗೆ ಬೇಕಾಗುವ ಅಂಶಗಳೆಲ್ಲ ಅಲ್ಲಿವೆ. ತರ್ಕ, ಹೊಳಹು, burden of proof ಯಾರ ಮೇಲಿದೆ ಎನ್ನುವುದರ ವಿಶ್ಲೇಷಣೆ, ಬೇಕೆಂತಲೇ ಕೆದಕಿ, ಕೆಣಕಿ, ಸತ್ಯವನ್ನು ಹೊರಗೆಳೆಯುವ flame baitಗಳು. ಹಾಗೆಯೇ ನಮ್ಮ ನ್ಯಾಯ ವ್ಯವಸ್ಥೆಯಲ್ಲಿ ಕೂಡ ಮುಖ್ಯವಾಗುವ "beyond any reasonable doubt" ಎಂಬ ನುಡಿ ಎಷ್ಟು ಪ್ರಬಲ ಎಂಬುದೂ ತಿಳಿಯುತ್ತದೆ. ನಿಜ, ನಮ್ಮ ವ್ಯವಸ್ಥೆ ಅದಕ್ಷವಾಗಿದೆ; ನ್ಯಾಯ ಸಿಗುವುದಕ್ಕೆ ಯುಗಗಟ್ಟಲೇ ಕಾಯಬೇಕು; ಬಹಳ ಸಲ ಅಪರಾಧಿಗಳು ತಪ್ಪಿಸಿಕೊಳ್ಳುತ್ತಾರೆ. ಹೌದು. ಆದರೆ ಇವೆಲ್ಲ ಬೇರೆ ಸಮಸ್ಯೆಗಳು. ಈ ಸಮಸ್ಯೆಗಳನ್ನು ಬಗೆಹರಿಸುವುದರ ಸಲುವಾಗಿ, ನಾವು ಆಪಾದಿತರ ಹಕ್ಕುಗಳನ್ನು ಕಡಿಮೆ ಮಾಡಿದರೆ ಅದು ಮಾನವೀಯತೆಯಲ್ಲ. ಅದೆಷ್ಟೇ ಪ್ರಖರ "ಸತ್ಯ"ವಾಗಿದ್ದರೂ, ಎಲ್ಲವೂ ನಿಚ್ಚಳವಾಗಿದ್ದರೂ, ಜನ ಸಮುದಾಯಗಳೂ, ಮಾಧ್ಯಮಗಳೂ, opinion pollಗಳೂ ನ್ಯಾಯವನ್ನು ಕೊಡುವ ಹೊರೆ ತೊಗೊಳ್ಳಬಾರದು.
ಅದೇನೇ ಇರಲಿ. ನಾನು ಎಂದಿನಂತೆ ಮತ್ತೆ ಯಾವ್ಯಾವುದೋ ವಿಷಯಗಳ ಬಗ್ಗೆ ಮಾತಾಡುತ್ತ ಹೋಗುತ್ತಿದ್ದೇನೆ. 12 Angry Men ಎಂಬ ಶ್ರೇಷ್ಠ ಸಿನೆಮಾ ನೋಡಿ. ನೀವೂ ನನ್ನಂತೆ, ’ನಮ್ಮಲ್ಲೇಕೆ ಈ ಥರದ ಸಿನೆಮಾಗಳನ್ನು ಮಾಡುವುದಿಲ್ಲ’, ’ಈಗಿನ ಕಾಲದಲ್ಲಿ ಇಂಥ ಸಿನೆಮಾಗಳನ್ನು ಮಾಡಿದರೆ ಜನ ನೋಡುವುದಿಲ್ಲವೇ?’ ಎಂದು ವಿಚಾರಕ್ಕೆ ಬೀಳಿ.
