ಯುನಿವರ್ಸಿಟಿಯಲ್ಲಿದ್ದಾಗ ನಮ್ಮ ಬೈಠಕ್ಕುಗಳು, ಗಲಾಟೆ, ಗೆಳೆತನ, ಪ್ರೇಮ, ವಿರಸ, ಗಾಸಿಪ್ ಏನು ನಡೆಯಬೇಕೆಂದರು ಕ್ಯಾಂಪಸ್ಸಿನ ಕುವೆಂಪುರವರ ದೊಡ್ಡದಾದ ಮೂರ್ತಿಯ ಸುತ್ತಮುತ್ತಲೆ ನಡೆಯಬೇಕಿತ್ತು. ಕ್ಯಾಂಪಸ್ಸಿಗೆ ಹೊಸತಾಗಿ ಬಂದ ಜೂನಿಯರ್ ಬ್ಯಾಚಿನ ಹುಡುಗಿಯರನ್ನು ನೋಡಲು ಠಳಾಯಿಸುವ ಹುಡುಗರು, ಶೇಷಣ್ಣನ ಕ್ಯಾಂಟೀನಿನಲ್ಲಿ ಟೀ ಕುಡಿದುಕೊಂಡು ಮಶ್ಕಿರಿ ಮಾಡಿಕೊಂಡು ಕಾಲಕಳೆಯುವ ಗೆಳೆಯರ ಗುಂಪುಗಳು, ಮೈದಾನದಲ್ಲಿ ಆಡುವವರ ಕೇಕೆ, ಸುಮ್ಮನೆ ಕಲ್ಲುಬೆಂಚುಗಳ ಮೇಲೆ ಕೂತು ಹರಟೆ ಕೊಚ್ಚುವವರು, ಇಬ್ಬಿಬ್ಬರೆ ಅಲ್ಲಿಇಲ್ಲಿ ಓಡಾಡಿಕೊಂಡು ತಾವು ಪ್ರೇಮಿಗಳೆಂದು ಸಾರುವ ಜೋಡಿಗಳು..ಹಾಗೂ ಇದನ್ನೆಲ್ಲ ಮೌನವಾಗಿ ನಿಂತು ನೋಡುವ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪನವರು.
ನಾವು ಹೊಸತಾಗಿ ಕ್ಯಾಂಪಸ್ಸಿಗೆ ಬಂದಾಗ ಅಲ್ಲಿನ ಇತರ ಎಲ್ಲ ಕಟ್ಟಡ, ಜನರು ಹಾಗೂ ಮರಗಿಡಗಳ ಜತೆಗೇ ಕುವೆಂಪುರವರೂ ನಿಗೂಢವಾಗಿ ಕಂಡಿದ್ದರು. ಅವರಿರುವ ದೊಡ್ಡ ಕಲ್ಲುಕಟ್ಟೆ ಸೀನಿಯರುಗಳ ಸ್ವತ್ತಾಗಿದ್ದಿದ್ದೂ ಒಂದು ಬಲವಾದ ಕಾರಣ. ಸಂಜೆಗಳಲ್ಲಿ ಆರಾಮವಾಗಿ ಕುವೆಂಪುರವರ ಕಾಲಬುಡದಲ್ಲಿ ಕೂತುಕೊಂಡು ಅವರು ನಡೆಸುವ ಮಾತುಕತೆಗಳ ಬಗ್ಗೆ ನಮಗೆ ಎಲ್ಲಿಲ್ಲದ ಕುತೂಹಲ. ಆದರೆ ನಾವೇನಾದರೂ ಅಪ್ಪಿತಪ್ಪಿ ಆ ಕಟ್ಟೆಯ ಮೆಟ್ಟಿಲು ಹತ್ತಿದರೂ ಸೀನಿಯರುಗಳ ಕೆಂಗಣ್ಣಿಗೆ ಗುರಿಯಾಗುವ ಭಯ. ನಾವುಗಳು ಸ್ವಲ್ಪ ನಿರ್ಭಿಡೆಯಿಂದ ನಡೆದುಕೊಂಡರೆ ನಮ್ಮ ವಿಭಾಗಗಳಲ್ಲಿ ಹೊಸಬರಿಗೆ ನೀಡಲಾಗುವ 'ವೆಲ್ಕಂ' ಸಮಯದಲ್ಲಿ ತೊಂದರೆಯಾಗಬಹುದು ಎಂದು ಎಲ್ಲರು ಮಾತನಾಡಿಕೊಳ್ಳುತ್ತಿದ್ದರು. ಅದಕ್ಕೆ ತಕ್ಕಂತೆ ಹಿರಿಯ ವಿದ್ಯಾರ್ಥಿಗಳೂ ಕೂಡ (ಮೊದಲ ಕೆಲವು ದಿನಗಳವರೆಗೆ..)ನಾವು ಕಂಡರೂ ಕಾಣದಂತೆ ವರ್ತಿಸುತ್ತಿದ್ದರು.
ಹೀಗಿರುವಾಗ ಒಂದು ದಿನ ಹೀಗಾಯಿತು. ನಾನು ಕವಿತೆ ಬರೆಯುತ್ತೇನೆ ಎಂದು ನಮ್ಮ ವಿಭಾಗದ ಒಬ್ಬ ಸೀನಿಯರ್ ವಿದ್ಯಾರ್ಥಿಗೆ ತಿಳಿದುಬಂತು. ಅವ ಹೌದೆ ಎಂದು ಕೇಳಿದ. ನಾನು ಹೂಂ ಎಂದೆ. ಆತನೂ ಚೆನ್ನಾಗಿ ಬರೆಯುತ್ತಾನೆಂದು ಹೆಸರಿದ್ದುದರಿಂದ ನಾನು ನನ್ನ ಬರಹದ ಕೆಲವು ಸ್ಯಾಂಪಲ್ಲುಗಳನ್ನು ಆತನಿಗೆ ತೋರಿಸುವುದೆಂದು ತೀಮರ್ಮಾನವಾಯಿತು. ಸಂಜೆ ನನ್ನ ಒಂದೆರಡು ಕವನಗಳನ್ನು ಆತನಿಗೆ ಲೈಬ್ರರಿಯಲ್ಲಿ ಕೊಟ್ಟೆ. ಆತ ಅವನ್ನು ಓದಿ, 'ನಾನು ನಿನ್ನ ಕವನಗಳ ಬಗ್ಗೆ ಒಂದೆರಡು ಮಾತು ಹೇಳಬೇಕಿದೆ.' ಎಂದ. ಸರಿ ಎಂದು ಮಾತನಾಡುತ್ತ ಲೈಬ್ರರಿಯಿಂದ ಹೊರಗೆ ಬಂದು ಕುಳಿತೆವು. ಕವಿತೆಗಳ ನಡುವೆ ಸಮಯ ಕಳೆದದ್ದೆ ತಿಳಿಯಲಿಲ್ಲ. ಚರ್ಚೆ ಮುಗಿಯಿತು. ನಾವು ಅಲ್ಲಿಯತನಕ ಕೂತದ್ದು ಕುವೆಂಪು ಕಟ್ಟೆಯ ಮೇಲೆ ಎಂದು ಆಗ ನನಗೆ ಅರಿವಾಯಿತು. ಸುಮಾರುಜನ ಹಿರಿಯ ಹಾಗು ನನ್ನ ಬ್ಯಾಚಿನ ವಿದ್ಯಾರ್ಥಿಗಳು ನನ್ನನ್ನು ವಿಚಿತ್ರವಾಗಿ ನೋಡುತ್ತ ಇದ್ದರು. ನಾನು ಒಳೊಳಗೆ ಸಣ್ಣ ಆತಂಕವಿದ್ದರೂ ಏನೂ ಆಗಿಲ್ಲವೆಂಬಂತೆ ಆರಾಮವಾಗಿ ಹಾಸ್ಟೆಲ್ಲಿಗೆ ಹೋದೆ.
ರಾತ್ರಿ ಊಟದ ವೇಳೆ ಸುಮಾರು ಗೆಳತಿಯರು ಬಂದು ನನ್ನ ಧೈರ್ಯವನ್ನು ಅಭಿನಂದಿಸಿದರು. ಕೆಲವರು ನಾನು ಅಲ್ಲಿ ಕೂತದ್ದು, ಅದೂ ಒಬ್ಬ ಸೀನಿಯರ್ ಹುಡುಗನೊಡನೆ -  ಸರಿಯಲ್ಲವೆಂದೂ, ನನ್ನ ಇಮೇಜಿಗೆ ತೊಂದರೆಯಾಗಬಹುದೆಂದೂ ಮಾತನಾಡಿದರು. ನನ್ನದೊಂದು 'ಇಮೇಜು' ಕೂಡ ಇತ್ತು ಹಾಗೂ ಅದು ಸಂಜೆಯ ನಂತರ ಬದಲಾಯಿತು ಎಂದು ನನಗೆ ತಿಳಿಯಿತು. ಕೆಲವು ಹಿರಿಯ ಹುಡುಗಿಯರು ನನ್ನ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ್ದು ನನ್ನ ಕಿವಿಗೆ ಬಿತ್ತು.
ನಾನು ಮಾರನೆಯ ದಿನ ಸಂಜೆ ಒಂದು ಕೆಲಸ ಮಾಡಿದೆ. ನನ್ನ ಶಿವಮೊಗ್ಗೆಯಿಂದ ಬರುವ ಕೆಲವು ಸ್ನೇಹಿತೆಯರೊಡನೆ ಬೇಕೆಂದೆ ಕಟ್ಟೆಯ ಮೇಲೆ ಕುಳಿತು ಅವರ ಬಸ್ಸು ಬರುವ ತನಕ ಹರಟೆ ಹೊಡೆದೆ. ಅವರು ನನ್ನ ತರಲೆಯನ್ನೆಲ್ಲ ಖುಶಿಯಾಗಿ ಆನಂದಿಸಿ ಹೋದರು. ಮಾರನೆಯ ದಿನ ನನ್ನ ಕ್ಲಾಸಿನ ಸ್ನೇಹಿತೆಯರನ್ನು ಎಳೆದುಕೊಂಡು ಹೋದೆ. ಬಹಳ ಗಾಬರಿಯಾದರೂ ಅವರಿಗೂ ಒಂದು ಬಗೆಯ ಥ್ರಿಲ್ಲೆನಿಸಿತು. ಆಮೇಲೆ ನಾವು ಯಾರ ಪರಿವೆಯೂ ಇಲ್ಲದೆ ಕುವೆಂಪುರವರ ಬಳಿ ಕೂರಲಾರಂಭಿಸಿದೆವು. ಮೆಲ್ಲಮೆಲ್ಲನೆ ಇತರ ಗೆಳೆಯರೂ ಶಾಮೀಲಾದರು. ಆಮೇಲೆ ನಮ್ಮ ಮಾಸ್ಟರ್ಸ್ ಕೋರ್ಸು ಮುಗಿಯುವವರೆಗೂ ನಮ್ಮ ಸಂಜೆಗಳ ಕವಿತಾವಾಚನಗಳಲ್ಲಿ, ಚರ್ಚೆ, ಗುದ್ದಾಟ, ಹರಟೆ, ಸಂಭ್ರಮಗಳಲ್ಲಿ ಕುವೆಂಪುರವರ ದಿವ್ಯಮೌನ ಇದ್ದೇ ಇರುತ್ತಿತ್ತು. ಏನೆ ಇರಲಿ, ನಾನು ಅಂದು ಮೊದಲ ಬಾರಿಗೆ ಆ ಕಟ್ಟೆಯ ಮೇಲೆ ಪರಿವೆಯಿಲ್ಲದೆ ಅಚಾನಕ್ಕಾಗಿ ಕೂತದ್ದು, ಆ ಮೂಲಕ ಒಂದು ಸಣ್ಣ ನಿಯಮವನ್ನು ಮುರಿದದ್ದು ನನ್ನ 'ಇಮೇಜ'ನ್ನು ಬದಲಾಯಿಸಿದ್ದಂತೂ ಸತ್ಯ.
ಚಿತ್ರಕೃಪೆ: www1.istockphotos.com
'ಹಯ್ಯೊ, ಅವಳು ಬಂದಳೆಂದು ಕಾಣುತ್ತೆ. ನೀನೆ ಹೋಗು ಮಗಳೆ!'
'ಉಹುಂ. ನಾನು ಯಾಕೆ ಆ ಹೆಂಗಸಿನ ಹತ್ತಿರ ಮಾತಾಡಬೇಕು? ನೀವೆ ಹೋಗ್ರಮ್ಮ!!'
'ನಂಗೆ ತಲೆನೋವು ಅಂದುಬಿಡು. ಪ್ಲೀಸ್ ಕಣೆ. ನಂಗಾಗಲ್ಲ ಮಾರಾಯ್ತಿ ಆ ಪುರಾಣ ಕೇಳೋಕೆ!'
'ಪ್ರತಿ ಸಾರಿ ಹಬ್ಬಕ್ಕೆ ಮನೆಗೆ ಬರೋದು ಈ ಹಿಂಸೆಗಾ? ಸರಿ. ನೀವು ಒಳಗಿರಿ. ಮಿನಿಮಂ ಒಂದು ಗಂಟೆ ಅಂತೂ ಆಗತ್ತೆ.'
ನಾನು ಮುಸಿಮುಸಿ ನಗುತ್ತ ಹಿತ್ತಲ ಬಾಗಿಲು ತೆರೆಯುತ್ತಿದ್ದೆ. ಅಲ್ಲಿ ತಲೆಯ ಮೇಲೆ ಸೆರಗು ಹೊದ್ದುಕೊಂಡು ಆಕೆ ನಿಂತಿರುತ್ತ ಇದ್ದಳು - ಶೋಕದ ಪ್ರತೀಕವೆ ತಾನೆಂಬಂತೆ. ಅವಳು ಎಂದರೆ ಒಂದು ರೀತಿಯ ಸರಿಯಾಗಿ ಒಣಗಿರದ ಸೀರೆಗಳ ಚುಂಗು ವಾಸನೆಯೆ ಇವತ್ತಿಗು ನನ್ನ ಮನಸ್ಸಿಗೆ ಬರುವುದು. ಆಕೆ ಸದಾ ರವಿಕೆಯಂತೆ ಇರುವ ತಾನೆ ಕೈಯಾರ ಹೆಣೆದ ವುಲನಿನ ರವಿಕೆಯನ್ನೆ ಉಡುತ್ತಿದ್ದುದು. ತಲೆಯ ಸೆರಗೊಳಗಿಂದ ಅಸ್ತವ್ಯಸ್ತವಾಗಿ ಇಣುಕುತ್ತಿದ್ದ ಕೂದಲುಗಳು ವಾರದಿಂದ ಬಾಚಣಿಕೆಯ ಪ್ರಯೋಗಕ್ಕೆ ಒಳಪಡದಿರುವ ಎಲ್ಲ ಲಕ್ಷಣಗಳನ್ನೂ ತೋರುತ್ತಿದ್ದವು. ಇನ್ನು ಆಗೀಗ ಇಣುಕುತ್ತಿದ್ದ ಹೇನುಗಳ ವಿಚಾರವನ್ನು ನಾನು ಮಾತನಾಡದಿದ್ದರೇನೆ ಒಳಿತು. ಹಾಗೆ ಬೇಕಾದರೆ ಆಕೆಯ ಮಾಮೂಲು ಉಡುಗೆಯನ್ನು ಬದಲಾಯಿಸಿ ರೇಷ್ಮೆಸೀರೆ ಉಡಿಸಿ ತಲೆಗೂದಲನ್ನು ಒಪ್ಪವಾಗಿ ಬಾಚಿ ಒಂದೆರಡು ಆಭರಣಾದಿಗಳನ್ನು ತೊಡಿಸಿದರೆ ಆಕೆಗೆ ರಾಜಕುಮಾರಿ ಗಾಯತ್ರೀದೇವಿಯವರಿಗೆ ದೊರಕುವಷ್ಟೆ ಗೌರವ ಆರಾಮವಾಗಿ ದೊರಕಿಬಿಡುತ್ತಿತ್ತು. ಆಂಥಾ ಗತ್ತು ಆಕೆಯ ಮುಖದ ಮೇಲೆ ಲಾಸ್ಯವಾಡುತ್ತಿತ್ತು. ನನ್ನ ಮುಖದ ಮೇಲಿನ ಸ್ವಾಗತದ ನಗುವನ್ನೂ ಆಕೆ ಅಸಹ್ಯವೆಂಬಂತೆ ನೋಡಿ ಮನೆಯೊಳಗೆ ಠೀವಿಯಿಂದ ಕಾಲಿಡುತ್ತಿದ್ದಳು ಮತ್ತು ನಮ್ಮ ಅಡುಗೆ ಒಲೆಗೂ ರುಬ್ಬುಗಲ್ಲಿಗೂ ನಡುವೆ ಇರಿಸಲಾಗಿರುತ್ತಿದ್ದ ಕುಳ್ಳನೆಯ ಸ್ಟೂಲೊಂದರ ಮೇಲೆ ತಣ್ಣಗೆ ಆಸೀನಳಾಗುತ್ತಿದ್ದಳು.