ಶಂಕರನಾಗ್‌ರ ಹಳೆಯ ಚಿತ್ರದ ಶೀರ್ಷಿಕೆ, ಜೊತೆಗೆ ರಮೇಶ್ ನಿರ್ದೇಶನ ಕಮ್ ಅಭಿನಯದ ಚಿತ್ರ ಹಾಗು ಸಿನೆಮಾದ ಕುರಿತು ಕೇಳಿ ಬರುತ್ತಿದ್ದ ಮೆಚ್ಚುಗೆಯ ಮಾತುಗಳ ಹಿನ್ನೆಲೆಯಲ್ಲಿ ಅಪಾರ ನಿರೀಕ್ಷೆ ಇಟ್ಟುಕೊಂಡು ನೋಡಲು ಹೊರಟ ಚಿತ್ರವೇ.. ಆಕ್ಸಿಡೆಂಟ್. ಚಿತ್ರ ನೋಡಿ ಹೊರಬಂದ ಮೇಲೆ ಭರವಸೆ ಹುಸಿಯಾಗಲಿಲ್ಲ ಎಂಬ ಸಮಾಧಾನ; ಒಂದು ವಿಭಿನ್ನ ಚಿತ್ರವನ್ನು ನೋಡಿ ಆನಂದಿಸಿದ ಖುಷಿ. ಮಾಮೂಲಿ ಸಿದ್ಧಸೂತ್ರಗಳಿಂದ ತುಂಬಿರುವ ಮಸಾಲ ಚಿತ್ರಗಳಂತಿರದೆ ಪ್ರೇಕ್ಷಕರಿಗೆ ಭಿನ್ನ ಅನುಭವ ನೀಡಿದ್ದಕ್ಕಾಗಿ ರಮೇಶ್ ಅವರನ್ನು ಶ್ಲಾಘಿಸಬೇಕು.. ಅಭಿನಂದಿಸಬೇಕು.
ಚಿತ್ರದ ಕಥೆಯತ್ತ ಬಂದ್ರೆ...ಹೀರೋ ಸಾವಂತ್(ರಮೇಶ್) ಒಬ್ಬ ರೇಡಿಯೋ ಜಾಕಿ. ಹೆಂಡತಿ ಅಂದ್ರೆ ಪಂಚಪ್ರಾಣ. ಅವನ ಪತ್ನಿಪ್ರೀತಿ ಕಂಡು ಅವನೊಂದಿಗೆ ವಿದೇಶಯಾತ್ರೆಗೆ ತೆರಳಿದ್ದ ಕಲೀಗ್ (ಪೂಜಾ ಗಾಂಧಿ) ಅಸೂಯೆಯಿಂದ ಅವನ ಕಾಲೆಳಿತಾ ಇರ್ತಾಳೆ. ಅವರು ಬೆಂಗಳೂರು ಮುಟ್ಟುವಷ್ಟರಲ್ಲಿ ಅವನ ಪತ್ನಿ ವಸುಂಧರ (ರೇಖಾ) ಆಕ್ಸಿಡೆಂಟ್‌ನಲ್ಲಿ ಇಲ್ಲವಾಗುತ್ತಾಳೆ. ಅವಳ ಸಾವಿನ ಸುತ್ತ ಅನುಮಾನಗಳ ಪೊದರು. ಶಿಕ್ಷಕಿಯಾಗಿದ್ದು ಸಮಾಜದ ಅನ್ಯಾಯದ ವಿರುದ್ಧ ಸೊಲ್ಲೆತ್ತಿ ಹೋರಾಡುವ ದಿಟ್ಟೆ ವಸು ಈ ಹೋರಾಟದಿಂದಾಗಿ ಯಾರ್‍ಯಾರದೋ ವಿರೋಧ ಕಟ್ಟಿಕೊಂಡಿರೋದ್ರಿಂದ ಇದು ಖಂಡಿತಾ ಅ ಆಕ್ಸಿಡೆಂಟ್ ಅಲ್ಲ ಕೊಲೆ ಅಂತ ಅನ್ನಿಸೊಕೆ ಶುರುವಾಗುತ್ತೆ. ಈ ಜಾಡನ್ನು ಹಿಡಿದು ಹೊರಡುವ ನಾಯಕನ ಸತ್ಯ ಶೋಧನೆಯ ಹಾದಿಯ ಸುತ್ತ ಹೆಣೆದ...ಕ್ಷಣ ಕ್ಷಣಕ್ಕೂ ರೋಚಕ ತಿರುವುಗಳನ್ನು ಪಡೆಯುತ್ತಾ ಸಾಗುವ ಚಿತ್ರದ ಕಥೆ ನಿಜಕ್ಕೂ ಥ್ರಿಲ್ಲಿಂಗ್. ಪ್ರಥಮಾರ್ಧದ ತುಂಬೆಲ್ಲಾ ಪ್ರತೀ ದೃಶ್ಯದಿಂದ ದೃಶ್ಯಕ್ಕೆ ಕುತೂಹಲ ಮೂಡಿಸುತ್ತಾ ಸಾಗುವ ಚಿತ್ರದಲ್ಲಿ ಅಲ್ಲಲ್ಲಿ ನಾಯಕನ ನೆನಪಿನಾಳದಲ್ಲಿ ಮೂಡಿ ಮರೆಯಾಗುವ ನಾಯಕಿಯೊಂದಿಗಿನ ಕ್ಷಣಗಳ ಮೆಲುಕು. ಸಿಕ್ಕಿದ ಸುಳಿವುಗಳ ಒಳಸುಳಿಗಳ ಆಳಕ್ಕಿಳಿದು ನಾಯಕಿಯ ಸಾವಿಗೆ ಕಾರಣ ಹುಡುಕುವ ನಾಯಕನ ಹುಡುಕಾಟವೇ ಆಕ್ಸಿಡೆಂಟ್. ಈ ಹುಡುಕಾಟದಲ್ಲಿ ನಾಯಕ ಯಶಸ್ವಿಯಾಗ್ತಾನಾ? ಅದು ಕೊಲೆಯೋ ಅಥವಾ ಆಕ್ಸಿಡೆಂಟೋ? ಆಕೆಯ ನಿಗೂಡ ಸಾವಿಗೆ ಕಾರಣ ಏನು...ಇದನ್ನೆಲ್ಲಾ ಈಗಲೇ ಹೇಳಿ ಬಿಟ್ರೆ ಏನು ಸ್ವಾರಸ್ಯವಿದೆ ಅಲ್ವೆ?
ಮಧ್ಯಂತರದವರೆಗೆ ಚಿತ್ರದ ನಿರೂಪಣೆಯಲ್ಲಿ ಎಲ್ಲೂ ಬಿಗುವನ್ನು ಬಿಟ್ಟುಕೊಡದ ರಮೇಶ್ ದ್ವಿತೀಯಾರ್ಧದಲ್ಲಿ ಸ್ವಲ ಹಿಡಿತ ಸಡಿಲಿಸಿದಂತೆ ಭಾಸವಾದರೂ ಕೂಡಾ, ಚಿತ್ರದ ಆಶಯಕ್ಕೆ ಇದರಿಂದ ಒಂದಿನಿತೂ ಧಕ್ಕೆಯಾಗಿಲ್ಲ ಅನ್ನೋದು ನಿಜ. ಹಾಗಂತ ಚಿತ್ರದ ಬಗ್ಗೆ ಒಂದೂ ದೂರು ಇಲ್ಲ ಅಂತ ತಿಳಿಬೇಡಿ. ಮೊತ್ತ ಮೊದಲನೆಯದು ಚಿತ್ರದ ಹಾಡುಗಳ ಕುರಿತು. ಇರುವ ಹಾಡುಗಳಲ್ಲಿ ಮನಸ್ಸಿನಲ್ಲುಳಿಯುವುದು ಸೋನು ನಿಗಮ್ ಹಾಡಿರುವ ಬಿ.ಆರ್.ಲಕ್ಷ್ಮಣರಾವ್ ಬರೆದಿರುವ ‘ಬಾ ಮಳೆಯೆ ಬಾ..’ ಹಾಡು ಮಾತ್ರ. ಉಳಿದಂತೆ ಜಿಗಿದು ಬಂತು ಪರವಾಗಿಲ್ಲ. ಮಿಕ್ಕೆಲ್ಲ ಹಾಡುಗಳು ಅಷ್ಟಾಗಿ ಮನ ಸೆಳೆಯುವಲ್ಲಿ ವಿಫಲವಾಗಿವೆ. ಜೊತೆಗೆ ಹಾಡಿನ ಅಬ್ಬರ ಮತ್ತು ಕಿವಿಯ ಮೇಲೆ ಅಪ್ಪಳಿಸುವ ಡ್ರಮ್‌ಬೀಟ್ಸ್‌ನಿಂದಾಗಿ ಸ್ವಲ್ಪ ಹಾರ್ಷ್ ಅನ್ನಿಸಿ ಹಾಡಿನ ಸಾಹಿತ್ಯವೇ ಮಸುಕಾಗಿತ್ತು. ಜೊತೆಗೆ ಇಂತಹಾ ಕಥಾಹಂದರದ ಚಿತ್ರಕ್ಕೆ ಈ ಹಾಡುಗಳನ್ನು ತುರುಕುವ ಔಚಿತ್ಯ ಕೂಡಾ ಪ್ರಶ್ನಾರ್ಹ.