ಆಮೇಲೆ ಆಕೆಯ ಸೊಂಟಕ್ಕೆ ಸಿಗಿಸಲಾಗಿದ್ದ ಅಡಿಕೆಪುಡಿಯ ಪಾಕೆಟು, ಸುಮಾರು ಮಲೆನಾಡಿನ ಹೆಂಗಸರು ಇಟ್ಟುಕೊಳ್ಳುವಂಥದು - ಈಚೆ ಬರುತ್ತಿತ್ತು. ಆಕೆ ಮೆಲ್ಲಗೆ ಸುಮಾರು ಹಳೆಯದಾಗಿ ಒಣಗಿಹೋಗಿದ್ದ ವೀಳೆಯದೆಲೆಯನ್ನೂ, ನಾಲಕ್ಕಯಿದು ಅಡಿಕೆಯ ತುಂಡುಗಳನ್ನೂ, ಸುಣ್ಣದ ಹೊಳೆಯುವ ಡಬ್ಬಿಯೊಂದನ್ನೂ ತನ್ನ ತೊಡೆಯ ಮೇಲೆ ಇಡುತ್ತಿದ್ದಳು. ಎಲೆಯ ತೊಟ್ಟು ಮುರಿವ ಶಾಸ್ತ್ರವಾದ ಮೇಲೆ ತನ್ನ ಬಲಗೈಯ ನಡುಬೆರಳಿಂದ ಸುಣ್ಣವನ್ನು ಎಲೆಗೆ ಬಳಿದು ಅಡಿಕೆಯ ತುಂಡುಗಳನ್ನು ಎಲೆಗೆ ಸುರಿದು ಹುಷಾರಾಗಿ ಕಟ್ಟಿ ಅದನ್ನು ತನ್ನ ಬಾಯಿಯ ಒಂದು ಮೂಲೆಗೆ ಭದ್ರವಾಗಿ ಸೇರಿಸುವ ಕ್ರಿಯೆ ನಡೆಯುವುದು. ಆ ಇಡೀ ಪ್ರಕ್ರಿಯೆ ನನ್ನಲ್ಲಿ ಒಂದು ಬಗೆಯ ಕಚಗುಳಿ ಹುಟ್ಟಿಸಿ ನನ್ನ ಬಾಯಲ್ಲಿಯೂ ಎಲಡಿಕೆ ತಿನ್ನಲೇಬೇಕೆಂಬ ತುರಿಕೆಯನ್ನು ಹುಟ್ಟಿಸುತ್ತಿತ್ತು. ಆಕೆಗೂ ಇದು ತಿಳಿದಿತ್ತು ಎಂದು ನನಗೆ ಗುಮಾನಿ. ಆಕೆ ನನ್ನನ್ನು ಹದ್ದಿನಂಥ ಕಣ್ಣುಗಳಿಂದ ನೋಡುತ್ತ ಇರುತ್ತಿದ್ದಿದ್ದು ಇದಕ್ಕೆ ಕಾರಣ. ನಾನು ಅಪ್ಪಿತಪ್ಪಿ ತಲೆಕೆಟ್ಟು ಆಕೆಯಿಂದ ಒಂದು ತುಂಡು ಅಡಿಕೆ ಕೇಳಿದ್ದಿದ್ದರೆ ನನಗೆ ಒದಗಬಹುದಾದ ಪರಿಸ್ಥಿತಿಯ ಬಗ್ಗೆ ನನಗೆ ಒಳ್ಳೆಯ ಅಂದಾಜು ಇದ್ದುದರಿಂದ ನಾನು ನನ್ನ ಆಸೆಯನ್ನು ಬಲವಾಗಿ ದವಡೆಗಳೆಡೆಯಲ್ಲಿ ಅದುಮಿ ಹಿಡಿದು ಆಕೆಗೆ ಕಾಫಿ ನೀಡಲು ಹೊರಡುತ್ತಿದ್ದೆ. ಅದೇ ಸಮಯಕ್ಕೆ ಸರಿಯಾಗಿ ಆಕೆ ನನ್ನ ತಾಯಿಯವರಿಗೆ ಪ್ರತೀ ಸಾರಿಯಂತೆ ಆಕೆ ಬಂದಾಗಲೆ ಬರುವ ತಲೆನೋವು ಹೊಟ್ಟೆಬೇನೆ ಏನಾದರು ಬಂದಿದೆಯೆ ಎಂದು ವಿಚಾರಿಸುವಳು. ನಾನು ಹೌದೆನ್ನುತ್ತ ಆಕೆಯ ಕೈಗೆ ಕಾಫಿಯ ದೊಡ್ಡ ಲೋಟವನ್ನು ಥಮಾಯಿಸಿ ಸುಮ್ಮನಾಗುವೆ. ಆಕೆ ಎಲ್ಲ ತಿಳಿದಿದ್ದರೂ ತಿಳಿದಿಲ್ಲವೆಂಬಂತೆ ಅಲೌಕಿಕ ಆನಂದದಿಂದ ಕಾಫಿ ಕುಡಿಯತೊಡಗುವಳು.
ಆಮೇಲೆ ಆಕೆಯ ಬಾಯಿ ತೆರೆಯುತ್ತಿತ್ತು. ಕೇವಲ ನಲವತ್ತೈದು ನಿಮಿಷಗಳ ಕಾಲ ಆಕೆಯ ಕೆಲಸಕ್ಕೆ ಬಾರದ ಗಂಡುಮಕ್ಕಳು, ಪಿತೂರಿ ಮಾಡುವ ಸೊಸೆಯಂದಿರು, ತನಗೆ ಬರಬೇಕಾದ ಆಸ್ತಿಪಾಲನ್ನು ಇಪ್ಪತ್ತೈದು ವರ್ಷಗಳಿಂದಲೂ ಕೊಡದಿರುವ ನಾದಿನಿ ಮೈದುನಂದಿರು, ತನ್ನ ಬಗ್ಗೆ ಹಿಂದಿನಿಂದ ಹೀಯಾಳಿಸುವ ಜನರು ತನಗೆ ಒಳ್ಳೆಯದು ಮಾಡದ ಜನರು ಯಾವರೀತಿ ನರಕದ ಬೆಂಕಿಯಲ್ಲಿ ಬೇಯುವರು ಎಂದು ಆಕೆ ಸಚಿತ್ರವಾಗಿ ವರ್ಣಿಸುತ್ತಿದ್ದಳು. ಕೇವಲ ಒಂದು ಬಡಪಾಯಿ ಕಾಲೇಜುಹುಡುಗಿಯಾಗಿದ್ದ ನಾನು ಭೀತಿಯನ್ನು ಪ್ರಕಟಿಸುತ್ತ ಗಡಗಡ ನಡುಗುತ್ತ ಕೂತಿರುತ್ತಿದ್ದೆ. ಆಮೇಲೆ ಆಕೆ ನಾನು ಕಾಲೇಜಿಗೆ ಹೋಗಿ ದೊಡ್ಡ ತಪ್ಪು ಮಾಡುತ್ತಿರುವೆನೆಂದೂ, ನನ್ನ ತಂದೆತಾಯಂದಿರಿಗೆ ತಲೆಕೆಟ್ಟಿದೆಯೆಂದೂ, ನನಗೆ ಮದುವೆಯಾಗಿದ್ದರೆ ಈಗಾಗಲೆ ಸುಮಾರು ಮಕ್ಕಳನ್ನು ಹಡೆದು ಫಾರಿನ್ನಿನಲ್ಲಿ ನನ್ನ ಗಂಡನೊಡನೆ ಹಾಯಾಗಿದ್ದಿರಬಹುದಿತ್ತೆಂದೂ ಹೇಳಿ ಏನಿದ್ದರು ಏನೆ ಓದಿದರು ನೀನು ನಾಳೆ ಒಲೆಯ ಬೂದಿ ಕೆದಕುವುದು ತಪ್ಪುತ್ತದೆಯೆ? ಯಾರಿಗಾದರು ತಪ್ಪಿದೆಯೆ? ಎಂದು ಹೇಳಿ ನನ್ನ ಮುಖವನ್ನೆ ದುರದುರನೆ ನೋಡುತ್ತಿದ್ದಳು. ನಾನು ಹೆಚ್ಚಿಗೆ ತಡೆದುಕೊಳ್ಳಲಾಗದೆ ಆಕೆಗೆಂದೆ ತೆಗೆದಿಡಿಟ್ಟಿದ್ದ ಕಾಟನ್ ಸೀರೆ ಹಾಗು ನೂರು ರೂಪಾಯಿಗಳನ್ನು ಹೆಚ್ಚೂಕಡಿಮೆ ಅವಳ ಕೈಯಿಗೆ ತುರುಕುತ್ತಿದ್ದೆ. ಆಕೆ ಆದನ್ನು ತೆಗೆದುಕೊಳ್ಳುವುದು ನಮಗೆ ಮಾಡುವ ಮಹದುಪಕಾರ ಎಂಬಂತೆ ನನ್ನೆಡೆಗೆ ನೋಡುತ್ತಿದ್ದಳು. ಏನಿದ್ದರು ನಿನ್ನ ಅಮ್ಮ ತಪ್ಪಿಸಿಕೊಂಡುಬಿಟ್ಟಳು ನೋಡು ಈ ಸಾರಿ. ಭಾರಿ ಹುಶಾರಿ ಅವಳು ಎಂದು ಸಟ್ಟನೆದ್ದು ಹೊರಗೆ ಹೋಗಿಬಿಡುತ್ತಿದ್ದಳು. ನಾನು ಒಳಗೆ ಹೋಗಿ ಅಮ್ಮನಿಗೆ ಸಿಗ್ನಲ್ಲು ಕೊಡುವೆ. ಇಬ್ಬರೂ ಬಿದ್ದೂ ಬಿದ್ದೂ ನಗುವುದು. ಪ್ರತಿ ವರುಷವೂ ಹೀಗೇ. ತಪ್ಪದೆ ನಡೆಯುವುದು.
ಆಗಾಗ ನಾನು ತಪ್ಪಿಸದೆ ಹೋಗಲೆಬೇಕಾಗುವ ಕೆಲವು ಮದುವೆಗಳಲ್ಲಿ ಈಕೆಯ ನೆರಳು ಕಂಡುಬರುತ್ತಿದ್ದುದುಂಟು. ಅಲ್ಲೆಲ್ಲ ಈಕೆ ಒಬ್ಬಳೆ ಯಾರನ್ನೂ ಅಂಟಿಸಿಕೊಳ್ಳದಂತೆ ತಿರುಗಾಡುತ್ತಿದ್ದಳು. ಆಕೆಯ ತಲೆ ಕೊಂಚ ಒಪ್ಪವಾಗಿ ಮೈಮೇಲೆ ಸುಮಾರುಮಟ್ಟಿಗಿನ ಸೀರೆ ರವಿಕೆಗಳು ಕಂಡುಬರುತ್ತಿದ್ದವು. ಆಕೆಯನ್ನು ಯಾರೂ ಏನು ಕೆಲಸಕ್ಕೂ ಕರೆಯರು. ಆಕೆ ಯಾರಿಗೂ ಬೇಡವಾದಾಕೆ. ಆದರೆ ಈ ಇಮೇಜನ್ನು ಆಕೆಯೆ ಕಟ್ಟಿಟ್ಟುಕೊಂಡಿದ್ದೆಂದು ನನಗೆ ಬಲವಾದ ನಂಬಿಕೆಯಿತ್ತು. ಸಾವಿನ ಮನೆಗಳಿಗೆ ಮಾತ್ರ ಆಕೆ ತಪ್ಪದೆ ಹಾಜರಾಗಿ ಎರಡು ನಿಮಿಷ ಸುಮ್ಮನೆ ಕುಳಿತು ಎದ್ದುಹೋಗುವಳು. ಆಕೆ ಹೋದಮೇಲೆ ಎಷ್ಟೊ ಹೊತ್ತಿನವರೆಗು ಆಕೆಯ ಕಮಟುವಾಸನೆ ಹೋಗಲೊಲ್ಲದೆ ಅಲ್ಲಿಯೆ ಸುಳಿದಾಡುತ್ತಿರುವುದು. ಆಕೆ ನಮ್ಮೆಲ್ಲರನ್ನೂ ಬೇಕಂತೆ ಮೂರ್ಖರನ್ನಾಗಿ ಮಾಡಿ ಸೀಕ್ರೆಟಾಗಿ ನಗುತ್ತಿರುವಳೆಂದೇ ನನಗೆ ಸದಾ ಅನ್ನಿಸುವುದು.
ಚಿತ್ರಕೃಪೆ: www.mattwrigley.com
'ಲೋ..ಲೋ..ಗಾಡಿ ನಿಲ್ಸೋ ಮಗಾ!' ಅಂತ ಕಿರುಚಾಡಿದೆ. ತಮ್ಮ ಗಕ್ಕನೆ ಗಾಡಿ ನಿಲ್ಲಿಸಿ, 'ಏನಾಯ್ತು?' ಎಂದು ಗಾಬರಿಯಾದ. ಚಿಕ್ಕಮಗಳೂರ ಬೀದಿ. 'ಅಲ್ನೋಡು ಐಸ್ಕ್ಯಾಂಡಿ ಮಾರೋನು!! ನಂಗೊಂದೇ ಒಂದು ಕೊಡ್ಸೋಲೇ! ಪ್ಲೀಸೋ!' ಎಂದು ಗೋಗರೆದೆ. ಆಗಲೆ ಐಸ್ಕ್ಯಾಂಡಿಯವನ ಕಾಲಿಗೆ ಸುಮಾರು ಮಕ್ಕಳು ಅಮರಿಕೊಂಡಿದ್ದವು. ಅವನು ಅವನ್ನೆಲ್ಲ ಗದರುತ್ತ ಎಲ್ಲರ ಬಳಿಯೂ ತಪ್ಪದೆ ಚಿಲ್ಲರೆ ಕಾಸು ವಸೂಲಿ ಮಾಡುವ ಇಂಪಾಸಿಬಲ್ ಕೆಲಸದಲ್ಲಿ ಮಗ್ನನಾಗಿದ್ದ. ಎಲ್ಲ ಐಸ್ಕ್ಯಾಂಡಿ ಮಾರುವವರೂ ಹೀಗೇನೆ ಅನ್ನಿಸಿತು. ತಮ್ಮ ನನ್ನ ಅವಾಂತರಕ್ಕೆ ಕ್ಯಾಕರಿಸಿ ಉಗಿಯದೆ ನಕ್ಕ. 'ಅದುಕ್ ನಿಲ್ಸು ಅಂದ್ಯಾ? ಮೆಂಟಲ್!' ಎಂದು ಕ್ಯಾಂಡಿಯವನ ಕಡೆ ಗಾಡಿ ತಿರುಗಿಸಿದ. ನಾನು ಸುಮಾರು ಇಪ್ಪತ್ತು ವರುಷ ಹಿಂದೆ ಹೋದೆ.
ಶನಿವಾರ ಭಾನುವಾರಗಳು ಸಾಧಾರಣ ಎಲ್ಲ ತಂದೆತಾಯಂದಿರ ಪಾಲಿಗೆ ದುಃಸ್ವಪ್ನವಾಗಿದ್ದ ಕಾಲವದು. ಈಗಿನಂತೆ ರಜಾದಿನಗಳಲ್ಲಿ ಮಕ್ಕಳನ್ನು ಡ್ಯಾನ್ಸು, ಹಾಡು, ವಯೊಲಿನ್, ಗಿಟಾರ್ ಕ್ಲಾಸುಗಳಿಗೆ ದಬ್ಬುವಂತೆ ಇರಲಿಲ್ಲ. ಟೀವಿಯ ಹಾವಳಿ ಇನ್ನೂ ಊರಿಗೆ ಕಾಲಿಟ್ಟಿರಲಿಲ್ಲ. ಇಲ್ಲಾ ಮಕ್ಕಳನ್ನು ಮನೆಯಲ್ಲಿ ಇಟ್ಟುಕೊಂಡು ಅವುಗಳಿಂದ ನರಕಯಾತನೆ ಅನುಭವಿಸಬೇಕು, ಇಲ್ಲವೇ ಅವು ಸಿಕ್ಕಾಬಟ್ಟೆ ಆಟವಾಡಿ ಎಲ್ಲೆಲ್ಲೊ ಎದ್ದ್ದು ಬಿದ್ದು ತಮ್ಮ ಕಣ್ಣೆದುರೆ ಥೇಟು ಹಿಪ್ಪೀಗಳಾಗಿ  ಟ್ರಾನ್ಸ್ಫಾರ್ಮ್ ಆಗುವದನ್ನ ನೋಡಿ ಸಹಿಸಿಕೊಳ್ಳುವ ಕೆಪಾಸಿಟಿ ಬೆಳೆಸಿಕೊಳ್ಳಬೇಕು. ಅದರಲ್ಲು ಬೇಸಿಗೆರಜ ಬಂತೆಂದರೆ ನಮ್ಮ ಅಪ್ಪಮ್ಮಂದಿರ ಮನಸ್ಸುಗಳು ಅನುಭವಿಸುತ್ತಿದ್ದ ಆ ವೇದನೆಯನ್ನು ವರ್ಣಿಸಲು ಪದಗಳು ಸಾಲವು. ಬೇಸಿಗೆಯಲ್ಲಿ ನಾವು ಬಿಸಿಲೆನ್ನದೆ, ಹಗಲೆನ್ನದೆ, ಇರುಳೆನ್ನದೆ ಆಟವಾಡಿ ನಮ್ಮ ನಿಜವಾದ ಬಣ್ಣಗಳನ್ನು ಕಳೆದುಕೊಳ್ಳುವ ಸತತ ಶ್ರಮದಲ್ಲಿ ತೊಡಗಿಕೊಳ್ಳುತ್ತಿದ್ದೆವು. ನಮ್ಮ ತಾಯಂದಿರು ಸ್ನಾನದಮನೆಯಲ್ಲಿ ನಮ್ಮನ್ನು ಗುಂಜಿನಿಂದ ತಿಕ್ಕೀ ತಿಕ್ಕೀ ಆ ಬಣ್ಣವನ್ನು ವಾಪಾಸು ತರಿಸುವ ಸತತ ಪ್ರಯತ್ನ ಮಾಡುವರು. ನಮ್ಮ ಹಸಿವೆನ್ನುವುದಕ್ಕೆ ಕೊನೆಮೊದಲೇ ಇರಲಿಲ್ಲ. ಅಮ್ಮ ಬೇಸಿಗೆಯ ಎರಡು ತಿಂಗಳಿಗೆಂದು ಮಾಡಿಟ್ಟ ಡಬ್ಬಗಟ್ಟಲೆ ತಿಂಡಿ ವಾರ ಕಳೆವಷ್ಟರಲ್ಲಿ ಮಂಗಮಾಯ! ಹಿತ್ತಲಲ್ಲಿ ಬೆಳೆದ ದೊಡ್ಡ ಬಾಳೆಯ ಗೊನೆ ಮೂರೇ ದಿನದಲ್ಲಿ ಖಾಲಿ! ಅರ್ಧಗಂಟೆಗೊಮ್ಮೆ ಮರುಕಳಿಸುವ ನಮ್ಮ ಹಸಿವುಗಳು! ನಮ್ಮ ಹಾಹಾಕಾರಗಳು! ಯಾರಾದ್ರು ಕೇಳಿದ್ರೆ ’ಇವಕ್ಕೆ ಹೊಟ್ಟೆಗೇ ಹಾಕ್ತಿಲ್ಲ ಅನ್ಕೋಬೇಕು. ಎಲ್ರ ಮನೇಲಿ ನಮ್ಮಕ್ಕಳು ತಿನ್ನಲ್ಲಾ, ತಿನ್ನಲ್ಲಾ ಅಂದರೆ ನಾನು ನನ್ಮಕ್ಕಳು ತಿಂತಾರೇ, ತಿಂತಾರೇ ಅಂತ ಚಿಂತೆ ಮಾಡ್ತೀನಿ’ ಎಂದು ಅಮ್ಮ ಹುಸಿಕೋಪ ತೋರುತ್ತ ಹೇಳುವರು. ನಾವು ಎಷ್ಟೇ ಏನೇ ತಿಂದರು ಸೀಕಲಕಡ್ಡಿ ಸುಗುಟಿಯರಾಗೇ ಉಳಿದಿದ್ದುದು ಪ್ರಕೃತಿಯ ಒಂದು ವಿಸ್ಮಯ.