ಇನ್ನು ಪಾತ್ರಗಳ ಕುರಿತು ಹೇಳಬೇಕೆಂದರೆ ದತ್ತಣ್ಣನ ಪಾತ್ರ ಚಿತ್ರಕ್ಕೆ ಯಾವ ರೀತಿ ಅಗತ್ಯವಾಗಿತ್ತು ಅನ್ನೋದನ್ನು ಚಿತ್ರ ನೋಡಿ ನೀವೇ ನಿರ್ಧರಿಸಿ. ಅಂತೆಯೇ ಪೂಜ ಗಾಂಧಿ ಎಂಬ ಗ್ಲಾಮರ್ ಬೊಂಬೆಯ ಪಾತ್ರ. ರಮೇಶ್ ಜೊತೆ ರೇಡಿಯೋ ಜಾಕಿಯಾಗಿರೋ ಪೂಜಾ, ದಾಂಡಿಯಾ ನೃತ್ಯವೊಂದರಲ್ಲಿ ಪ್ರೇಕ್ಷಕರ ಕಣ್ಣುಕುಕ್ಕುವುದಕ್ಕಷ್ಟೇ ಸೀಮಿತವಾಗಿಬಿಟ್ಟಿದ್ದಾರೆ.
ಇನ್ನು ರಮೇಶ್ ವಿಷಯಕ್ಕೆ ಬಂದ್ರೆ..ನಿರ್ದೇಶನ ಹಾಗು ಅಭಿನಯ ಎರಡರಲ್ಲೂ ಪೂರ್‍ಣಾಂಕದ ಜೊತೆಗೆ ಬೋನಸ್ ಅಂಕ ಕೊಟ್ರೂ ತಪ್ಪಿಲ್ಲ. ಇಡೀ ಚಿತ್ರಕ್ಕೆ-ಚಿತ್ರಕಥೆಗೆ ರಮೇಶ್ ಜೀವಾಳ. ರೇಖಾ ಚಿತ್ರದ ಆರಂಭಕ್ಕೇ ಇಲ್ಲವಾಗುವುದರಿಂದ ಆಮೇಲೆ ರಮೆಶ್ ನೆನಪಿಸಿಕೊಳ್ಳುವ ದೃಶ್ಯ ಹಾಗು ಹಾಡುಗಳಲ್ಲಷ್ಟೇ ಮಿಂಚುತ್ತಾರೆ. ನಾಟಕರಂಗದ ದೈತ್ಯ ಪ್ರತಿಭೆ ರಾಜೇಂದ್ರ ಕಾರಂತ್ ತಮ್ಮ ವಿಶಿಷ್ಟ ಮ್ಯಾನರಿಸಂನಿಂದಾಗಿ ಗಮನ ಸೆಳೇಯುತ್ತಾರೆ. ತಮ್ಮ ಡೈಲಾಗ್‌ಗಳಿಂದ ಬಿಗಿಯಾಗಿರುವ ಮುಖದಲ್ಲಿ ಮೆಲುನಗು ಅರಳಿಸುತ್ತಾರೆ. ಮಿಕ್ಕಂತೆ ಸುಧಾರಾಣಿ ಚಿಕ್ಕರೋಲ್‌ನಲ್ಲಿ ಚೊಕ್ಕದಾಗಿ ಅಬಿನಯಿಸಿದ್ದಾರೆ. ಮೋಹನ್, ವಿಶಾಲ್, ದಿನೇಶ್‌ಬಾಬು ಕೂಡಾ ಸಹಜವಾಗಿ ಅಭಿನಯಿಸಿದ್ದಾರೆ. ಜೊತೆಗೆ ಅನೇಕ ಹೊಸ-ಹಳೇ ಮುಖಗಳು ಕಾಣಿಸಿಕೊಂಡರೂ ಕೂಡಾ, ಚಿತ್ರದ ವಸ್ತುವಿನಿಂದಾಗಿ ಯಾವ ಪಾತ್ರಕ್ಕೂ ಅಷ್ಟೇನು ಸ್ಕೋಪ್ ಇರಲಿಲ್ಲವಾದ್ದರಿಂದ ಅಷ್ಟಾಗಿ ಮಿಂಚಲು ಯಾರಿಗೂ ಅವಕಾಶವಿಲ್ಲ. ಆದ್ರೂ ಅಭಿನಯದ ವಿಷಯದಲ್ಲಿ ಯಾರೂ ಪಾತ್ರಕ್ಕೆ ಮೋಸ ಮಾಡಿಲ್ಲ.