ಇಂಥಾ ಬೇಸಿಗೆಯ ಮಧ್ಯಾಹ್ನಗಳಲ್ಲಿ ಗಂಟೆಯ ಶಬ್ದ ಕೇಳಿದೊಡನೆ ನಮ್ಮ ಕಿವಿ ನಿಮಿರುತ್ತಿದ್ದವು. ’ಐಸ್ಕ್ಯಾಂಡೀಈಈ..ಐಸ್ ಐಸ್..’ ಎಂಬ ಆ ಕೂಗು ನಮ್ಮ ಕಿವಿಗಳಿಗೆ ಎಷ್ಟು ಅಪ್ಯಾಯಮಾನವಾಗಿತ್ತೊ, ಹಿರಿಯರ ಪಾಲಿಗೆ ಅಷ್ಟೇ ಕರ್ಣಕಠೋರವಾಗಿ ಪರಿಣಮಿಸುತ್ತಿತ್ತು. ನಮ್ಮ ಸ್ಟ್ರಾಟಜಿಗಳು ಆ ನಿಮಿಷದಿಂದ ಅತಿವೇಗವಾಗಿ ಕಾರ್ಯರೂಪಕ್ಕೆ ಬರುತ್ತಿದ್ದವು. ನಮ್ಮ ಮನೆಯಲ್ಲಿ ಮೂವರು ಐಸ್ಕ್ಯಾಂಡಿಪ್ರಿಯ ಮರಿಪಿಶಾಚಿಗಳಿರುವುದು ಐಸ್ಕ್ಯಾಂಡಿಯವನಿಗೂ ತಿಳಿದಿತ್ತು. ಎಂತಲೇ ಆತ ನಮ್ಮ ಮನೆಯ ಗೇಟಿನೆದುರು ಭದ್ರವಾಗಿ ಪ್ರತಿಷ್ಟಾಪಿತನಾಗಿಬಿಡುತ್ತಿದ್ದ. ಆತನ ಕಡೆಗೊಂದು ಭರವಸೆಯ ನೋಟವನ್ನೆಸೆದು ನಾವು ಅಡಿಗೆಮನೆಯಕಡೆಗೆ ಓಟಕೀಳುತ್ತಿದ್ದೆವು. ಅಲವತ್ತುಕೊಳ್ಳುವ ಪ್ರಶ್ನೆಯೇ ಇಲ್ಲ. ನಮ್ಮ ಕಿರುಚಾಟಗಳು ಎಷ್ಟು ಭಯಂಕರವಾಗಿರುತ್ತಿದ್ದವೆಂದರೆ ನಮ್ಮ ಕಾಟ ತಪ್ಪಿಸಿಕೊಳ್ಳಲು ದುಡ್ಡು ಬಿಚ್ಚದೆ ಬೇರೆ ದಾರಿಯೇ ಇರಲಿಲ್ಲ. ಆಮೇಲೆ ನಮ್ಮಮ್ಮನೂ 'ಗುಪ್ತ ಐಸ್ಕ್ಯಾಂಡಿಪ್ರಿಯೆ'ಯಾದ್ದರಿಂದ ಆಗೀಗ ಅವರಿಗು ನಮ್ಮ ಮೇಲೆ ಕರುಣೆ ಉಕ್ಕುತ್ತ ಇತ್ತೆನ್ನಿ. ದುಡ್ಡಿಸಿದುಕೊಂಡು ಗಾಡಿಯ ಕಡೆಗೆ ಓಟ. ಗಾಡಿಯೆಂದರೆ ಒಂದು ಸೈಕಲ್ಲು. ಅದರ ಮೇಲೆ ಭದ್ರವಾಗಿ ಬಿಗಿದು ಕಟ್ಟಿದ ಐಸ್ಕ್ಯಾಂಡಿಯ ನೀಲಿಪೇಂಟು ಬಳಿದ ಡಬ್ಬ. ಅದಕ್ಕೆ ಒಂದು ಬಿಗಿ ಮುಚ್ಚಳ. ಆ ಮುಚ್ಚಳವನ್ನ ಅವ ತೆಗೆಯುತ್ತಲೆ ನಾವು ಹಾಗು ನಮ್ಮಂಥ ಕುಳ್ಳಕುಳ್ಳಗಿನ ಸುಮಾರು ಮಕ್ಕಳು ಜಿಗಿಜಿಗಿದು ಒಳನೋಡಲು ಪ್ರಯತ್ನ ಮಾಡಲು ಶುರು. ’ಅಂದರ್ ಝಾಂಕ್ ನಕೋರೇ, ಬಾಲಾಂ ಪಡ್ಜಾತೀಂ!’ (ಒಳಗೆ ಇಣುಕ್ಬೇಡ್ರೋ, ತಲೆಕೂದಲು ಬಿದ್ದೋಗ್ತವೆ!) ಎಂದು ಉರ್ದುವಿನಲ್ಲಿ ಕೂಗಾಡುತ್ತ ಅವ ಡಬ್ಬದೊಳಗೆ ಕೈಯಿಳಿಸುತ್ತಿದ್ದ. ನಾಕಾಣೆಗೆ ಬರುತ್ತಿದ್ದ ಪೀಂಕು, ಕೇಂಪು, ಹಸೂರು, ಹಳೂದಿ ಬಣ್ಣದ ಕ್ಯಾಂಡಿಗಳು ಒಂದೊಂದಾಗಿ ಈಚೆ ಬರುವವು. ’ನಂಗೆ ಕೇಂಪು! ನಂಗೆ ಹಳೂದಿ ಬೇಕು! ಲಾಸ್ಟೈಮೂ ಇದೇ ಕಲರು, ನಂಗೆ ಬೇರೆ ಕೊಡು! ಇದು ಸಣ್ಣದು ಚೆನಾಗಿಲ್ಲ!’ ಎಂದು ಮುಂತಾಗಿ ನಾವು ಕೂಗಾಡುವುದು. ಅವ ಗಂಟುಮುಖ ಹಾಕಿಕೊಂಡು ನಮ್ಮ ಕೈಗಳಿಗೆ ನಮ್ಮ ಬಣ್ಣದ ಕ್ಯಾಂಡಿಗಳನ್ನು ವರ್ಗಾಯಿಸುವ.
ಆಮೇಲೆ ನಾವೆಲ್ಲರು ಜಗಲಿಯ ಮೇಲೆ ಒತ್ತೊತ್ತಾಗಿ ಕುಳಿತುಕೊಂಡು ಐಸ್ಕ್ಯಾಂಡಿ ಮೆಲ್ಲುವ ಕೆಲಸ ಆರಂಭಿಸುತ್ತಿದ್ದೆವು. ಕೆಲವರಿಗೆ ಕ್ಯಾಂಡಿಯನ್ನು ತುಂಡರಿಸಿ ಕಚಕಚನೆ ಅಗಿಯುವುದು ಇಷ್ಟವಿದ್ದರೆ ಕೆಲವರಿಗೆ ಅದನ್ನು ಚೀಪಿ ತಿನ್ನುವುದೇ ಆಸೆ. ಅದರ ಸಿಹಿ, ಗಂಟಲೊಳಗಿಳಿವ ಆ ತಣ್ಣಗಿನ ಐಸು ನಮ್ಮನ್ನೂ ಕೆಲಸಮಯದವರೆಗೂ ತಣ್ಣಗೆ ಇಡುತ್ತಿತ್ತು. ಕ್ಯಾಂಡಿ ತಿಂದಾದ ಮೇಲೆ ನಾಲಗೆ ಮರಗಟ್ಟಿ ನಮಗೆ ಅದು ದಪ್ಪವಾಗಿದೆಯೇನೊ ಅನ್ನಿಸಲು ಶುರುವಾಗುತ್ತ ಇತ್ತು. ನಾಲಗೆ ವಾಪಾಸು ಮಾಮೂಲು ಸ್ಥಿತಿಗೆ ಮರಳುವವರೆಗು ನಾವು 'ಲಲಲಲ' ಅಂದುಕೊಂಡು ಓಡಾಡುತ್ತಿದ್ದುದುಂಟು. ಇದಲ್ಲದೆ ನಮ್ಮೂರ ಬಸ್ಟಾಂಡಿನಲ್ಲಿ ಒಂದು ಐಸ್ಕ್ಯಾಂಡಿ, ಐಸ್ಕ್ರೀಮು, ಶರಬತ್ತು ಇತ್ಯಾದಿ ಮಾರುವ ಅಂಗಡಿ. ಅದನ್ನ ನಡೆಸುತ್ತಿದ್ದ ದಂಪತಿಗಳಿಗೆ ಮಕ್ಕಳಿರಲಿಲ್ಲ. ನಾನು ಅಲ್ಲಿಗೆ ಹೋದಾಗೆಲ್ಲ ನನಗೆ ವಿಶೇಷ ಆತಿಥ್ಯ. ನನಗೆ ಮಾತ್ರ ಒಂದು ಸ್ಕೂಪು ಹೆಚ್ಚು ಐಸ್ಕ್ರೀಮು, ಒಂದು ಹೆಚ್ಚಿಗೆ ಐಸ್ಕ್ಯಾಂಡಿ ಇಲ್ಲವೇ ಮಾಮೂಲಿಗಿಂತ ದೊಡ್ಡಗ್ಲಾಸಿನಲ್ಲಿ ಶರಬತ್ತು. ನನಗೆ ಗಮ್ಮತ್ತು. ಆಗ ಅವರ ಮಮತೆ ಅರ್ಥವೇ ಆಗುತ್ತಿರಲಿಲ್ಲ. ಈಗ ನೆನೆದರೆ...
ತಮ್ಮ ’ಯಾವುದು ಬೇಕೆ ತಗೊಳೆ ಮಾರಾಯ್ತಿ! ಅದ್ಯಾಕೆ ಹಾಗೆ ದುರುಗುಟ್ತಿದೀಯ?’ ಎಂದು ತಿವಿದ. ಮಕ್ಕಳೆಲ್ಲ ನನ್ನನ್ನೆ ನೋಡುತ್ತ ಇದ್ದವು. ನಾನು ಕಿತ್ತಳೆ ಬಣ್ಣದ ಒಂದು ಕ್ಯಾಂಡಿ ಆಯ್ದುಕೊಂಡೆ. ಬಾಯಿಗಿಟ್ಟು ಚಪ್ಪರಿಸಿದೆ. ಅದೇ ಹಳೆಯ ಹುಳಿಸಿಹಿ ರುಚಿ ಬಾಯಲ್ಲಿ ನಲಿದಾಡಿತು. ಮೋಕ್ಷ ಅಂದರೆ ಇದೇನೆ ಅನ್ನಿಸಿಬಿಟ್ಟಿತು. ನನ್ನವ ಇದ್ದಿದ್ದರೆ ಹೈಜೀನಿನ ಬಗ್ಗೆ ಒಂದು ಉದ್ದದ ಭಾಷಣ ಕೇಳಬಹುದಿತ್ತು ಅಂದುಕೊಂಡೆ. ತಮ್ಮ ನನ್ನ ಮುಖವನ್ನೆ ನೋಡುತ್ತ ಇದ್ದವ ಇದ್ದಕ್ಕಿದ್ದ ಹಾಗೆ ಐಸ್ಕ್ಯಾಂಡಿಯವನ ಕಡೆ ತಿರುಗಿ ’ನಂಗೂ ಒಂದು ಕೊಡಿ. ಯೆಲ್ಲೋ ಕಲರು.’ ಅಂದ.
(ಮೊನ್ನೆ ಸುಮಾರು ವರ್ಷದ ಮೇಲೆ ಚಂದ್ರಶೇಖರ್ ಅಂಕಲ್ ಸಿಕ್ಕಿದ್ರು. ಅವ್ರು ಯಾರಪ್ಪಾ ಅಂದ್ರೆ ನಮ್ಮಪ್ಪನ ದೋಸ್ತಿ. ನಾನೂ ಊರ್ಕಡೆ ಹೋಗೇ ಸುಮಾರು ಎಂಟು ವರ್ಷಾನೇ ಆಗೋಯ್ತು ಅಂತ ನೆನಪು ಬಂತು.. ಕಾಫಿನಾಡಿನ ಸ್ಟೈಲಿನಲ್ಲಿ  ’ಹೇಗಿದೆ ಅಂಕಲ್ ಕಾಫಿ ಈಸರ್ತಿ?’ ಅಂತ್ಕೇಳಿದೆ. ’ಕುಯ್ಸಿ ಒಣಗ್ಲಿಕ್ ಹಾಕಿದೆ. ಮಳೆ ಬಂದ್ರೆ ಎಲ್ಲ ತೋಯುತ್ತಲ್ಲ!’ ಅಂದ್ರು. ಆಗ ನೆನಪಾಗಿದ್ದು ಸಿಕ್ಕಿದ ಹಾಳೆಯಲ್ಲಿ ಮೂಡಿಸಿ ನಿಮಗೆ ಕೊಟ್ಟಿದೀನಿ. ಒಂದು ಕಪ್ ಕಾಫಿಯ ಜತೆ ಹೀರಿಕೊಳ್ಳಿ.)
ಕಾಫಿ ಬಯಲು. ಅಂದರೆ ಹಿತ್ತಲು ಚಾಚುವಷ್ಟಕ್ಕೂನೂ, ಅಗೋ ಆ ಪಪ್ಪಾಯಿಮರದವರೆಗೂ ಉದ್ದೂಕೆ ಹರವಿದ ಕಾಫಿಹಣ್ಣುಗಳು. ಇನ್ನೂ ಮೂಗಿಗೆ ಅಡರುವ ಹಣ್ಣಿನ ಕಂದುಪರಿಮಳ. ಇನ್ನೊಂದುಚೂರು ಒಣಗಿದ ಮೇಲೆ ನಮಗೆ ಗಮ್ಮತ್ತು. ಅದರ ಮೇಲೆ ’ಕುವ್ವೋ!! ಕುಲಲಲಲಲೋ’ ಎಂದು ಗಂಟಲು ಹರಿವ ಹಾಗೆ ಕೂಗುತ್ತ ಓಡಿಹೋಗಬೇಕು, ಧಡಂ ಎಂದು ಜಾರಿಬೀಳಬೇಕು. ತರಚುಗಾಯ, ಮಂಡಿಪೆಟ್ಟು (ಮಂಡೆಪೆಟ್ಟು ಅಲ್ಲ!!) ಮಾಡಿಕೊಳ್ಳದಲೆ ಸಂಜೆ ಬಚ್ಚಲುಮನೆಗೆ ವಾಪಾಸು ಬಂದರೆ ಅವಮಾನ. ಕೆಪಿಜಿ ಮೇಷ್ಟ್ರ ಮಡದಿ ಹೂವಮ್ಮನವರು ’ಹಯ್ಯೊ ನಿಮ್ಮನ್ನ ನೋಡುದ್ರೆ ತಲ್ಕೆಟ್ಟು ಮೊಸರಾಗ್ತದೆ!!' ಎಂದು ಆರ್ಭಟಿಸುತ್ತ ಇದ್ದರು ಅದನ್ನ ಜಮಾಖರ್ಚಿಗೆ ತೆಗೆದುಕೊಳ್ಳುವವರು ಯಾರು? ನಾವುಗಳಿಗೆ ಕಾಫಿಹಣ್ಣು ಕೊಯ್ಯುವ ಸೀಸನ್ನು ಬಂದರೆ ಬೇರೇನಾದರು ಕಣ್ಣಿಗೆ ಬಿದ್ದರೆ ತಾನೆ?
ಸುಮ್ಮನೆ ಬರುತ್ತ ಇರಲಿಲ್ಲ ಕಾಫಿ ಸೀಸನ್ನು. ಮೊದಲು ಕಾಫಿಹೂವಿನ ಪರಿಮಳದೊಂದಿಗೆ ಶುರುವಾದದ್ದು ಒರಳೊಳಗಿನ 'ಕಾಪಿ' ಕುಟ್ಟುವ ಪರಿಮಳದ ಜತೆಗೇ ಮುಗಿಯುವ ವಿಶೇಷ ಋತು ಅದು. ಒಂದು ಬೆಳಗ್ಗೆ ನಾವು ಎದ್ದಾಗ ಇದ್ದಕ್ಕಿದ್ದ ಹಾಗೆ ಕಾಫಿಗಿಡಗಳ ಕಡುಹಸಿರು, ತಿಳಿಹಸಿರುಗಳ ನಡುವೆ ಬೆಣ್ಣೆಮುದ್ದೆಗಳು ಕಾಣಿಸಿಕೊಂಡು ನಮಗೆ ವಿಸ್ಮಯ. ಮಾರನೆದಿನ ಕಳೆಯುವಷ್ಟರಲ್ಲಿ ಎಲ್ಲ ಹೂವುಗಳೂ ಅರಳಿಕೊಂಡು ತಲೆತಿರುಗುವ ಹಾಗೆ ಘಮ. ಹೂವುಗಳಿಗೆ ಸುತ್ತುಹಾಕುವ ಜೇನು ಹುಳ, ಕಣಜ, ಇರುವೆ, ಪುಟ್ಟ ಹಕ್ಕಿಗಳು ಇನ್ನೇನೇನೊ. ನಾವು ಅವನ್ನು ಮುಡಿದುಕೊಳ್ಳಲು ಯತ್ನಿಸಿದರೆ ಅಮ್ಮನ ಕೈಲಿ ಬೈಸಿಕೊಳ್ಳಬೇಕಾಗಿತ್ತು. ಯಾರಾದರು ನಾವು ಅವನ್ನು ಮೂಸುವುದನ್ನು ನೋಡಿದರು ’ಹುಳಪಳ ಇರ್ತವೆ, ನಿಂ ಮೂಗೋಳಗೆ ಹೊಕ್ಕು ಸೀದ ಮೆದುಳಿಗೆ ಹೋಗಿ ಅಲ್ಲಿ ಕೊರೆದು..’ ಎಂದೆಲ್ಲ ಅಸಹ್ಯ ಚಿತ್ರಣ ನೀಡಿ ನಮ್ಮನ್ನು ಜಾಗ ಬಿಟ್ಟೋಡುವ ಹಾಗೆ ಮಾಡುವಲ್ಲಿ ಯಶಸ್ವಿಯಾಗುತ್ತಿದ್ದರು. ಒಟ್ಟಿನಲ್ಲಿ ಕಾಫಿ ಹೂವುಗಳು ಕಾಣಿಸಿಕೊಂಡಾಗ ನಮಗೆ ಸಂಭ್ರಮ. ನಮ್ಮ ಕಾಯುವಿಕೆ ಆಗಲಿಂದಲೆ ಶುರು. ಕಾಫಿಕಾಯಿ ಹಸುರುಬಣ್ಣದಿಂದ ಕೆಂಪಗೆ ಆಗತೊಡಗಿದ ಹಾಗೆ ನಮ್ಮ ತಾಳ್ಮೆ ಕೂಡ ಕಡಿಮೆ ಆಗುತ್ತಿದ್ದುದು ಎಲ್ಲರ ಗಮನಕ್ಕೆ ಬರುತ್ತಿತ್ತು. ಅಮ್ಮ ಒಳಗೆ ಕಟ್ಟಿಟ್ಟ ಗೋಣಿಚೀಲಗಳನ್ನು ಬಿಸಿಲಿಗೆ ಹರವಿ, ಅಂಗಳಕ್ಕೆ ಸಗಣಿ ಬಳಿಸಿ ಒರಳನ್ನು ಅಂಗಳದ ಮಧ್ಯಕ್ಕೆ ಪ್ರತಿಷ್ಠಾಪನೆ ಮಾಡಿಸುತ್ತ ಇದ್ದರು.
ಕಾಫಿಹಣ್ಣು ಕೀಳುವ ಸೌಭಾಗ್ಯ ಎಲ್ಲರಿಗು ಲಭ್ಯವಾಗುತ್ತಿರಲಿಲ್ಲ. ನಾವು ಏನಿದ್ದರು ಪುಟ್ಟಪುಟ್ಟ ಚೀಲಗಳನ್ನು ಹಿಡಿದುಕೊಂಡು ಕೆಳಗೆ ಬಿದ್ದ ಹಣ್ಣುಗಳನ್ನು ಜಾಗ್ರತೆಯಾಗಿ ಆರಿಸಿಡಲು ರೆಡಿಯಾಗಿರಬೇಕಿತ್ತು. ಬೆಳಕೇ ಒಳನುಗ್ಗದ ಕಾಫಿತೋಟದ ಪುಟ್ಟಪುಟ್ಟ ಮರಗಳ ಗೆಲ್ಲುಗಳ ಮೇಲೆ ತಲೆಗೆ ಬಟ್ಟೆಸುತ್ತಿಕೊಂಡ ಅಮ್ಮನೂ ಇತರ ಆಳುಗಳೂ ಹತ್ತಿಕೂತು ಸರಸರನೆ ರಾಶಿರಾಶಿ ಹಣ್ಣುಕೀಳುವದನ್ನು ನೋಡುತ್ತ ನಾವು ಧನ್ಯರಾಗುತ್ತಿದ್ದೆವು. ಹಣ್ಣುಗಳನ್ನು ಹೆರಕುತ್ತ ನಮ್ಮ ಕೈಯಿಗಳೂ ಅಂಟಂಟಾಗಿಬಿಡುತ್ತಿದ್ದವು. ಮಧ್ಯಾಹ್ನ ಊಟಮುಗಿದ ಮೇಲೆ ಆಳುಗಳ ಕೈಗಳು ಸ್ವಲ್ಪ ನಿಧಾನವಾದರೂ ನಮಗೆ ಅದೇ ಉತ್ಸಾಹ. ನಾವೆಲ್ಲ ಮಕ್ಕಳು ಸೇರಿ ಒಂದು ಮರವನ್ನಾದರು ನಮ್ಮ ಸುಪರ್ದಿಗೆ ಒಪ್ಪಿಸಬೇಕೆಂದು ಹಠಮಾಡಲು ಆರಂಭಿಸಬೇಕೆಂದರೆ ಅದು ಸುಸಮಯ. ಅಮ್ಮ ಆಳುಗಳೊಡನೆ ಸಮಾಲೋಚನೆ ನಡೆಸಿ ದಪ್ಪಕಾಂಡದ ಅಷ್ಟೇನೂ ಹಣ್ಣುಗಳಿರದ ಪುಟ್ಟಮರವೊಂದನ್ನು ಆಯ್ಕೆಮಾಡುವರು. 'ತಲೆ ಒಡಕೋಬೇಡಿ!' ಎಂಬ ಎಚ್ಚರಿಕೆ ಬೇರೆ. ಆಮೇಲೆ ನಾವು ಹೆಮ್ಮೆಯಿಂದ ಮರಹತ್ತಿ ಆಕಾಶ ಕೆಂಪಾಗುವವರೆಗು ಆ ಮರವನ್ನೆ ತಬ್ಬಿಕೊಂಡು ಹಣ್ಣುಕೀಳುತ್ತ ಕುಳಿತಿರುವುದು.
ಒಣಗಿದ ಕಾಫಿಹಣ್ಣುಗಳನ್ನು ಕುಟ್ಟುವ ಕೆಲಸ ಲಕ್ಷ್ಮಿಯದು ಮತ್ತು ಸಗೀರಮ್ಮನದು. ಈರ್ವರೂ ಒಂದಿಷ್ಟು ಕಾಫಿಯನ್ನು ಒರಳಿಗೆ ಹಾಕಿ ಕೈಕೈ ಬದಲಾಯಿಸಿ ಒನಕೆ ಕುಟ್ಟುತ್ತ ಇದ್ದರೆ ನಮಗೆ ಅದೇನೊ ಒಂದು ನೃತ್ಯದಂತೆ ಕಾಣುತ್ತ ಇತ್ತು. ಅದರ ಜತೆಗೆ ಲಕ್ಷ್ಮಿಯ ನಗುವ ಮೂಗುನತ್ತು, ಎಲಡಿಕೆ, ಕಾಫಿಗಳ ಸಮಾರಾಧನೆ, ಗುಸುಗುಸು ಮಾತುಕತೆ, ಸಗೀರಮ್ಮನ ಒರಟು ರಟ್ಟೆಗಳು, ಕಾಫಿಬೀಜ ಕೇರುವ ಸದ್ದು, ಸಾರಿಸಿದ ಹಿತ್ತಲ ಅಂಗಳ - ಎಲ್ಲ ಸೇರಿಕೊಂಡು ಒಂದುರೀತಿ ಹಬ್ಬದ ವಾತಾವರಣ. ಎಲ್ಲ ಮುಗಿದು ಕಾಫಿಬೀಜಗಳು ರೆಡಿಯಾಗಿ ಗೋಣಿಚೀಲ ಸೇರುವಾಗ ನಮಗೆ ಏನೊ ಕಳಕೊಂಡಹಾಗೆ. ನಾನು ಹಿತ್ತಲಂಚಿನ ನನ್ನ ಕಾಫಿಗಿಡದ ಕೊಂಬೆಯ ಮೇಲೆ ವಿರಹಿಯ ಹಾಗೆ ಸುಮ್ಮನೆ ಪುಸ್ತಕ ಹಿಡಿದು ಜೀಕಾಡುತ್ತ ಕೂರುವದೋ, ತೋಟದ ಕಾಲುದಾರಿಯಲ್ಲಿ ಅಡ್ಡಾಡುವದೊ ಮಾಡಿಕೊಂಡಿರುತ್ತಿದ್ದೆ.
ನಾನು ಹೈಸ್ಕೂಲು ಓದುತ್ತಿದ್ದಾಗಲೆ ಕಾಫಿಗಿಡಗಳಿಗೆ ಏನೊ ರೋಗ ತಗುಲಿ ಎಲ್ಲವನ್ನೂ ಕಿತ್ತುಬಿಸಾಡಬೇಕಾಯಿತು. ಅಪ್ಪನಿಗೆ ಏಕೊ ಅವುಗಳ ಮೇಲೆ ಬರಬಾರದ ಬೇಸರ ಬಂತು. ಸರಿ. ಪೂರ್ತಿ ತೆಂಗಿನ ಸಸಿಗಳನ್ನು ನೆಡಿಸಿದರು.
ಚಿತ್ರಕೃಪೆ: www.yoppi.com
ಮಸಳಿ ಡಾಕ್ಟರು ನನ್ನ ಗದ್ದಕ್ಕೆ ಹೊಲಿಗೆ ಹಾಕಿದ ಪ್ರಸಂಗವನ್ನ ಇನ್ನಾವಾಗಲಾದರು ಹೇಳುವೆ. ಆದರೆ ಆ ದಿನದಿಂದ ನನಗೆ ಶ್ರೀಮಾನ್ ಮಸಳಿಯವರು ಮಾರ್ಕೆಟಿನ ಕಟುಕನಂತೆಯೂ, ಸರ್ಕಾರೀ ಆಸ್ಪತ್ರೆ ನನ್ನಂಥ ಬಡಪಾಯಿ ಕುರಿಗಳನ್ನು ಬಲಿಕೊಡಲು ಕಟ್ಟಿರುವ ಕಸಾಯಿಖಾನೆಯಂತೆಯೂ ಕಾಣತೊಡಗಿದ್ದರಲ್ಲಿ ಯಾವ ವಿಶೇಷವೂ ಇಲ್ಲ. ಉತ್ತರ ಕರ್ನಾಟಕದವರಾದ ಅವರ ಹೆಸರನ್ನು ಸರಿಯಾಗಿ ಹೇಳಲು ಬರದ ನಮ್ಮೂರಿನವರು ಅವರನ್ನು 'ಮೊಸಳೆ ಡಾಕ್ಟರು' ಎಂದೇ ಕರೆಯುತ್ತಿದ್ದುದು. ಆಗ ಬಹಳಷ್ಟು ಮಕ್ಕಳು ಡಾಕ್ಟರಲ್ಲಿಗೆ ಹೋಗಬೇಕೆಂದರೆ ಬೆಚ್ಚಿಬೀಳುವ ಪರಿಸ್ಥಿತಿ. ಈಗ ಮಕ್ಕಳ ಪ್ರತಿಯೊಂದು ಕಾಯಿಲೆಗೂ ಸಪರೇಟು ತಜ್ನರಿದ್ದಾರೆ. ಅವರೆಲ್ಲ ಇಂದಿನ ನವೀನ ಮ್ಯಾನೇಜ್ಮೆಂಟ್ ವಿಧಾನಗಳನ್ನು ಬಳಸಿ ಮಕ್ಕಳಲ್ಲಿ 'ತಾವು ಬಂದಿರುವುದು ಡಾಕ್ಟರ ಬಳಿಗಲ್ಲ, ಯಾರೊ ನೆಂಟರ ಮನೆಗೆ' ಎಂಬ ಭ್ರಮೆ ಮೂಡಿಸಿ ಚಿಕಿತ್ಸೆ ನೀಡಿಬಿಡುತ್ತಾರೆ. ಆಗ ನಮಗೆ ಆ ಸೌಭಾಗ್ಯ ಲಭ್ಯವಿರಲಿಲ್ಲ. ಮಸಳಿಯವರು ಬಹಳ ಒಳ್ಳೆಯ ವೈದ್ಯರೆಂದು ಹೆಸರುವಾಸಿಯಾಗಿದ್ದರು. ಹಾಗಾಗಿ ನಮ್ಮ ತುಡುಗುಬುದ್ಧಿಯ ದುಷ್ಪರಿಣಾಮಗಳಾದ ಕಾಯಿಲೆಗಳು ತೋರಿದಾಗ ಮಸಳಿಯವರನ್ನು ಬಿಟ್ಟು ಬೇರಾವ ದಾರಿಯೂ ಇರಲಿಲ್ಲ. ಆಸ್ಪತ್ರೆಯ ಪರೀಕ್ಷಾ ಕೋಣೆಯಲ್ಲಿ ಕಾಣುತ್ತಿದ್ದ ಚಿತ್ರವಿಚಿತ್ರ ಪರಿಕರಗಳು, ಅಲ್ಲಿಯ ವಾತಾವರಣ, ಎಲ್ಲಕಿಂತ ಹೆಚ್ಚಾಗಿ ಸ್ಟೀಲು ಡಬ್ಬವೊಂದರಲ್ಲಿ ಕೊತಕೊತ ಕುದಿಯುತ್ತಿದ್ದ ಸಿರಿಂಜುಗಳು ನಮ್ಮಲ್ಲಿ ಎಲ್ಲಿಲ್ಲದ ಭಯ ಮೂಡಿಸುತ್ತ ಇದ್ದವು. ನಾನಂತು ಆಸ್ಪತ್ರೆಯ ಬಳಿಯ ದಾರಿಗಳನ್ನು ಆದಷ್ಟು ಕಡಿಮೆ ಬಳಸುತ್ತಿದ್ದೆ.
ಹೀಗೆಲ್ಲ ನಾವು ಆಸ್ಪತ್ರೆಯಿಂದ ದೂರವಿರಲು ಯತ್ನಿಸುತ್ತ ಇರುವಾಗ ಒಂದು ಸುಂದರ ಮುಂಜಾವ ನನಗೆ 'ಕಣ್ಣಾಕುಟಿಗೆ' ಎಂಬ ಪುಟ್ಟ ತೊಂದರೆ ಅಮರಿಕೊಂಡಿತು. ಇದು 'ಮದ್ರಾಸ್ ಐ' ಅಲ್ಲ. ಇದರಲ್ಲಿ ಕಣ್ಣಿನ ಯಾವುದಾದರು ಭಾಗ ಊದಿಕೊಂಡು ಹಿಂಸೆ ನೀಡಲು ಶುರುವಿಡುತ್ತದೆ. ಈ ಸಾರಿ ನನ್ನ ಕಣ್ಣೊಳಗೇ ಊತವಾಗಿ ಅಮ್ಮ ನನ್ನನ್ನು 'ಡಾಕ್ಟರ ಹತ್ರ ಹೋಗಿಬಾ' ಎಂದು ತಂಗಿಯನ್ನು ಜತೆಮಾಡಿ ಕಳಿಸಿದರು. ನಾನು ಆಸ್ಪತ್ರೆಗೇ ಹೋದೆನೆಂದು ಖಚಿತಪಡಿಸಬೇಕಲ್ಲ! ನಾವು ಒಬ್ಬರನ್ನೊಬ್ಬರು ದಾರಿಯುದ್ದಕ್ಕು ತಳ್ಳಾಡಿಕೊಂಡು ಬರುತ್ತ ಇರುವಾಗ ತಂಗಿಯ ಸ್ನೇಹಿತೆಯೊಬ್ಬಳು ಸಿಕ್ಕಿದಳು. ಎಷ್ಟಾದರು ವಯಸ್ಸಿನಲ್ಲಿ ಸಣ್ಣವು. ಅವುಗಳ ಹತ್ತಿರ ಏನು ಮಾತು? ಅವರನ್ನು ಮಾತನಾಡಲು ಬಿಟ್ಟು ನಾನು ಆಸ್ಪತ್ರೆಯ ಕಾಂಪೌಂಡಿನೊಳಗೆ ಓಡಿದೆ. ಸಣ್ಣಗೆ ಮಳೆ ಹನಿಯಲು ಆರಂಭವಾಗಿತ್ತು. ಆಲ್ಲಿಯೆ ಒಂದು ಚಕ್ಕಡಿಯ ಸುತ್ತ ಸುಮಾರು ಜನರು ಸೇರಿಕೊಂಡಿದ್ದರು. ನಾನೂ ಕುತೂಹಲದಿಂದ ಇಣುಕಿದೆ. ಅಷ್ಟೆ.
ನನ್ನ ಜೀವಮಾನದಲ್ಲಿಯೆ ಅಲ್ಲಿಯತನಕ ಕಂಡಿರದಾಗಿದ್ದ ಅತ್ಯಂತ ಭಯಾನಕ ದೃಶ್ಯ ಅದು. ಚಾಪೆಯ ಮೇಲೆ ಮಲಗಿಸಿದ್ದ ಹೆಂಗಸೊಬ್ಬಳನ್ನು ಜನರು ಚಕ್ಕಡಿಯಿಂದ ಕೆಳಗಿಳಿಸುತ್ತಿದ್ದರು. ಆ ಹೆಂಗಸಿನ ಮೈಯ ಪ್ರತಿಯೊಂದು ಇಂಚೂ ಸುಟ್ಟುಹೋಗಿತ್ತು. ಆಕೆಯ ಅರೆಪ್ರಜ್ನೆಯ ನರಳಾಟ ಕೇಳಲಾಗುತ್ತಿರಲಿಲ್ಲ. ಆಕೆಯ ಮೈಮೇಲೊಂದು ಹತ್ತಿಯ ಬಟ್ಟೆಯನ್ನು ಸುತ್ತಲಾಗಿತ್ತು. ಮೈಯಿಂದ ಏನೇನೋ ದ್ರವಗಳು ಒಸರುತ್ತಿದ್ದವು. ಕೂದಲೆಲ್ಲ ಸುಟ್ಟುಹೋಗಿ ವಿಕಾರವಾಗಿ ಕಾಣುತ್ತಿದ್ದ ಆಕೆಯ ಬಳಿ ಕೈಕಾಲು ಮಾತ್ರ ಸುಟ್ಟಿದ್ದ ವ್ಯಕ್ತಿಯೊಬ್ಬ ಕುಳಿತು ಏನೇನೋ ಬಡಬಡಿಸುತ್ತಿದ್ದ. ಜನರು ಆತನನ್ನು ಸಂತಯಿಸಲು ಪ್ರಯತ್ನಿಸುತ್ತಿದ್ದರೆ ಆತ ಪ್ರಪಂಚದ ಅರಿವೇ ಇಲ್ಲದಹಾಗೆ ಆಕೆಯನ್ನೆ ದಿಟ್ಟಿಸುತ್ತ ಕುಳಿತುಬಿಟ್ಟಿದ್ದ. ಆತನ ಮಾತುಗಳು ಆಕೆಯ ರೋದನದಷ್ಟೆ ಅಸ್ಪಷ್ಟವಾಗಿದ್ದವು. ಅವಕ್ಕೆ ಅರ್ಥವೇ ಇರಲಿಲ್ಲ. ಇದ್ದರೂ ಅದು ನಮ್ಮನ್ನೆಲ್ಲ ಮೀರಿದ್ದು ಅನ್ನಿಸುವ ಹಾಗಿತ್ತು. ಅಲ್ಲಿದ್ದ ಯಾರನ್ನೊ ಕೇಳಿದೆ -’ ಏನಾಯ್ತು? ’. ಅವರು ಸೊಟ್ಟಮುಖ ಮಾಡಿದರು.’ಚೆನ್ನಾಗೇ ಇದ್ರು. ಅದೇನಾಯ್ತೊ? ಇವುಳು ಸೀಮೆಣ್ಣೆ ಹಾಕ್ಕೊಂಡು ಸುಟ್ಕೊಂಡ್ಲು. ಇವ್ನು ಉಳ್ಸೋಕೋದ. ಇವ್ನೂವೆ ಸುಟ್ಕೊಂಡ. ಬೇಕಿತ್ತ ಇದು?’