(ದತ್ತಣ್ಣ ಅವರ ವಿಷಯದಲ್ಲಿ ಪಾತ್ರವೇ ಅವರ ಅಭಿನಯ ಪ್ರತಿಭೆಗೆ ಮೋಸ ಮಾಡಿತು ಅಂದ್ರೂ ತಪ್ಪಿಲ್ಲ)
ಒಟ್ಟಾರೆಯಾಗಿ ಹೇಳಬೇಕೆಂದ್ರೆ ವಿಶಿಷ್ಟ ಪ್ರೊಡಕ್ಷನ್‌ನವರು ಕನ್ನಡಕ್ಕೆ ಅಪರೂಪವೆನ್ನಿಸುವ ಒಂದು ಉತ್ತಮ, ವಿಭಿನ್ನ ಚಿತ್ರವನ್ನು ನಮ್ಮ ಮುಂದೆ ಇರಿಸಿದ್ದಾರೆ. ಸಧ್ಯದ ಟ್ರೆಂಡ್ ಆದ ಹದಿಹರೆಯದ ಪ್ರೀತಿ, ರೌಡಿಸಂ ನೆರಳಲ್ಲಿ ಅರಳುವ ಪ್ರೀತಿ ಇವುಗಳಿಗಿಂತ ಭಿನ್ನವಾಗುಳಿವ ಅಪರೂಪದ ಒಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವನ್ನು ನೀಡಿದ್ದಾರೆ. ಈ ಪ್ರಯತ್ನದಲ್ಲಿ ಸಾಕಷ್ಟು ಯಶಸ್ಸು ಕೂಡಾ ಕಂಡಿದ್ದಾರೆ. ಆ ಪ್ರಯತ್ನವನ್ನು ಮೆಚ್ಚಿ ಪ್ರೋತ್ಸಾಹಿಸಲು, ಸವಿದು ಆನಂದಿಸಲು ಮನೆಮಂದಿಯೆಲ್ಲಾ ಒಮ್ಮೆ ನೋಡ ಬಹುದಾದ ಅತ್ಯುತ್ತಮ ಚಿತ್ರ ಆಕ್ಸಿಡೆಂಟ್. ಬರೇ ಪ್ರಚಾರ ಗಿಮಿಕ್‌ಗಳಿಂದಲೇ ಚಿತ್ರಕ್ಕೆ ಜನರನ್ನು ಸೆಳೆಯುವ ಮಂದಿಯ ನಡುವೆ, ರಮೇಶ್ ನಿಜಕ್ಕೂ ಒಂದು ಉತ್ತಮ ಚಿತ್ರ ನೀಡಿ ಅದಕ್ಕೆ ಭರ್ಜರಿ ಪ್ರಚಾರ ಮಾಡಿದ್ದಾರೆ. ಈ ಪ್ರಚಾರ ಪ್ರಯತ್ನ ಖಂಡಿತವಾಗಿಯೂ ಹುಸಿಹೋಗೋಲ್ಲ ಅನ್ನೋದು ಚಿತ್ರ ನೋಡಿದ ಎಲ್ಲರ ಅನಿಸಿಕೆ ಮತ್ತು ಆಶಯ.
(ನಗಾರಿ ಸಿನಿ-ಸಿನಿ ಬ್ಯೂರೋ)
ಅವ್ರನ್ನ ಉದಯ್ ಅಂದರೆ ಯಾರು ಉದಯ್ ಕುಮಾರಾ ಅಂತ ಕೆಲವರು ಕೇಳಬಹುದು. ಆದರೆ ಉದಯ್ ಜಾದೂಗಾರ್ ಅಂದರೆ ಯಾರಿಗೂ ಕನ್ ಫೂಸ್ ಆಗೋದಿಲ್ಲ. ಜಾದೂಗಾರ್ ಮ್ಯಾಜಿಕ್ ಮಾಡಿದ್ರು, ಜನ ಚಪ್ಪಾಳೆ ತಟ್ಟಿದ್ರು. ಮ್ಯಾಜಿಕ್ ಸಾಮಾನುಗಳನ್ನು ತಯಾರಿಸುವ ಕಾರ್ಖಾನೆ ಮಾಡಿದರೆ ಜನ ಹಣ ಸುರಿದು ಮೋಡಿ ಕಲಿತರು. ಅವರು ಸುಡೋಕು ಹಿಡಿದರು, ಅದನ್ನ ಬಿಡಿಸಲಿಕ್ಕೆ ಅಂತಲೇ ಒಂದು ಡಬ್ಬಿ ಮಾಡಿದರು ಜನ ಭಲೇ ಮೆಚ್ಚಿಕೊಂಡರು. ಈಗವರು ಎಲ್ಲಾ ಬಿಟ್ಟು ದರೋಡೆ ಮಾಡೋಕೆ ನಿಂತಿದ್ದಾರೆ, ಬಹುಪಾಲು ಅದು ಮುಗಿದೂ ಆಗಿದೆಯಂತೆ!
ಜಾದೂಗಾರ ದರೋಡೆ ಮಾಡೋಕೆ ನಿಂತರೆ ಸಾಮಾನ್ಯರ ಪಾಡೆನು ಅಂತ ಬುದ್ಧಿಜೀವಿಯ ಫೋಸಿನಲ್ಲಿ ನಾಲ್ಕೈದು ಉದ್ಗಾರ, ಕೊನೆಗೊಂದು ನಿಟ್ಟುಸಿರು ಬಿಟ್ಟು ಎದ್ದುನಿಲ್ಲಲು ರೆಡಿಯಾಗಬೇಕಿಲ್ಲ. ಉದಯ್ 'ದರೋಡೆ' ಹೆಸರಿನ ಸಿನೆಮಾವೊಂದನ್ನು ಮಾಡಿ ಪ್ರೇಕ್ಷಕರ ಜಾದೂಗಾಗಿ ಕಾಯುತ್ತಾ ಕುಳಿತಿದ್ದಾರೆ.
ನಮ್ಮ ರೆಗ್ಯುಲರ್ ದಿನಪತ್ರಿಕೆಗಳಿಂದ ಹಿಡಿದು, ಇರ್ರೆಗ್ಯುಲರ್ ಟ್ಯಾಬ್ಲಾಯ್ಡ್‌ಗಳ ವರೆಗೂ ಯಾರೂ ಜಾದೂಗಾರರನ್ನು ಸೀರಿಯಸ್ಸಾಗಿ ನೋಡುತ್ತಲೇ ಇಲ್ಲ. 'ಪಾಪ ಅವರು ಸಿನೆಮಾ ಮಾಡಿದ್ದಾರಂತೆ, ತುಂಬಾ ಚೆನ್ನಾಗಿದೆ- ಗೆದ್ದೇ ಗೆಲ್ಲುತ್ತೆ ಅಂತ ಅವರೇ ಹೇಳ್ತಿದ್ದಾರೆ. ಪಾಪ ಅವರಿಗ್ಯಾಕೆ ಬೇಜಾರು ಮಾಡ್ತೀರಿ, ಗೆಲ್ಲಿಸಿಬಿಡಿ..' ಎಂದು ಮಣಗಟ್ಟಲೆ ಸಿಂಪಥಿ ಬೆರೆಸಿ ಗೀಚುತ್ತಿದ್ದಾರೆ. ಯಾರೂ ಜಾದೂಗಾರ್ ಎಂಬ ಹೊಸ ಆಶಾ-ಕೋಶಾ ಕಿರಣ 'ಉದಯ'ವಾಗ್ತಿದೆ ಎಂದು ಹೇಳುವ ಧೈರ್ಯ ಮಾಡುತ್ತಿಲ್ಲ.