ಸುಮ್ಮನೆ ಒಳಹೋದೆ. ಡಾಕ್ಟರು ಒಳಬರಲು ಸನ್ನೆ ಮಾಡಿದರು. ಕಣ್ಣು ತೋರಿಸಿ, ಇಂಜೆಕ್ಷನ್ ಕೊಡ್ತೀರ? ಕೇಳಿದೆ. ಡಾಕ್ಟರು ನಕ್ಕು ಆಯಿಂಟ್ಮೆಂಟು ಕೊಟ್ಟು ಕಳಿಸಿದರು. ಹೊರಬಂದರೆ ಮತ್ತದೇ ಸುಟ್ಟವಾಸನೆ. ನರಳಾಟ. ಡಾಕ್ಟರು ’ಇಲ್ಲಿ ಆಗಲ್ಲ. ಬರ್ನ್ಸ್ ಪರ್ಸೆಂಟೇಜು ಜಾಸ್ತಿಯಿದೆ. ಮಣಿಪಾಲಿಗೆ ಕರ್ಕೊಡೋಗಿ. ನಾನು ಲೆಟರ್ ಕೊಡ್ತೀನಿ’ ಎನ್ನುತ್ತ ಇದ್ದರು. ಸುಟ್ಟುಕೊಂಡವಳ ಗಂಡ ಅಂಗಲಾಚುತ್ತಿದ್ದ. ತನ್ನ ಕೈಕಾಲುಗಳ ಸುಟ್ಟಗಾಯ ತೋರಿಸಿ ಏನೇನೊ ಬಡಬಡಿಸುತ್ತಿದ್ದ. ಪ್ರಯೋಜನವಿಲ್ಲವೆಂದು ತಿಳಿದಿದ್ದರೂ...
’ಇಲ್ಯಾಕಮ್ಮ ನಿಂತಿದೀಯ? ಇದೆಲ್ಲ ಮಕ್ಕಳು ನೋಡ್ಬಾರ್ದು. ನಡಿನಡಿ’ ಗುರುತಿನ ನರ್ಸೊಬ್ಬರು ಬೈದರು. ಹೊರಬಂದು ತಂಗಿಯನ್ನೆಳೆದುಕೊಂಡು ಹೊರಟೆ. ಆಕೆಗೆ ಅದಾವುದೂ ಕಾಣಲಿಲ್ಲವೆಂಬ ವಿಚಿತ್ರ ಸಮಾಧಾನ.
ಈವತ್ತು ಬೆಳಜಾವ ಆಸ್ಪತ್ರೆಯ ಕನಸು. ಬಿಳಿಬಿಳಿ ಆಸ್ಪತ್ರೆ. ತಿಳಿಹಳದಿ ಬಣ್ಣದ ಕಾಂಪೌಂಡು. ಕಾಂಪೌಂಡಿನ ಕಪ್ಪುಮಣ್ಣಿನ ಮಳೆತೇವದ ಭೂಮಿ. ಭೂತಾಕಾರದ ಮರಗಳು. ಬಿಳಿಬಟ್ಟೆಯ ನರ್ಸುಗಳು. ಮಸಳಿ ಡಾಕ್ಟರು. ಉದ್ದುದ್ದ ಕಾರಿಡಾರುಗಳು. ಕಲ್ಲುಮೆಟ್ಟಿಲುಗಳು. ಕುಂಟುಗಾಲಿನ ಕಾಂಪೌಂಡರು. ಬಿಳಿಬಿಳಿ ಹಾಸಿಗೆಗಳು. ಕೆಂಪು ಕಂಬಳಿಗಳು. ಪಾಚಿಯ ವಾಸನೆ... ಎಲ್ಲವೂ ಆಗ ಇದ್ದಂತೆಯೆ. ನಾನು ಅಲ್ಲೆಲ್ಲ ಓಡಾಡುತ್ತಿರುವಂತೆ..
ಎಚ್ಚರವಾಯಿತು. ಎರಡು ನಿಮಿಷ ಸುಮ್ಮನೆ ಕೂತುಕೊಂಡೆ. ಯಾಕೊ, ಮಸಳಿ ಡಾಕ್ಟರು ನೆನಪಾಗಿ ನಕ್ಕೆ. ಅವರು ನನ್ನ ಗದ್ದಕ್ಕೆ ಹಾಕಿದ ಹೊಲಿಗೆಯ ಗುರುತನ್ನೊಮ್ಮೆ ಮುಟ್ಟಿಕೊಂಡೆ. ಬಾಯಾರಿದ ಹಾಗೆನಿಸಿತು. ಅಂದು ಸುಟ್ಟುಕೊಂಡಿದ್ದ ಹೆಂಗಸು ಏನಾದಳೊ ಎಂದುಕೊಳ್ಳುತ್ತ ನೀರು ಗುಟುಕರಿಸಿದೆ.
ಚಿತ್ರ: 'Ward in the hospital in Arles' from www.vggallery.com
ದೀಪಾವಳಿಯ ಹೊತ್ತಿಗೆ ಬೇರೆಲ್ಲ ಕಡೆ ಮಳೆ ಬಿಟ್ಟಿದ್ದರು ಮಲೆನಾಡಿನಲ್ಲಿ ಇನ್ನೂ ಜಿಟಿಜಿಟಿ ಅನ್ನುತ್ತಿತ್ತು. ಆದರೂ ಮಳೆಗಾಲದ ಬೇಸರವೆಲ್ಲ ದೀಪಾವಳಿಯ ಜತೆಗೇ ತೊಳೆದುಹೋಗುತ್ತದೇನೊ ಅನ್ನುವಷ್ಟು ಸಡಗರ ಎಲ್ಲ ಕಡೆ ಆವರಿಸಿಕೊಳ್ಳುವುದು. ನಮ್ಮ ಮನೆಯಲ್ಲಿ ಹಬ್ಬದ ಆಚರಣೆಯಿಲ್ಲದಿದ್ದರು ದೀಪಾವಳಿಯ ಆಕರ್ಷಣೆಯಿಂದ ಹೊರತಾಗಿ ಉಳಿಯುವುದು ನಮಗೆ ಸಾಧ್ಯವಾಗುತ್ತಲೆ ಇರಲಿಲ್ಲ. ಲಕ್ಷ್ಮೀಪೂಜೆಯ ದಿನ ಪೇಟೆಯೆಲ್ಲ ಸುತ್ತುವ ಕೆಲಸ. ಅಂಗಡಿಗಳಲ್ಲಿ ಹಂಚಲ್ಪಡುವ ಬೂಂದಿ, ಲಾಡು, ಪೇಡಾ ಇತ್ಯಾದಿ ಸಿಹಿತಿಂಡಿಗಳನ್ನು ಒಂದು ಪ್ಲಾಸ್ಟಿಕ್ ಚೀಲದಲ್ಲಿ ಸೇರಿಸಿಕೊಳ್ಳುವುದು. ಎಲ್ಲ ತಿರುಗಾಟ ಮುಗಿದ ಮೇಲೆ ಒಂದೆಡೆ ಕೂತು ಅವನ್ನೆಲ್ಲ ತಿಂದುಮುಗಿಸಿ ಹೊಟ್ಟೆನೋವೆಂದು ಓಡಾಡುವುದು. ಬಲಿಪಾಡ್ಯಮಿಯ ಬೆಳಗ್ಗೆ ನಮ್ಮ ಸವಾರಿ ಮೇಲಿನ ಬೀದಿಯ ಕಡೆ ತಿರುಗುತ್ತಿತ್ತು. ಅಲ್ಲಿ ಮೇಷ್ಟರೊಬ್ಬರ ಮನೆ. ಅವರ ಮಕ್ಕಳಿಬ್ಬರು ನಮ್ಮಂತೆಯೆ ತಂಟೆಕೋರರಾಗಿ ನಮ್ಮ ದೋಸ್ತಿಗಳಾಗಿದ್ದರು. ಅವರ ಮನೆಯಲ್ಲಿ ದನ, ಎಮ್ಮೆಗಳ ಕೊಟ್ಟಿಗೆಯೊಂದಿದ್ದು ಸುತ್ತಮುತ್ತಲ ಮನೆಗಳಿಗೆಲ್ಲ ಅವರ ಮನೆಯಿಂದಲೆ ವರ್ತನೆ ಹಾಲು ಸರಬರಾಜಾಗುತ್ತಿತ್ತು. ಬಲಿಪಾಡ್ಯಮಿಯ ದಿನ ಹಸು, ಎಮ್ಮೆಗಳಿಗೆ ವಿಶೇಷ ಪೂಜೆ ನಡೆಯುವ ಸಮಯದಲ್ಲಿ ನಾವು ಅಲ್ಲಿ ಹಾಜರು. ದನಕರುಗಳ ಕತ್ತಿಗೆ ಹಾಕಿದ ಹಾರ, ಅವುಗಳ ಮೈಮೇಲೆ ಇಡಲಾಗುತ್ತಿದ್ದ ಬಣ್ಣಬಣ್ಣದ ಸೊನ್ನೆಯ ಆಕಾರದ ವಿನ್ಯಾಸ, ಪೂಜೆಯ ಸಮಯದಲ್ಲಿ ಆರತಿ ತಟ್ಟೆಯ ಬೆಂಕಿ ನೋಡಿ ಹಸು ಎಮ್ಮೆಗಳು ನಡೆಸುವ ಧಾಂಧಲೆ - ಇವನ್ನೆಲ್ಲ ನಾವು ಯಾವುದೆ ಕಾರಣಕ್ಕು ತಪ್ಪಿಸುತ್ತಿರಲಿಲ್ಲ. ಮುದ್ದಾಗಿ ಕಾಣುತ್ತಿದ್ದ ಹಸುಗಳನ್ನು ಮುಟ್ಟಿ ಮುಟ್ಟಿ ನೋಡುವುದೇ ಒಂದು ಸಂತಸ. ಇನ್ನು ಪಟಾಕಿಗಳ ಕತೆ ಹೇಳಬೇಕೆ? ದೀಪಾವಳಿಗೆ ಇನ್ನು ವಾರವಿದೆ ಎನ್ನುವಾಗಲೆ ಚಠಪಠ ಎನ್ನುವ ಸದ್ದುಗಳು ಊರ ಗಲ್ಲಿಗಲ್ಲಿಗಳಲ್ಲಿ ಮೊಳಗಲು ಶುರು.
ಹಬ್ಬದ ಮಧ್ಯಾಹ್ನ ನಮ್ಮ ಮನೆಗೆ ಸ್ನೇಹಿತರ ಮನೆಗಳಿಂದ ಹೋಳಿಗೆ, ಕರ್ಜಿಕಾಯಿ, ಕಜ್ಜಾಯ, ಶಂಕ್ರಪೊಳೆ ಇತ್ಯಾದಿ ತಿಂಡಿಗಳು ಕಳುಹಿಸಲ್ಪಡುತ್ತಿದ್ದವು. ಊಟ ಮುಗಿಸಿದ ನಂತರ ನಾವು ಮಕ್ಕಳಿಗೆ ಅವಿತುಕೊಳ್ಳುವ ಜಾಗ ಹುಡುಕುವ ಭರಾಟೆ ಪ್ರಾರಂಭವಾಗುತ್ತಿತ್ತು. ಏಕೆಂದರೆ ಹಬ್ಬದ ದಿನ ಮಧ್ಯಾಹ್ನ ಎಷ್ಟು ಹೊತ್ತಿಗಾದರು 'ಕುರ್ಮಿಲ್ಲ' ಎಂದು ಕರೆಯಲ್ಪಡುತ್ತಿದ್ದ ಒಬ್ಬ ಕರಿಯ ರಾಕ್ಷಸ ಊರ ಬೀದಿಗಳಲ್ಲಿ ಪ್ರತ್ಯಕ್ಷವಾಗಿಬಿಡುತ್ತಿದ್ದ!
ನಾವು ಮಕ್ಕಳು ಈ ದೀಪಾವಳಿಯ ಕುರ್ಮಿಲ್ಲನ ಸುತ್ತ ಹೆಣೆದಷ್ಟು ಕಲ್ಪನೆ, ಫ್ಯಾಂಟಸಿಗಳನ್ನು ಇನ್ಯಾರ ಬಗ್ಗೆಯೂ ಹೆಣೆದಿರಲಿಕ್ಕಿಲ್ಲ. ಪಕ್ಕದ ಮನೆಗೆ ಹೊಸತಾಗಿ ಬಂದಿದ್ದ ಟಿಂಬರ್ ವ್ಯಾಪಾರಿಯ ಮನೆಯ ಕಾಂಪೌಂಡಿನ ಹಿಂದೆ ಅವಿತುಕೂತು ಜೋರಾಗಿ 'ಅರೆ ಓ ಟಿಂಬರ್ ವಾಲಾ.. ಗಡ್ಡಾವಾಲಾ..' ಎಂದು ಕಿರುಚಿ ಓಡಿಬಂದು ಸಂತಸಪಡುತ್ತಿದ್ದುದನ್ನು ಬಿಟ್ಟರೆ ನಮ್ಮ ಪ್ರಪಂಚದಲ್ಲಿ ದೊಡ್ಡವರಿಗೆ ಮೂರುಕಾಸಿನ ಕಿಮ್ಮತ್ತೂ ಇರಲಿಲ್ಲ. ಆದರೆ ಈ ಕುರ್ಮಿಲ್ಲ ಮಾತ್ರ ನಮ್ಮ ಅಂಕೆಗೂ ಸಿಗದಷ್ಟು ಭಯಂಕರನಾಗಿದ್ದ. ಪ್ರತಿ ದೀಪಾವಳಿಯ ಮಧ್ಯಾಹ್ನ ಇವ ತಪ್ಪದೆ ಪ್ರತ್ಯಕ್ಷವಾಗಿಬಿಡಬೇಕು ಎಂದು ಯಾರೊ ನಿಯಮಿಸಿದ್ದರೆಂದು ತೋರುತ್ತದೆ. ನಮ್ಮ ಅಪರಾಹ್ನದ ಕುಟಿಲ ಯೋಜನೆಗಳೆಲ್ಲ ಈ ಕುರ್ಮಿಲ್ಲನಿಂದ ಮುಲಾಜಿಲ್ಲದೆ ಮಣ್ಣುಪಾಲಾಗಿಬಿಡುತ್ತಿದ್ದವು. ಅವನ ರೂಪವೇ ಅಂಥದು. ಅವನ ಕಣ್ಣುಗಳು ಕೆಂಪು ಗೋಳಗಳ ಹಾಗೆ ನಿಗಿನಿಗಿ ಹೊಳೆಯುತ್ತಿದ್ದವು. ಬಾಚದೇ ಉದ್ದ ಬೆಳೆದಿದ್ದ ಎಣ್ಣೆ, ಓರಣ ಅರಿಯದ ಕೂದಲು. ತಲೆಯ ಮೇಲೊಂದು ಅಡಿಕೆಹಾಳೆಯ ಟೊಪ್ಪಿ. ತುಟಿಗೆ ಢಾಳಾಗಿ ಬಳಿದ ಕಡುಗೆಂಪು. ಪಾಚಿಗಟ್ಟಿದ ಹಳದಿ ಹಲ್ಲುಗಳು. ತಲೆಯಿಂದ ಕಾಲವರೆಗೂ ಬಳಿದುಕೊಂಡ ಕಡುಗಪ್ಪು ಬಣ್ಣ. ಸೊಂಟಕ್ಕೆ ಕೆಂಪು ಬಣ್ಣದ ಪಂಚೆ ಸುತ್ತಿಕೊಂಡು ಈ ಕುರ್ಮಿಲ್ಲನೆಂಬ ಮಹಾಶಯ ಬೀದಿಗಿಳಿದರೆ ಸಾಕು, ಭರ್ತಿ ಆವೇಶ!
ಕಾಲಿಗೆ ಗೆಜ್ಜೆಕಟ್ಟಿ ಬಲಭುಜದ ಮೇಲೆ ಕೋಲೊಂದರ ತುದಿಗೆ ಬಿದಿರಿನ ಬುಟ್ಟಿಯೊಂದನ್ನು ಸಿಗಿಸಿಕೊಂಡು ಮೈ ಮಿರಿಮಿರಿ ಮಿಂಚಿಸಿಕೊಂಡು ಇವ ಕುಣಿಯುತ್ತಿದ್ದ ವೈಖರಿಯನ್ನು ಚಿಳ್ಳೆಪಿಳ್ಳೆಗಳಾದ ನಾವು ಅನುಕರಿಸಲು ಶತಪ್ರಯತ್ನ ಮಾಡಿದರು ಸಾಧ್ಯವಾಗುತ್ತ ಇರಲಿಲ್ಲ. ಕುರ್ಮಿಲ್ಲನ ಆವೇಶಕ್ಕೆ ಕಾರಣವನ್ನು ಹುಡುಕೀ ಹುಡುಕೀ ಕೊನೆಗೆ ಯಾವ ನಿರ್ಧಾರಕ್ಕೆ ಬರಲೂ ಸಾಧ್ಯವಾಗದೆ ನಾವು ಸೋಲುತ್ತಿದ್ದೆವು. ಅಷ್ಟೇ ಅಲ್ಲ, 'ತಗ್ಗಡ್ ಧಿಮಿ ಥೈ, ತಗ್ಗಡ್ ಧಾ ಥೈ' ಎನ್ನುವ ತಾಳಕ್ಕೆ ಕುಣಿಯುತ್ತಲೆ ಆಗಾಗ ಬಾಯಿಂದ ಊಳಿಟ್ಟುಕೊಳ್ಳುತ್ತ ಇರುವುದು ನಮಗೆಲ್ಲ ಸೋಜಿಗದ ವಿಷಯವಾಗಿತ್ತು.
ಕುರ್ಮಿಲ್ಲ ಬರುವುದು ದೀಪಾವಳಿಯಲ್ಲಾದರು ಅವನಿಗೆ ನುಗ್ಗಲಿಕ್ಕೆ ಇಂಥದೇ ಮನೆ ಎಂಬುದಿರಲಿಲ್ಲ. ಅಪ್ಪಿತಪ್ಪಿ ಕೂಡ ಅವ ಯಾವುದೇ ದೇವರ ಹೆಸರೆತ್ತಿದ್ದನ್ನು ನಾವು ಕೇಳಿದ್ದಿಲ್ಲ. ಕುರ್ಮಿಲ್ಲ ಬರುತ್ತಿದ್ದಾನೆಂದರೆ ಅರ್ಧ ಕಿಲೋಮೀಟರು ದೂರದಿಂದಲೆ ಎಲ್ಲ ಮಕ್ಕಳುಗಳಿಗೂ ನ್ಯೂಸು ತಿಳಿದುಹೋಗಿ ಅವು ಬಚ್ಚಿಟ್ಟುಕೊಂಡು ಅವನನ್ನು ವೀಕ್ಷಿಸಲು ಜಾಗ ಹುಡುಕಿಕೊಂಡು ತಾರಾಮಾರಾ ಓಡುತ್ತಿರುವುದು ಸಾಮಾನ್ಯವಾಗಿ ಕಂಡುಬರುವ ದೃಶ್ಯ. ನಾನು ಯಾವಾಗಲೂ ನನಗೇ ನೇತುಬೀಳುವ ನನ್ನ ತಂಗಿಯನ್ನು ಎಳೆದುಕೊಂಡು ಅಂಗಳ ಕಾಣುವ ಒಳಕೋಣೆಯ ಕಿಟಕಿಯ ಅಡಿಯಲ್ಲಿ ಅವಿತುಕೂರುತ್ತಿದ್ದೆ. ಸ್ವಲ್ಪ ಹೊತ್ತಿಗೆಲ್ಲ 'ಕೂಊಊಊ..ಹುಲುಲುಲುಲುಲುಊಊಊ!!' ಎಂದು ಕೂಗುತ್ತ ಕುರ್ಮಿಲ್ಲ ನಮ್ಮ ಮನೆಯ ಅಂಗಳಕ್ಕೆ ದಾಳಿಯಿಟ್ಟನೋ, ನಾನೂ ನನ್ನ ತಂಗಿಯೂ ಉಸಿರು ಬಿಗಿಹಿಡಿದುಕೊಂಡು ಗಪ್-ಚುಪ್ಪಾಗಿಬಿಡುತ್ತಿದ್ದೆವು. ಅವನ ಬುಟ್ಟಿಗೆ ಹಳೆ ಬಟ್ಟೆ ಬಿದ್ದ ಮೇಲೇ ಆತ ಹೊರಡುವುದು. ಆಗೆಲ್ಲ ಅವನಿಗೆ ಹೆದರಿಕೊಳ್ಳದೆ ಅಂಗಳಕ್ಕೇ ಹೋಗಿ ನಿಂತು ಅವನಿಗೆ ಹಳೆಬಟ್ಟೆ, ಪಾತ್ರೆ ಇತ್ಯಾದಿ ನೀಡುವ ಅಮ್ಮ ಮತ್ತು ಜೈನಾಬಿಯೆಂಬ ಮುದುಕಿ ಇಬ್ಬರೂ ಅತ್ಯಂತ ಸಾಹಸಿಗಳು ಎಂದು ನಮಗೆ ಅನ್ನಿಸುವುದು. ಕುರ್ಮಿಲ್ಲನೋ, ಉಣಗೋಲು ದಾಟಿ ಅಂಗಳಕ್ಕೆ ಕಾಲಿಟ್ಟಾಗಿಂದ ಹಿಡಿದು ಬೆನ್ನು ತೋರಿಸುವವರೆಗೂ ಊಳಿಡುತ್ತ ಕೀರಲು ಕಂಠದಲ್ಲಿ "ಎಲ್ಲೀಈಈಈ, ಮಕ್ಳೂಊಊ.. ಬರ್ಲೀಈಈ.. ತಿಂತೀನಿಈಈಈ!!!!" ಎಂದು ಬೊಬ್ಬೆಹಾಕುತ್ತಿದ್ದ. ಅವ ಪಕ್ಕದ ಮನೆಗೆ ಹೋದ ಮೇಲೆ ನಾವು ಮೆಲ್ಲನೆ ಹೊರಬಂದು ಅವನು ಇನ್ನೊಂದು ಮನೆಗೆ ಹೋಗುವುದನ್ನು, ಅಲ್ಲಿ ಕುಣಿಯುವುದನ್ನು ನೋಡುತ್ತ ಮಂತ್ರಮುಗ್ಧರಾಗಿ ನಿಂತುಬಿಡುತ್ತಿದ್ದೆವು. ಗ್ರಹಚಾರ ತಪ್ಪಿ ಯಾರಾದರು ಮಕ್ಕಳು ತನ್ನ ಹಿಂದೆ ಬರುವುದು ಗೊತ್ತಾಯಿತೊ.. ಮುಗಿದೇ ಹೋಯಿತು! ನಡೆಯುತ್ತಿದ್ದವ ಇದ್ದಕ್ಕಿದ್ದ ಹಾಗೇ ತಿರುಗಿ ಭಯಂಕರವಾಗಿ ಕಿರುಚಿಕೊಳ್ಳುತ್ತ ರಸ್ತೆಯಿಡೀ ಆ ಮಕ್ಕಳನ್ನೆಲ್ಲ ಅಟ್ಟಾಡಿಸಿ ಓಡಿಸಿಕೊಂಡು ಹೋಗುತ್ತಿದ್ದ. ಅವು ಎದ್ನೋ, ಬಿದ್ನೋ, ಕೆಟ್ನೋ ಎಂದು ದಿಕ್ಕೆಟ್ಟು ಚೆಲ್ಲಾಪಿಲ್ಲಿಯಾಗುತ್ತಿದ್ದವು.
ಮುಂದಿನ ದೀಪಾವಳಿಯ ಹೊತ್ತಿಗೆ ಈ ಕುರ್ಮಿಲ್ಲನಿಗೆ ಹೆದರಲೆಕೂಡದು ಎಂದು ನಾವು ಎಷ್ಡು ಮನಸ್ಸು ಗಟ್ಟಿಮಾಡಿಕೊಂಡರು ಪ್ರತಿಸಾರಿ ನಾವು ತಿರುಗಾ ಆ ಹಳೆಯ 'ಹೆದರುಪುಕ್ಕ ಬಿದಿರುದೊಣ್ಣೆ'ಗಳೆ ಆಗಿಬಿಡುತ್ತಿದ್ದೆವು. ನಮಗೆ ಗೊತ್ತಿದ್ದ ಯಾವ ಭೂತ ಪ್ರೇತ ಪಿಶಾಚಾದಿಗಳೂ ಕುರ್ಮಿಲ್ಲನಿಗೆ ಸರಿಸಮನಾಗಿರಲಿಲ್ಲ. ಕೊನೆಗೆ ಯಮನೂ ಕೂಡ ಕುರ್ಮಿಲ್ಲನ ಕಾಲು ಪರ್ಸೆಂಟಿಗೂ ಸಮವಿಲ್ಲ ಎಂಬ ಸತ್ಯ ನಮಗೆ ಮಾತ್ರ ನಿಶ್ಚಯವಾಗಿ ತಿಳಿದಿದ್ದಂಥದು.
ಈಗ ದೀಪಾವಳಿಗಳಲ್ಲಿ ಕುರ್ಮಿಲ್ಲ ಬರುವುದಿಲ್ಲ. ಒರಿಜಿನಲ್ ಕುರ್ಮಿಲ್ಲನನ್ನು ನಾವು ಏಳೆಂಟು ದೀಪಾವಳಿಗಳಲ್ಲಿ ಮಾತ್ರ ನೋಡಿದ್ದು. ಅವನು ಬರುವುದನ್ನು ನಿಲ್ಲಿಸಿದ ನಂತರ ಉಮರ್ ಸಾಬರ ಮನೆಯಲ್ಲಿ ಕೆಲಸಕ್ಕಿದ್ದ ಕೆಂಪ ಬಣ್ಣ ಬಳಿದುಕೊಂಡು ದೀಪಾವಳಿಗೆ ಬರಲು ಶುರುಹಚ್ಚಿದ. ಅವನನ್ನೂ ನಾವು 'ಕುರ್ಮಿಲ್ಲ' ಎಂದೇ ಕರೆಯುತ್ತಿದ್ದರೂ ಅವನ ಬಗ್ಗೆ ಹೆದರಿಕೆಯೇ ಹುಟ್ಟುತ್ತಿರಲಿಲ್ಲ. ಕೆಂಪನ ಹೊಟ್ಟೆ ಸ್ವಲ್ಪ ಡುಮ್ಮಗಿದ್ದ ಕಾರಣ ಆತನಿಗೆ ಹಳೆಯ ಕುರ್ಮಿಲ್ಲನಂತೆ ಕುಣಿಯಲು ಅಥವ ಮಕ್ಕಳನ್ನು ಓಡಿಸಿಕೊಂಡು ಹೋಗಲು ಸಾಧ್ಯವಾಗುತ್ತಿರಲಿಲ್ಲ. ವರ್ಷಗಳು ಕಳೆಯುತ್ತ ಹೋದಹಾಗೆ ನಮ್ಮ ಓರಗೆಯ ಹುಡುಗ ಹುಡುಗಿಯರಿಗೆಲ್ಲ ಪಟಾಕಿ, ಸುರುಸುರುಬತ್ತಿ, ವಿಷ್ಣುಚಕ್ರಗಳ ಆಕರ್ಷಣೆಗಳು ಕಡಿಮೆಯಾಗಲು ತೊಡಗಿದವು. ಕುರ್ಮಿಲ್ಲನ ನೆನಪೂ ಕೂಡ ಮಾಸತೊಡಗಿತು. ನಾನು ಮತ್ತು ನನ್ನ ತಂಗಿ ಮಾತ್ರ ಒಂದು ಮಧ್ಯಾಹ್ನವಿಡೀ ನಮ್ಮನ್ನು ಒಂದೆಡೆ ಅಲ್ಲಾಡದಂತೆ ಹಿಡಿದಿಡುತ್ತ ಇದ್ದ ಈ ಕುರ್ಮಿಲ್ಲನೆಂಬ ಅತಿಮಾನವನನ್ನು ನಮ್ಮ ನೆನಪುಗಳಲ್ಲಿ ಹಚ್ಚಗೆ ಇರಿಸಿಕೊಂಡಿದ್ದೇವೆ.
'ಕುರ್ಮಿಲ್ಲ' ಎಂಬುದು 'ಕುರುಂಬಿಲ' ಎಂಬ ಹೆಸರಿನ ವಕ್ರರೂಪ. ಕುರುಂಬಿಲ ಕೇರಳದಿಂದ ವಲಸೆ ಬಂದ ಕಾಫಿ ಎಸ್ಟೇಟು ಕೂಲಿಗಳಲ್ಲಿ ಒಬ್ಬನಾಗಿದ್ದನಂತೆ. ಹಾಗೆಲ್ಲ ದೀಪಾವಳಿಯ ದಿನ ವೇಷಹಾಕಿಕೊಂಡು ಕುಣಿದು ಆತ ತನ್ನದೇ ರೀತಿಯಲ್ಲಿ ಮಕ್ಕಳನ್ನು ತಲುಪುವ ವಿಚಿತ್ರ ಹಾದಿಯೊಂದನ್ನು ಕಂಡುಕೊಂಡಿದ್ದ. ನನ್ನ ಹಿರಿಯರು ಹೇಳುತ್ತಿದ್ದ ಪ್ರಕಾರ ಆತ ದೀಪಾವಳಿಯ ದಿನ ಕಡಿಮೆಯೆಂದರೂ ಮೂರು ಕೊಟ್ಟೆ ಸಾರಾಯಿ ಏರಿಸಿಕೊಂಡೇ ಹೊರಡುತ್ತಿದ್ದುದು. ಅದಕ್ಕೇ ಅವನ ಬಾಯಲ್ಲಿ ಯಾವ ದೇವರ ಹೆಸರೂ ಬರುತ್ತಿರಲಿಲ್ಲ, ಅದಕ್ಕೇ ಆತನಿಗೆ ಆ ರೀತಿಯ ಆವೇಶ, ವೇಗ ಬರುತ್ತಿದ್ದುದು, ಅದಕ್ಕೇ ಅವನ ಕಣ್ಣುಗಳು ಕಾದ ಕೆಂಡದ ರೀತಿ ಕೆಂಪಗಿರುತ್ತಿದ್ದುದು. ಹಾಗೆಲ್ಲ ಇದ್ದ ಕುರುಂಬಿಲ ತನ್ನ ಎಸ್ಟೇಟು ಲೈನಿನ ಜೋಪಡಿಯಲ್ಲಿ ಖಾಲಿಹೊಟ್ಟೆಗೆ ಕುಡಿದು ಕುಡಿದೇ ಹೇಳಹೆಸರಿಲ್ಲದಂತೆ ಸತ್ತುಹೋದ. ತನ್ನ ಜತೆಗೇ ನಮ್ಮೆಲ್ಲ ಕಲ್ಪನೆ, ಫ್ಯಾಂಟಸಿಗಳನ್ನೆಲ್ಲ ತನ್ನ ಹಳೆಬಟ್ಟೆಗಳ ಬುಟ್ಟಿಯಲ್ಲಿ ಮೂಟೆಕಟ್ಟಿಕೊಂಡು ಹೊರಟುಹೋದ.
ಚಿತ್ರ: www.crisisreversal.com
ನಮ್ಮ ಸರಕಾರಿ ಶಾಲೆಯ ಕಾಂಪೌಂಡಿನ ಹಿಂದೆ ಒಂದು ಚಲನಚಿತ್ರ ಮಂದಿರ. ಅದರ ಸುತ್ತ ಹುಟ್ಟಿಕೊಂಡಿದ್ದ ಪೆಟ್ಟಿಗೆ ಅಂಗಡಿಗಳು, ಕೂಲಿಕಾರರ ಮನೆಗಳು, ರಾತ್ರಿಯಾದರೆ ಗುಟ್ಟಾಗಿ ಶರಾಬು ಮಾರಲ್ಪಡುವ ಸಣ್ಣ ಜೋಪಡಿಗಳು. ಚೌಕೀದಾರ ಬರುವ ಮೊದಲು ನಮ್ಮ ಶಾಲೆ ಜನರು ಓಡಾಡಲು ಒಂದು ಶಾರ್ಟ್ ಕಟ್ ರಸ್ತೆಯಾಗಿ ಉಪಯೋಗಿಸಲ್ಪಡುತ್ತಿತ್ತು. ಇದಕ್ಕಾಗಿ ಶಾಲೆಯ ಕಾಂಪೌಂಡಿನ ಒಂದು ಭಾಗವನ್ನು ಒಡೆದುಹಾಕಲಾಗಿತ್ತು. ಬೆಳಗ್ಗೆ ಶಾಲೆಗೆ ಕಾಲಿಟ್ಟರೆ ಅಲ್ಲಿ ಮಲಗಿರುತ್ತಿದ್ದ ಕುಡುಕರು, ವೇಶ್ಯೆಯರು ಇಲ್ಲವೆ ಭಿಕ್ಷುಕರ ಸಂಸಾರಗಳ ಅಡಿಗೆಯನ್ನು ನೋಡುವುದು ನಮಗೆ ಮಾಮೂಲಾಗಿತ್ತು. ಭಿಕ್ಷುಕರ 'ಸೀಸನ್' ಚಾಲೂ ಇದ್ದಾಗ ಅವರು ತಿಂಗಳುಗಟ್ಟಲೆ ನಮ್ಮ ಶಾಲೆಯಲ್ಲಿ ಬಿಡಾರ ಹೂಡುತ್ತಿದ್ದುದುಂಟು. ಸಂಜೆಯ ಹೊತ್ತು ಅವರು ಸಿಗುವ ಶಾಲೆಯ ಮೆಟ್ಟಿಲ ಕಲ್ಲುಗಳನ್ನೆ ನೀರಿನಲ್ಲಿ ತೊಳೆದು ಸ್ವಚ್ಛಮಾಡಿ ಬೆಳ್ಳುಳ್ಳಿ, ಕೆಂಪುಮೆಣಸಿನಕಾಯಿ, ಹುಣಿಸೆಹಣ್ಣು ಹಾಕಿ ಅರೆಯುತ್ತಿದ್ದ ಮಸಾಲೆ ಎಂಥವರ ಬಾಯಲ್ಲೂ ನೀರೂರಿಸುವಂತೆ ಕಾಣುತ್ತಿತ್ತು. ಅವೇ ಮೆಟ್ಟಿಲುಗಳ ಮೇಲೆ ನಾವು ಇಡೀದಿನ ಓಡಾಡಿದ್ದೆವು ಎನ್ನುವುದು ನಮಗೆ ಮರೆತೇ ಹೋಗುತ್ತಿತ್ತು. ಆ ಮಸಾಲೆಯಿಂದ ಏನು ಅಡಿಗೆ ತಯಾರಾಗಬಹುದು ಎಂಬ ಚರ್ಚೆ ನಡೆಸುತ್ತ ಭಾರವಾದ ಹೃದಯಗಳೊಡನೆ ನಾವು ನಮ್ಮ ಮನೆಗಳಿಗೆ ವಾಪಾಸಾಗುತ್ತಿದ್ದೆವು.