ಈ ಮಧ್ಯೆ ಜಾದೂಗಾರರು ನಮ್ಮ ನಗೆ ಸಾಮ್ರಾಟರನ್ನು ಯಕ್ಷಿಣಿಯ ಮೂಲಕ ತಮ್ಮ ಸ್ವಸ್ಥಾನದಿಂದ ಎತ್ತಿ ಹಾಕಿಕೊಂಡು ತಮ್ಮಲ್ಲಿಗೆ ಕರೆಸಿಕೊಂಡು ಮೂರು ತಾಸಿನ ಸಿನೆಮಾ ಬಗ್ಗೆ ಕೇವಲ ನಾಲ್ಕು ತಾಸು ಕೊರೆದು ಏನಾದರೂ ಪ್ರಶ್ನೆಗಳಿದ್ದರೆ ಕೇಳುವಂಥವರಾಗಿ ಎಂದರು. ನಾಲ್ಕು ತಾಸು ಭರ್ಜರಿ ನಿದ್ದೆಯಿಂದ ಎದ್ದ ಸಾಮ್ರಾಟರು, ನಾಸ್ತಿಕರು ಸತ್ಯ ಸಾಯಿ ಬಾಬಾಗೆ ಚಾಲೆಂಜ್ ಮಾಡಿದ ಹಾಗೆ, 'ತಾಕತ್ತಿದ್ದರೆ, ನಿಮ್ಮ ಜಾದೂ ಮೂಲಕ ನನ್ನ ಪ್ರಶ್ನೆ ಏನೆಂದು ನೀವೇ ತಿಳಿದುಕೊಂಡು ಉತ್ತರಿಸಿ' ಎನ್ನಬೇಕಂದುಕೊಂಡಿದ್ದರಾದರೂ, ಹಾಗಂದರೆ ಇರುವ ಒಂದು ಪ್ರಶ್ನೆಯ ಜಾಗಕ್ಕೆ ನೂರು ಪ್ರಶ್ನೆಗಳನ್ನು ಊಹಿಸಿಕೊಂಡು ಮತ್ತೆ ಕೊರೆಯಲು ಶುರುಮಾಡಿದರೆ ಎಂಬ ಭಯದಿಂದ 'ಸಿನೆಮಾ ಗೆಲ್ಲುತ್ತಾ?' ಎಂಬ ಮರ್ಮಾಘಾತದ ಪ್ರಶ್ನೆಯನ್ನೇ ಕೇಳಿಬಿಟ್ಟರು. ಆ ಡೆವಿಲ್ಲು ಲಾಯರ್ ಕರ್ರನೆ ಥಾಪರ್‍ಥರ ಎದುರಿಗೆ ಕುಂಡ್ರಿಸಿಕೊಂಡವರು ಮಾತಾಡೋದಕ್ಕಿಂತ ತಾನೇ ಹೆಚ್ಚು ಮಾತಾಡುವ ವಿಧಾನ ನಗೆ ಸಾಮ್ರಾಟರಿಗೆ ಅಷ್ಟಾಗಿ ಮೆಚ್ಚಿಗೆಯಾಗದು.
ಜಾದೂಗಾರ್ ಉತ್ತರಿಸುತ್ತಾ, 'ಗ್ಯಾರಂಟಿ ನನ್ನ ಸಿನೆಮಾ ಗೆದ್ದೇ ಗೆಲ್ಲುತ್ತೆ. ಸಿನೆಮಾ ನೋಡಿದ ಮಂದಿಗೆ ಖುಸಿಯಾಗದಿದ್ದರೆ ಥೇಟರ್ ಹೊರಗೆ ನಿಂತು ಅವರ ಕಾಸು ವಾಪಸ್ ಮಡಗ್ತೀನಿ' ಅಂದ್ರು ಖಡಾಖಂಡಿತವಾಗಿ.