ಆದರೆ ಈ ಭಿಕ್ಷುಕರ ಬಿಡಾರಗಳ ಸಂಖ್ಯೆ ಬರಬರುತ್ತ ಜಾಸ್ತಿಯಾಗತೊಡಗಿತು. ಜೊತೆಗೇ ಅವರ ಉಪದ್ರವೂ ಕೂಡ. ಯಾರೋ ಈ ಭಿಕ್ಷುಕರು ಮಕ್ಕಳನ್ನು ಕದ್ದುಕೊಂಡುಹೋಗಿ ಅವರ ಕಣ್ಣೋ, ಕೈಯೋ, ಕಾಲೋ ಏನೊ ಒಂದನ್ನು ತೆಗೆದು ಭಿಕ್ಷೆಗೆ ಹಾಕುತ್ತಾರೆಂದು ಹಬ್ಬಿಸಿದರು. ಇನ್ನಾರೋ ಇವರು ತಿನ್ನುವುದು ಬೆಕ್ಕು, ಹೆಗ್ಗಣ ಇತ್ಯಾದಿಯೆಂದು ಹೇಳಲು ತೊಡಗಿದರು. ನಾವುಗಳು ಭಿಕ್ಷುಕರ ಘಾಟುಮಸಾಲೆಗೂ, ಹೆಗ್ಗಣದ ಅಡಿಗೆಗೂ ಕನೆಕ್ಷನ್ ಕೊಟ್ಟುಕೊಂಡು ಸಂಭ್ರಮಿಸಿದೆವು. ಆದರೆ ಶಾಲೆಯ ತೆಂಗಿನಮರಗಳಿಂದ ಕಾಯಿಗಳು, ಕೊಠಡಿಗಳ ಬೀಗಗಳು ಇತ್ಯಾದಿ ಮಂಗಮಾಯವಾಗತೊಡಗಿದಾಗ ಶಾಲೆಗೆ ಒಬ್ಬ ಚೌಕೀದಾರ ಬೇಕೇಬೇಕೆಂದು ವಾದವಿವಾದಗಳ ನಂತರ ತೀರ್ಮಾನಿಸಲಾಯಿತು. ಶಾಲೆಯ ಕಾಂಪೌಡಿನ ಬದಿಯಲ್ಲೆ ವಾಸವಾಗಿದ್ದ ಓರ್ವನನ್ನು ನಿಯಮಿಸಿದರು.
ಆತನ ಹೆಸರು 'ಬಾಷ' ಎಂದೇನೊ ಇತ್ತೆಂದು ನೆನಪು. ಈ ಚೌಕೀದಾರ ಯಮನ ಇನ್ನೊಂದು ಅವತಾರದಂತೆ ಇದ್ದ. ದೊಗಲೆ ಪಯಿಜಾಮ, ಜುಬ್ಬಧರಿಸುತ್ತಿದ್ದ ಮೀಸೆಯಿಲ್ಲದ ಗಡ್ಡದ ಆತನ ಎಣ್ಣೆಗೆಂಪು ಮುಖ, ಯಾವಾಗಲು ಮಿಸುಕಾಡುತ್ತಲೆ ಇರುತ್ತಿದ್ದ ಕೆಂಪುಕಣ್ಣುಗಳು.. ವ್ಯತ್ಯಾಸವೆಂದರೆ ಈತ ಯಮನ ಗದೆಯ ಬದಲು ಮೋಟುದೊಣ್ಣೆಯೊಂದನ್ನು ಇಟ್ಟುಕೊಂಡಿರುತ್ತಿದ್ದುದು. ನಮಗೆ ಭಿಕ್ಷುಕರಿಗಿಂತ ಚೌಕೀದಾರನೇ ಭಯಾನಕವಾಗಿ ಕಾಣತೊಡಗಿದ. ಶಾಲೆಯ ಕಾಂಪೌಂಡಿಗೆ ಮನುಷ್ಯರಿರಲಿ, ಒಂದು ಕೋಳಿಪಿಳ್ಳೆಯನ್ನೂ ಆತ ಬಿಡುತ್ತಿದ್ದಿಲ್ಲ. ಬರೇ ಅತನಷ್ಟೇ ಅಲ್ಲ, ಆತನ ಮುಕ್ಕಾಲು ಡಜನ್ ಮಕ್ಕಳೂ ಸಂಜೆಯಾದರೆ ಶಿಫ್ಟು ವ್ಯವಸ್ಥೆ ಮಾಡಿಕೊಂಡು ಗಸ್ತು ತಿರುಗುವರು. ನಾವು ಮಕ್ಕಳು ಶಾಲೆ ನಡೆಯುವ ಸಮಯದಲ್ಲಿ ಆಚೆಯೇನಾದರು ಕಂಡರೆ ಆತ ಅಬ್ಬರಿಸುತ್ತಿದ್ದ ಸದ್ದಿಗೇ ಜಂಘಾಬಲ ಉಡುಗಿಹೋಗುತ್ತಿತ್ತು.
ಶಾಲೆಯ ಕಾಂಪೌಂಡಿನ ಬದಿಯಲ್ಲೆ ಒಂದು ಹ್ಯಾಂಡ್ ಪಂಪ್ ಬೋರ್ವೆಲ್ಲು. ಶಾಲೆಯ ಸಕಲ ನೀರಿನ ವ್ಯವಸ್ಥೆಗೂ ಅದೇ ಆಧಾರ. ಅದರ ಬಳಿಯಲ್ಲಿಯೆ ಒಂದು ಲೋಕಲ್ ಹಾಲು ಶೀತಲೀಕರಣ ಘಟಕದ ಕಟ್ಟಡ. ಬೋರ್ವೆಲ್ ಬಹಳ ಹಳೆಯದಾಗಿ ಅದರಿಂದ ಕಬ್ಬಿಣದ ವಾಸನೆಯ ನೀರು ಬರುತ್ತಿದ್ದರು ನಾವು ಆ ಜಾಗಕ್ಕೇ ನೀರು ಕುಡಿಯುವ ನೆಪಹೂಡಿ ಹೋಗಲು ಕಾರಣವಿತ್ತು. ಡೈರಿಯಲ್ಲಿ ನಮ್ಮ ಪರಿಚಯದವರೊಬ್ಬರು ಕೆಲಸ ಮಾಡುತ್ತಿದ್ದರು. ಅವರು ಶಾಲೆಯ ಮಕ್ಕಳು ಬಂದರೆ ಅಕ್ಕರೆಯಿಂದ ಹಾಲನ್ನು ತಂಪುಗೊಳಿಸಲು ಇಟ್ಟಿರುತ್ತಿದ್ದ ಐಸನ್ನು ತುಂಡುಮಾಡಿ ನಮಗೆ ಕೊಡುತ್ತಿದ್ದರು.
ಹೀಗೊಮ್ಮೆ ಸಂಜೆ ನಾನು ನೀರಿಗೆಂದು ಹೋಗಿ ಗೆಳತಿಯರೊಡನೆ ಐಸು ಹೀರುತ್ತ ತನ್ಮಯಳಾಗಿ ನಿಂತಿರುವಾಗ ಈ ಚೌಕೀದಾರ ಯೂನಿಫಾರ್ಮಿನಲ್ಲಿದ್ದ ನಮ್ಮನ್ನು ನೋಡಿಬಿಟ್ಟ. ಆತ ಅಬ್ಬರಿಸಿಕೊಂಡು ಓಡಿಬರುವುದನ್ನು ನೋಡಿದ ಗೆಳತಿಯರು ದಿಕ್ಕಾಪಾಲಾಗಿ ಓಡಿಹೋದರು. ಸ್ತಂಭೀಭೂತಳಾಗಿ ನಿಂತಿದ್ದ ನನ್ನನ್ನು ಮನೆಯವರೆಗೂ ಕರೆತಂದು ತಾಯಿಯವರ ಬಳಿ ವರದಿ ಒಪ್ಪಿಸಿದ. ಆತನ ಅಬ್ಬರದ ಫಲವೋ, ಅಂದು ನನಗೆ ಬಿದ್ದ ಏಟುಗಳ ರುಚಿಯೋ ನಾನು ಪುನಃ ಐಸು ತಿನ್ನುವ ಧೈರ್ಯ ಮಾಡಲೇ ಇಲ್ಲ. ಆದರೆ ನಾವು ಸ್ನೇಹಿತರು ಚೌಕೀದಾರನ ಬಗ್ಗೆ ಆತ ಯಾರಯಾರಿಂದಲೋ ಏಟು ತಿನ್ನುವಂತೆ ಊಹಿಸಿ ಕಥೆಕಟ್ಟಿ ಅದನ್ನು ಸಣ್ಣದನಿಯಲ್ಲಿ ಹೇಳಿಕೊಂಡು ನಗಾಡಿಕೊಂಡಿದ್ದುಂಟು.
ಅವರ ಪೂರ್ತಿ ಹೆಸರು ಬಿ.ಎನ್. ನಂಜುಂಡಶೆಟ್ಟಿ. ನಮಗೆ ಬಿಎನ್ನೆನ್.
"ಹೆಗ್ಗಣಾ ತಿನ್ರೋ ಹೋಗ್ರೋ ದರವೇಶಿಗಳಾ!!" ಎಂದೇ ಬಿಯೆನ್ನೆನ್ ಮೇಷ್ಟರು ತಮ್ಮ ಇಂಗ್ಲೀಷ್ ಪಾಠದ ಪ್ರತಿ ಪೀರಿಯಡ್ ಅನ್ನು ಶುರು ಮಾಡುತ್ತಿದ್ದದ್ದು ಹಾಗೂ ಮುಗಿಸುತ್ತಿದ್ದದ್ದು. ನಾವು ಹೈಕಳಿಗೆ ಅವರ ಕೈಯಲ್ಲಿ ಬೈಸಿಕೊಳ್ಳುವುದೆಂದರೆ ಖುಶಿಯೋ ಖುಶಿ. ತಮ್ಮ ಪ್ಯಾಂಟನ್ನು ಸದಾಕಾಲ ತಮ್ಮ ಡೊಳ್ಳುಹೊಟ್ಟೆಯ ಮೇಲೇರಿಸಿಕೊಳ್ಳುವ ಪ್ರಯತ್ನ ಮಾಡುತ್ತ ವಿಫಲರಾಗುತ್ತ ಸೋಡಾಬುಡ್ಡಿ ಕನ್ನಡಕ ಹಾಗೂ ಹಿಟ್ಲರ್ ಮೀಸೆಯ ಸಮೇತ ವಾಲಾಡುತ್ತ ಅವರು ಕ್ಲ್ಲಾಸಿನೊಳಗೆ ಹಾಜರಾದರೆಂದರೆ ನಮಗೆ ಥ್ರಿಲ್ಲು. ಹೈಸ್ಕೂಲಿನ ಮೂರೂ ವರ್ಷಗಳು ನಾವು ಎಲ್ಲ ನಾರ್ಮಲ್ ಹುಡುಗರ ಹಾಗೆ ನಮ್ಮೊಳಗಿನ ತರಲೆಬುದ್ಧಿಯನ್ನು ಜೀವಂತವಾಗಿಟ್ಟುಕೊಳ್ಳಲು ಬಿಯೆನ್ನೆನ್ ಮೇಷ್ಟರೂ ಒಂದು ಪ್ರಮುಖ ಕಾರಣವಾಗಿದ್ದರು.
ದಿನದ ಮೊದಲನೇ ಪೀರಿಯಡ್ಡೇನಾದರೂ ಬಿಯೆನ್ನೆನ್ ಮೇಷ್ಟರದಾಗಿದ್ದರೆ ಹುಡುಗರಿಗೆ ಸುಗ್ಗಿ. ಬೇಕೆಂದೇ ಲೇಟಾಗಿ ಕ್ಲಾಸಿಗೆ ಎಂಟ್ರಿ ಕೊಡುವುದು, ಕ್ಲಾಸು ಮುಗಿದ ನಂತರ ಮೇಷ್ಟರ ಹಿಂದೆ ಅಟೆಂಡೆನ್ಸಿಗೆ ಗೋಗರೆಯುತ್ತ ಕಿಸಿಕಿಸಿ ನಗುತ್ತ ಓಡಿಹೋಗುವುದು ನಮ್ಮ ಸ್ಕೂಲಿನ 'ಅನಫಿಷಿಯಲ್ ಟ್ರಾಡಿಷನ್' ಆಗಿತ್ತು. ಈ ರೀತಿಯಾಗಿ ಸೈನ್ಸ್ ಅಥವ ಗಣಿತದ ಮೇಷ್ಟರುಗಳ ಹತ್ತಿರ ನಡೆದುಕೊಂಡು ಫ್ರೀಯಾಗಿ ದೊರಕುವ ತಪರಾಕಿ ತಿನ್ನುವ ಧೈರ್ಯ ನಮ್ಮ ಹೈಸ್ಕೂಲಿನ ಇತಿಹಾಸದಲ್ಲೇ ಯಾರಿಗೂ ಬಂದಿರಲಿಲ್ಲ ಅನ್ನುವುದು ಬೇರೆಯ ವಿಷಯ. ಬೇರೆ ಕ್ಲಾಸುಗಳಲ್ಲಿ ಅತಿಯೆನ್ನುವಷ್ಟು ಗಂಭೀರನಾಗಿ ಪಾಠ ಕೇಳುತ್ತಿದ್ದ ಪುಸ್ತಕದ ಹುಳು ಜಾವೇದ ಕೂಡ ಬಿಯೆನ್ನೆನ್ನರ ಕ್ಲಾಸಿನಲ್ಲಿ ಹಲ್ಲುಬಿಟ್ಟು ನಗಾಡುತ್ತಿದ್ದದ್ದು ನಾವು ಹುಡುಗಿಯರಿಗೆ ತಮಾಷೆಯ ವಿಷಯವಾಗಿತ್ತು.
ಬಿಯೆನ್ನೆನ್ ಮೇಷ್ಟರು ನಮಗೆ ಪಾಠಮಾಡಲು ಬಂದಾಗ ಅವರ ನಿವೃತ್ತಿಯ ಸಮಯ ಹತ್ತಿರವಾಗಿಬಿಟ್ಟಿತ್ತು. ಕಣ್ಣು ಮಂದವಾಗಿತ್ತು. ಸ್ಕೂಲಿನಲ್ಲಿ ಪಾಠ ಮಾಡುತ್ತಿದ್ದ ಮುಕ್ಕಾಲುಪಾಲು ಮೇಷ್ಟರುಗಳು ಅವರ ಶಿಷ್ಯರೇ ಆಗಿದ್ದಿದ್ದು ಇನ್ನೊಂದು ವಿಶೇಷ. ಸೈಗಲ್ಲನ ಕಂಠ ಹೊಂದಿದ ಬಿಯೆನ್ನೆನ್ ಮೇಷ್ಟರು ಪಾಠ ಮಾಡುವ ರೀತಿಗೆ ಒಂದು ಅಪೂರ್ವ ಕ್ವಾಲಿಟಿ ಇತ್ತು. ಅದನ್ನು ಕೇಳಿದವರೆಲ್ಲ ನಿದ್ದೆಗೆ ಶರಣಾಗದೆ ಇರುವುದು ಸಾಧ್ಯವೇ ಇರಲಿಲ್ಲ. ನಾವೆಲ್ಲ ನಿದ್ದೆ ಮರೆಸಲು ಅವರು ಎಷ್ಟು ಸಾರಿ ಹೆಗ್ಗಣ ತಿನ್ನಲು ನಮಗೆ ಹೇಳಿದರೆಂದು ಲೆಕ್ಕವಿಡುವುದು, ರಾಕೆಟ್ಟು ದೋಣಿ ಮುಂತಾದ ಡಿಸೈನುಗಳನ್ನು ಕಾಗದದಲ್ಲಿ ರಚಿಸುವುದು, ಚುಕ್ಕಿಯಾಟ ಆಡುವುದು, ಕಷ್ಟಪಟ್ಟು ಪಾಠ ಕೇಳುವುದು - ಏನೆಲ್ಲ ಮಾಡಿದರೂ ಒಂದು ತೂಕಡಿಕೆಯಾದರೂ ಬಂದುಬಿಡುತ್ತ ಇತ್ತು. ಆಗಾಗ ಅವರು ಸರ್ಪ್ರೈಸ್ ಟೆಸ್ಟುಗಳನ್ನು ಕೂಡ ಕೊಡುತ್ತಿದ್ದದ್ದುಂಟು. ಆಗೆಲ್ಲ ಬಿಎನ್ನೆನ್ ಎನೋ ಓದುವವರಂತೆ ನಟಿಸುತ್ತ ಹಾಗೇ ನಿದ್ದೆಗೆ ಶರಣಾಗುತ್ತಿದ್ದರು. ನಾವೋ, ಊರಿಗೆ ಮುಂಚೆ ಟೆಸ್ಟು ಬರೆದು ಮುಗಿಸಿ ತೂಕಡಿಸುತ್ತಿದ್ದ ಬಿಎನ್ನೆನ್ರನ್ನು ಗೋಳುಹುಯಿದುಕೊಳ್ಳುತ್ತಿದ್ದೆವು. ಬೋರ್ಡಿನ ಮೇಲೆ ಅವರು ಬರೆದದ್ದನ್ನು ಅಳಿಸಿಹಾಕುವುದು, ಡಸ್ಟರನ್ನು ಕೈಗೆ ಸಿಗದಂತೆ ದೂರ ಇಡುವುದು, 'ಹೋ' ಎಂದು ಅವರ ಕಿವಿಯ ಹತ್ತಿರ ಕೂಗಿ ಸುಮ್ಮನಾಗುವುದು ನಮಗೆ ಮಾಮೂಲಾಗಿದ್ದವು. ಒಮ್ಮೆ ಅವರು ಜೂನಿಯರ್ ಕ್ಲಾಸಿನಲ್ಲಿ ಮೂಗು ಒರೆಸಲು ಕರ್ಚೀಫು ಮರೆತು ಬಂದು ಅವಾಂತರವಾಗಿ ಬಟ್ಟೆಯ ಡಸ್ಟರಿನಲ್ಲಿಯೇ ಮೂಗು ಒರೆಸಿ ಇಟ್ಟದ್ದು, ಕ್ಲಾಸ್ ಮಾನಿಟರ್ ಪ್ರವೀಣ ಬೋರ್ಡು ಒರೆಸಲು ಕುಣಿದುಕೊಂಡು ಹೋಗಿ ಅದನ್ನು ಮುಟ್ಟಿಬಿಟ್ಟದ್ದು, ಮಾರನೆಯ ದಿನ ಹೊಸಾ ಡಸ್ಟರೊಂದನ್ನು ತಂದಿಟ್ಟದ್ದನ್ನು ನೆನೆಸಿಕೊಂಡು ಈಗಲೂ ಉರುಳಾಡಿ ನಗುತ್ತೇವೆ.
ಇಷ್ಟೆಲ್ಲ ಇದ್ದರೂ ಬಿಎನ್ನೆನ್ ಮೇಷ್ಟರು ರಜಾ ಹಾಕಿದ ದಿನ ನಾವೆಲ್ಲ ಹುಳ್ಳಗೆ ಮುಖ ಮಾಡಿಕೊಂಡಿರುತ್ತಿದ್ದೆವು. ದಿನವಿಡೀ ಕಾಟಕೊಡುವ ತಾತ ಒಂದುದಿನ ಕಾಣದ ಹೋದರೆ ಬೇಸರವಾಗುತ್ತದಲ್ಲ - ಥೇಟ್ ಹಾಗೇ. ಬಿಎನ್ನೆನ್ ಹೊಸ ಶರಟು, ಪ್ಯಾಂಟು ಧರಿಸಿ ಬಂದ ದಿನ ನಮ್ಮ ಕ್ಲಾಸಿಗೆ ಕಾಲಿಟ್ಟ ಕೂಡಲೆ ನಮಗೆಲ್ಲ ಏನೋ ಖುಶಿ. 'ಹೇಏಏಏ' ಎಂದು ಜೋರಾಗಿ ಕಿರುಚಿಕೊಂಡು ನಮ್ಮ ಸಂತೋಷವನ್ನು ವ್ಯಕ್ತಪಡಿಸುತ್ತಿದ್ದೆವು. ಆಗೆಲ್ಲ ಬಿಎನ್ನೆನ್ ನಗುತ್ತಲೆ ನಮಗೆ ಹೆಗ್ಗಣ ತಿನ್ನಲು ಸಜೆಸ್ಟ್ ಮಾಡುತ್ತಿದ್ದರು. ಅವರು ಹೇಳಿದಾಗಲೆಲ್ಲ ನಾವು ಹೆಗ್ಗಣಗಳನ್ನು ತಿಂದಿದ್ದರೆ ನಮ್ಮೂರಿನ ಹೆಗ್ಗಣಗಳ ಸಂತಾನವೆಲ್ಲ ನಿರ್ಮೂಲನಗೊಂಡಿರಬೇಕಾಗಿತ್ತು. ಬಿಎನ್ನೆನ್ ಮೇಷ್ಟರ ಹೆಗ್ಗಣಗಳ ಅಫಿನಿಟಿ ನಮಗೆ ಬಿಡಿಸಲಾರದ ಕಗ್ಗಂಟಾಗಿದ್ದಂತೂ ನಿಜ. ಇವತ್ತು ಬಿಎನ್ನೆನ್ ಇಲ್ಲ. ಯಾರಿಂದಲೋ ಅವರು ತೀರಿಕೊಂಡ ಸುದ್ದಿ ಕೇಳಿದೆ. ಇಂದಿಗೂ ಮೋರಿಗಳ ಬಳಿ ಹೆಗ್ಗಣಗಳು ಕಂಡಾಗಲೆಲ್ಲ ಬಿಎನ್ನೆನ್ ನೆನಪಾಗುತ್ತಾರೆ.
ಥಾಂಕ್ಯೂ ಬಿಎನ್ನೆನ್ ಸಾರ್. ನಮ್ಮನ್ನು ನಗಿಸಿದ್ದಕ್ಕೆ. ನಮ್ಮ ಅನಫಿಶಿಯಲ್ ತಾತನ ಪಾತ್ರ ವಹಿಸಿದ್ದಕ್ಕೆ.
(Picture courtesy:gmachnut.wordpress.com)
ಬೆಳ್ಳಂಬೆಳಗ್ಗೆ ಕೊರೆಯುವ ಚಳಿಯಲ್ಲಿ ಎದ್ದು ಹೂಮಾರುವ ಮುದುಕಿಯನ್ನೆ ಅಭಿಸಾರಿಕೆಯ ಹಾಗೆ ಕಾಯುತ್ತ ಕುಳಿತಿದ್ದೇನೆ. ಆಕೆ ಕ್ಯಾತ್ಸಂದ್ರದ ಯಾವುದೋ ಮೂಲೆಯಿಂದ ಬಿಡಿಹೂವುಗಳನ್ನು ಬುಟ್ಟಿತುಂಬ ತುಂಬಿಕೊಂಡು ಮೆಲ್ಲನೆ ನಡೆದುಕೊಂಡು ಬರಬಹುದು, ಮನೆಯ ಪಡಸಾಲೆಯಲ್ಲಿ ಕುಕ್ಕರುಗಾಲಲ್ಲಿ ಕೂತು ಅವನ್ನೆಲ್ಲ ಸುರುವಿ ತಲೆಬಗ್ಗಿಸಿ ತಾಳ್ಮೆಯಿಂದ ಕಟ್ಟಿಕೊಡಬಹುದು, ನಾನಾಗ ಅರ್ಧಗಂಟೆ ಆಕೆಯನ್ನು ದಿಟ್ಟಿಸುತ್ತ ಕುಳಿತಿರಬಹುದು ಎನ್ನುವ ಹುಂಬ ಆಸೆ. ಆಕೆಯ ಕೈ ಕೊರಳು ಮುಖಗಳ ಸುಕ್ಕುಗಳು, ಗುಳಿಬಿದ್ದ ಕಂದುಗಣ್ಣುಗಳ ಪ್ರಶಾಂತ ಓಡಾಟ, ಆಗೊಮ್ಮೆ ಈಗೊಮ್ಮೆ ಬಿಡುವ ನಿಟ್ಟುಸಿರು, ಸರಸರನೆ ಹೂವುಕಟ್ಟುವ ನೀಳ ಕೈಬೆರಳುಗಳು, ಬೊಚ್ಚುಬಾಯಿಂದ ಉದುರುವ ಅಸ್ಪಷ್ಟ ಕಥೆಗಳು - ಎಲ್ಲವೂ ನನ್ನ ಪ್ರೀತಿಯ ಮುದುಕಿಯರನ್ನು ನೆನಪಿಸುತ್ತವೆ. ಆಕೆ ಮಳೆಚಳಿಗಳ ಪರಿವೆಯಿಲ್ಲದೆ ಗೂನಿಕೊಂಡು ಓಡಾಡುವುದನ್ನು ನೆನೆದುಕೊಂಡು ಆಕೆಯ ಆರೋಗ್ಯ ಹಾಳಾಗದಿರಲಿ ಎಂದು ಪ್ರಾರ್ಥಿಸಿಕೊಂಡು ಹಾದಿ ಕಾಯುತ್ತ ನನಗೆ ಯಾವುದೋ ಹಳೆಯ ವಿರಹ ವಾಪಾಸು ಕಾಡಲಿದೆ ಎಂದು ಹೆದರಿಕೊಂಡು ಕಂಗಾಲಾಗಿದ್ದೇನೆ. ಅನಂತಮೂರ್ತಿಯವರು ಬರೆದ ಸಾಲುಗಳಂತೆ "ಎಲ್ಲ ನೆನಪಾಗುತಿದೆ...”
ಸೌದೆಯೊಲೆಯ ಮುಂದೆ ಬೆಳಜಾವ ಬೆಲ್ಲದಕಾಫಿ ಕಾಸಿಕೊಂಡು ಹೊಗೆಕೊಳವೆಯಿಂದ ಫೋಂ ಫೋಂ ಎಂದು ಊದುತ್ತ ಹೊಗೆಯಿಂದ ಆವೃತವಾದ ಅರೆಗತ್ತಲ ಕೋಣೆಯಲ್ಲಿ ತೆಳ್ಳಗೆ ಕ್ಯಾರಿಕೇಚರಿನಂತೆ ಯಾವಾಗಲೂ ಕುಳಿತಿರುತ್ತಿದ್ದ ನನ್ನಜ್ಜಿ. ಆಕೆಯ ಸೀರೆಸೆರಗು ಬೆಚ್ಚಗೆ ಸುತ್ತಿಕೊಂಡು ಕೈಯ ಸುಕ್ಕುಗಳನ್ನು ನೇವರಿಸುತ್ತ ಇದ್ದರೆ ನನಗೆ ಪಾತ್ರೆಯಲ್ಲಿ ನೀರ ಮಧ್ಯ ಗಟ್ಟಿ ಕುಳಿತ ಬೆಲ್ಲದ ಹಾಗೇ ಕರಗಿಹೋಗುವ ಎನ್ನಿಸುತ್ತಿತ್ತು. ನನ್ನಜ್ಜಿ ತನ್ನ ಲೋಟಕ್ಕೊಂದಿಷ್ಟು ಕಾಫಿ ಹುಯಿದು ಯಾರಿಗೂ ಕಾಣದಂತೆ ನನಗೆ ಕೊಟ್ಟು ಬೊಚ್ಚುಬಾಯಿಯನ್ನು ಸ್ವಲ್ಪವೇ ಓರೆಮಾಡಿ ನಗುತ್ತಿದ್ದರು. ನಾನು ಬೇರಾವ ಮಕ್ಕಳಿಗೂ ಉಪಲಬ್ಧವಾಗದ ಆ ವಿಶೇಷದ್ರವವನ್ನು ಗುಟುಕರಿಸುತ್ತ ಆಕೆಯ ಕೋಲುಮುಖದ ಗೆರೆಗಳನ್ನೆ ದಿಟ್ಟಿಸುತ್ತ ಇರುತ್ತಿದ್ದೆ. ಆಗೆಲ್ಲ ಆಕೆ ಕಾಗೆಗುಬ್ಬಚ್ಚಿ ಪಕ್ಕಪಕ್ಕ ಗೂಡುಕಟ್ಟಿಕೊಂಡು ಜಗಳವಾಡಿದ ಕಥೆಯೊಂದನ್ನು ಹೇಳುತ್ತಿದ್ದರು. ಬಿಸಿಲೇರುತ್ತಿದ್ದ ಹಾಗೆ ಆಕೆಯ ವಯಸ್ಸಿನ ಹಲವಾರು ಮುದುಕಿಯರು ಕಾಫಿಕುಡಿಯಲೆಂದೇ ಮೆಲ್ಲನೆ ಬಂದು ಕೂರುತ್ತ ನನ್ನ ಮೂಗು ಕೆನ್ನೆ ಹಿಂಡುತ್ತ ಇರುತ್ತಿದ್ದರು. ಅವರೆಲ್ಲರ ದಿನನಿತ್ಯದ ಕತೆಗಳ ಭರಾಟೆ ಪ್ರಾರಂಭವಾಗುತ್ತಿತ್ತು. ಏನೂ ಆರ್ಥವಾಗದೆ ಇದ್ದರೂ ಸುಮ್ಮನೆ ಕುಳಿತು ಎಲ್ಲವನ್ನು ಕೇಳುತ್ತಿದ್ದೆ- ಇದೆಲ್ಲ ಯಾವಾಗಲೂ ಹೀಗೇ ಇರುತ್ತದೆ ಎಂಬ ಸಂತಸದೊಡನೆ.
ನನ್ನಜ್ಜಿ ತೀರಿಕೊಂಡ ದಿನ ನನ್ನನ್ನು ವಿಪರೀತ ಗಲಾಟೆಮಾಡಿದೆನೆಂದು ಪಕ್ಕದ ಮನೆಯ ಕೋಣೆಯೊಂದರಲ್ಲಿ ಕೂಡಿಹಾಕಿದ್ದರು. ನಾನು ಅಜ್ಜಿಯ ಬಾಯಿಂದ ಕಾಗೆಗುಬ್ಬಚ್ಚಿಯ ಕಥೆ ಕೇಳಬೇಕೆಂದು ಒಂದೇಸವನೆ ಚೀರಾಡುತ್ತಿದ್ದೆನಂತೆ. ಅಜ್ಜಿಯ ಗೆಳತಿಯರಾಗಿದ್ದ ಮುದುಕಿಯರೆಲ್ಲ ಒಬ್ಬೊಬ್ಬರಾಗಿ ಬಂದು ಆಕೆಯ ಸೀರೆಗಳನ್ನು ನೆನಪಿಗಾಗಿ ಇಸಿದುಕೊಂಡುಹೋಗಿ ನಮ್ಮ ಪಾಲಿಗೆ ಆಕೆಯ ಕೆಲವು ವಾಯಿಲ್ ಸೀರೆಗಳು ಉಳಿದುಕೊಂಡಿದ್ದವು. ನಾನು ಆಗಾಗ ಆಕೆಯ ಮರದ ಟ್ರಂಕು ಬಿಚ್ಚಿ ಅವನ್ನು ಮುಟ್ಟಿ ಖುಶಿಪಡುತ್ತಿದ್ದೆ. ಆಮೇಲೆ ಅವೇನಾದವೊ ತಿಳಿಯದು.
ನನಗೆ ಅರ್ಥವಾಗದ ವಿಚಿತ್ರ ನೋವುಗಳು, ಹೊಯಿಲಾಟಗಳು ಶುರುವಾಗಿದ್ದು ನಿನ್ನೆ ಟ್ರಕ್ ಡ್ರೈವರುಗಳಿಗೋಸ್ಕರ ಕಾಯುತ್ತ ನಿಂತಿದ್ದ ಹೈವೇ ಹೆಂಗಸೊಬ್ಬಳನ್ನು ನೋಡಿದ ಮೇಲೆ. ಮೈಗಂಟುವ ಪೀಚ್ ಬಣ್ಣದ ಸಲ್ವಾರುಕಮೀಜು, ಅದಕ್ಕೆ ಯಾವ ವಿಧದಲ್ಲಿಯೂ ಹೊಂದದ ಅಚ್ಚಹಸಿರು ಬಣ್ಣದ ವೆಯಿಲು ತೊಟ್ಟು ಟೋಲ್ ಗೇಟಿಂದ ಸ್ವಲ್ಪ ದೂರದಲ್ಲಿ ನಿಂತಿದ್ದ ಆಕೆ ಮಳೆಯಿಂದ ರಕ್ಷಣೆಗೋ ಏನೋ, ಒಂದು ಪ್ರಿಂಟುಗಳಿರುವ ಕಾಟನ್ ಬಟ್ಟೆಯನ್ನು ತಲೆಗೆ ಸುತ್ತಿಕೊಂಡಿದ್ದಳು. ಬಸ್ಸು ನಿಂತಿದ್ದ ಐದು ನಿಮಿಷಗಳೂ ಆಕೆಯ ಮೇಲಿಂದ ನನಗೆ ಕಣ್ಣು ಕೀಳುವುದು ಅಸಾಧ್ಯವಾಗಿತ್ತು.
ಆಕೆಯ ಮುಖದಲ್ಲಿ ವರುಷಗಟ್ಟಲೆಯ ಅಲೆಮಾರಿತನ, ಉದ್ವಿಗ್ನತೆ, ಕಾದು ಉಂಟಾದ ಬೇಸರಗಳು ಹಾಗೂ ಹುಟ್ಟಲಾರಂಭಿಸಿದ್ದ ಸುಕ್ಕುಗಳು ಎಷ್ಟೊಂದು ಸ್ಪಷ್ಟವಾಗಿದ್ದುವೆಂದರೆ ನನಗೆ ಯಾವಾಗಲೋ ಕೇಳಿದ್ದ ಹಿಂದೂಸ್ತಾನೀ ಹಾಡೊಂದರ ಸಾಲುಗಳು ಒತ್ತರಿಸಿಕೊಂಡು ನೆನಪಾದವು..
ಸಾವನ್ ಬೀತೀ ಜಾಯೆ ಪೀಹರವಾ..
ಮನ್ ಮೋರಾ ಲಲಚಾಯೆ ರಹೇ
ಐಸೆ ಗಯೋ ಪರದೇಸ್ ಪಿಯಾ ತುಮ್..
ಚೈನ್ ಹಮೇ ನಹಿ ಆಯೆ ರಹೇ
ನಾನು ಆಕೆಯನ್ನೆ ಮೈಮರೆತು ದಿಟ್ಟಿಸುತ್ತಿದ್ದನ್ನು ನೋಡಿದ ಪಕ್ಕದ ಸೀಟಿನವ ನನ್ನನ್ನೆ ಕುತೂಹಲದಿಂದ ನೋಡಲಾರಂಭಿಸಿದ. ನಾನು ಆತನನ್ನೆ ದುರುಗುಟ್ಟಿ ನೋಡಲಾರಂಭಿಸಿದೆ. ತಿರುಗಿ ಏನೋ ಗೊಣಗಿಕೊಂಡು ಸುಮ್ಮನಾದ.
ಈ ಹೈವೇ ಹೆಂಗಸಿನ, ಮುದುಕಿಯರ ಮೈ ಮುಖಗಳ ಸುಕ್ಕುಗಳ ಪರಿವೆ ನನಗೇಕೆ ಬಂತೊ? ಹೊರಗೆ ವಿಪರೀತ ಚಳಿ ತುಂಬಿಕೊಂಡಿರಬೇಕು. ಯಾರಾದರೂ ಸೌದೆಒಲೆಯ ಪಕ್ಕ ಕೂತುಕೊಂಡು ಒಂದು ರಾಶಿ ಕಥೆ ಹೇಳಬೇಕು. ಹಗಲುರಾತ್ರಿಯೆನ್ನದೆ ಕೂತುಕೊಂಡು ಕೇಳಬೇಕು. ನಾನೂ 'ವೆಯಿಟಿಂಗ್ ಫಾರ್ ಗೋಡೋ' ನಾಟಕದ ಕ್ಯಾರೆಕ್ಟರುಗಳ ತರಹ ಅಸಂಗತವಾಗಿ ಏನೇನೆಲ್ಲ ಅಂದುಕೊಂಡು ಏನನ್ನೋ ಕಾದುಕೊಂಡು ಕುಳಿತಿದ್ದೇನಲ್ಲ ಅನ್ನಿಸಿ ನಗು ಬಂತು.
ಅಷ್ಟು ದೂರದಲ್ಲಿ ಹೂಮಾರುವ ಮುದುಕಮ್ಮನ ಗೂನುಛಾಯೆ ಕಾಣುತ್ತಿದೆ.