ಮೊದಲೇ ನ್ಯೂಸ್ ಪೇಪರು, ಕಚಡಾ ಸುಟ್ಟು ನೋಟು ತೆಗೆಯುವ ಜಾದೂಗಾರರು ಇವರು, ಥಿಯೇಟರ್ ಮುಂದೆ ನಿಂತು ಇಂಥದ್ದೇ ಜಾದೂ ಮಾಡಲು ಶುರುಮಾಡಿದರೆ, ಲಕ್ಷಾಂತರ ರುಪಾಯಿ ಖರ್ಚು ಮಾಡಿ ಅಕ್ಕಪಕ್ಕದಿಂದ ಕಥೆ ಕದ್ದು ಕಾದಂಬರಿ ಬರೆಸಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸಿನೆಮಾ ಸುತ್ತಿದವರು ಕಲಾಸಿಪಾಳ್ಯದ ಫುಟ್ ಪಾತ್ ಮೇಲೆ ದಬಾಕಿಕೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು 'ನಗೆ ಸಾಮ್ರಾಟ'ರು ಗಾಂಧೀ ನಗರಕ್ಕೆ ಫೀ-ಮೇಲು, ಅಲ್ಲಲ್ಲ ಇ-ಮೇಲು ಮೂಲಕ ರವಾನಿಸಿದ್ದಾರೆ.
ಮೊನ್ನೆ ಹಳೆಯ ಸ್ನೇಹಿತನೊಬ್ಬ ಸಿಕ್ಕ
ಅದೂ ಇದೂ ಮಾತಾಡ್ತಾ, " 'ಮುಂಗಾರು ಮಳೆ' ನೋಡಿದ್ಯಾ? ಒಂಥರಾ ಚೆನ್ನಾಗಿದೆ" ಅಂದೆ.
ಅದಕ್ಕೆ ಅವನು, 'ಕನ್ನಡ ಸಿನೆಮಾ ಚೆನ್ನಾಗಿರೊಲ್ಲ, ಅದಕ್ಕೆ ನಾನು ನೋಡೊಲ್ಲ' ಅಂದ.
ಒದೀಬೇಕು ಅನ್ನಿಸ್ತು, ಆದರೂ ಸುಧಾರಿಸಿಕೊಂಡು ಕೇಳಿದೆ, 'ನೀನು ನೋಡಿದ ಕೊನೆಯ ಕನ್ನಡ ಚಿತ್ರ ಯಾವುದಣ್ಣ?'
'ನೆನಪಿಲ್ಲ ಗುರು, ಒಂದು ಹತ್ತು ವರ್ಷದ ಮೇಲಾಗಿದೆ' ಅಂದ
ನನ್ನ ಕೈಲಿ ಇನ್ನು ತಡೆಯೊಕ್ಕಾಗ್ಲಿಲ್ಲ, 'ಡಬ್ಬಾ ನನ್ನ ಮಗನೆ, ಹತ್ತು ವರ್ಷದಿಂದ ಒಂದೂ ಕನ್ನಡ ಚಿತ್ರ ನೋಡಿಲ್ಲ ನೀನು. ಅದು ಹೇಗೆ ಕನ್ನಡ ಚಿತ್ರ ಚೆನಾಗಿರೊಲ್ಲ ಅಂತ ಹೇಳಿದೆ? ಹಾಗೆ ಹೇಳೋದು ನಿಮಗೆಲ್ಲ ಒಂದು ಷೋಕಿ ನನ್ನ ಮಕ್ಳಾ, ನೋಡಿದ್ರೆ ತಾನೆ ಚೆನ್ನಾಗಿದೆಯಾ ಇಲ್ವಾ ಅಂತ ತಿಳಿಯೋದು? ಕನ್ನಡ ನೋಡೋಕ್ಕೆ ಇಷ್ಟ ಇಲ್ಲ ಅಂದ್ರೆ ನೋಡ್ಬೇಡ, ಕತ್ತೆಬಾಲ ಹೋಯ್ತು, ಆದ್ರೆ ನೋಡ್ದೆ ಮಾಡ್ದೆ ಚೆನ್ನಾಗಿಲ್ಲಾ ಹಾಗೆ ಹೀಗೆ ಅಂತೆಲ್ಲ ಬಾಯಿಗೆ ಬಂದ ಹಾಗೆ ಹೇಳಿದರೆ ಧರ್ಮದೇಟು ಬೀಳುತ್ತೆ' ಅಂದೆ
ಅದಾದ ಮೇಲೆ ಅವನು ಕನ್ನಡ ಸಿನೆಮಾ ನೋಡಿದನೋ ಇಲ್ಲವೋ ಗೊತ್ತಿಲ್ಲ, ನನ್ನನ್ನು ನೋಡೋದನ್ನಂತೂ ಬಿಟ್ಟ, ಕತ್ತೆಬಾಲ :-)