ಇವತ್ತಿನ(4 ಮಾರ್ಚ್ 2008) ಟೈಮ್ಸ್ ಆಫ್ ಇಂಡಿಯಾ(English) ಓದ್ರಿ. ಜೊತೆಗೆ ಎಲ್ಲಾ ಕನ್ನಡ ಪತ್ರಿಕೆಗಳನ್ನೂ. ನೆನ್ನೆ Sasken ಕಂಪನಿಯ ಕೆನಡಾ ಮೂಲದ ವ್ಯಕ್ತಿಯೊಬ್ಬ ಕನ್ನಡ, ಕನ್ನಡಿಗರ ಬಗ್ಗೆ ಅವಹೇಳನಕಾರಿಯಾಗಿ 'ಕವನ' ಬರೆದಿದ್ದಕ್ಕೆ ಕ.ರ.ವೇ ಕಾರ್ಯಕರ್ತರು ದೊಮ್ಮಲೂರು, ಬೊಮ್ಮನಹಳ್ಳಿ ಬ್ರಾಂಚುಗಳ ಮೇಲೆ ಧಾಳಿ ಮಾಡಿ, ಗಾಜು ಕಂಪ್ಯೂಟರು, ಸೋಫಾ ಎಲ್ಲಾ ಹಾಳು ಮಾಡಿದ್ದಾರೆ. (ಬಾಗ್ಮನೆ ಟೆಕ್ ಪಾರ್ಕಲ್ಲಿ ಇನ್ನೊಂದು ಬ್ರಾಂಚು ಇದೆ. ತಿಳಿದಿದ್ದರೆ ಅದಕ್ಕೂ ಕಲ್ಲಿಬೀಳುತ್ತಿದ್ದವೇನೋ!) ಆದರೆ ಇದಕ್ಕೆಲ್ಲಾ ಏನು ಕಾರಣ? ಕಂಪನಿ ಹೆಚ್.ಆರ್. ಗಳೇನು ಸಗಣಿ ತಿನ್ತಿದ್ರಾ? ಕಂಪನಿಯ ಎಲ್ಲಾ ಉದ್ಯೋಗಿಗಳ ವರ್ತನೆ ಬಗ್ಗೆ "ವಿಶೇಷ ನಿಗಾ" ಇಡುವ ಇವರು ಇಂಥಾ ಭಾಷಾ ಅವಹೇಳನಕಾರಿಯ ಅಂಶದ ಬಗ್ಗೆ ಗಮನ ಹರಿಸಲಿಲ್ಲವಾ? ಇಷ್ಟೊಂದು ದೊಡ್ಡ ಆಘಾತವಾದಗಲೇ ಸರಿಪಡಿಸಿಕೊಳ್ಳಬೇಕಾ?
ನಿನ್ನೆಯೆಲ್ಲಾ ಟಿ.ವಿ.9 ನಲ್ಲಿ ಬೆಳಗಿಂದಾ ಸಂಜೆ ತನಕ ಪ್ರಸಾರವಾಗಿತ್ತು ಈ ಸುದ್ದಿ. ಇಂದಿನ ಎಲ್ಲ ಕನ್ನಡ ಪತ್ರಿಕೆಗಳಲ್ಲೂ ಬಂದಿದೆ, ಅದೂ ಹೆಡ್‌ಲೈನಾಗಿಯೇ. ನಾನು ಮೊದಲು ಹೇಳಿದ್ದು ಇಂಗ್ಳೀಷಿನ "ಟೈಮ್ಸ್ ಆಫ್ ಇಂಡಿಯಾ" ನೋಡ್ರಿ ಅಂತಾ. ನಿನ್ನೆ ಕಂಪನಿ ಉದ್ಯೋಗಿಗಳಿಗೆಲ್ಲಾ ಮಧ್ಯಾಹ್ನ 2.30 ಕ್ಕೇ ರಜೆ ಘೋಷಿಸಿ, ಮನೆಗೆ ಕಳುಹಿಸಿದ್ದಾರೆ. ಒಂದು ಬಹುರಾಷ್ಟ್ರೀಯ ಕಂಪನಿಯು ತನ್ನೆಲ್ಲಾ ಉದ್ಯೋಗಿಗಳಿಗೆ ಆಕಸ್ಮಿಕ ರಜೆ ಘೋಷಿಸಿದರೆ, ಕಂಪನಿಗೆ ಕಲ್ಲು ಬಿದ್ದರೆ ಅದು ಮುಖಪುಟದಲ್ಲಿ ಬರದಷ್ಟು 'ಕೆಳದರ್ಜೆ ಸುದ್ದಿ' ಅದಕ್ಕೇ ಟೈಮ್ಸ್‌ನಲ್ಲಿ 5ನೇ ಪುಟದಲ್ಲಿ ಪೇಜ್ ಫಿಲ್ಲರ್ ಆಗಿದೆ. ಆತ ಬರೆದ ಅವಹೇಳನಾಕಾರಿ ಕವನ ಪ್ರಕಟವಾಗಿಲ್ಲ. ಅವರಿಗೆ ಅದು ಸಿಗಲಿಲ್ಲವೆಂದಲ್ಲ. ಬೆಂಗಳೂರಿನ 'ಇಮೇಜು' ಜಾಗತಿಕ ಮಟ್ಟದಲ್ಲಿ ಕೆಡಬಾರದಲ್ವಾ ಅದಕ್ಕೆ..! ಪೋಲೀಸರು ಕೇಸು ದಾಖಲಿಸಿಕೊಂಡಿದ್ದಾರೆ ಅಂತ ಮಾತ್ರ ಪ್ರಕಟಿಸಿದೆ. ಎಷ್ಟೇ ಆಗಲಿ ಟೈಮ್ಸ್ ಕನ್ನಡಕ್ಕೆ ಯಾವಾಗ ನಿಯತ್ತು ಮೆರೆದಿತ್ತು? ಈ ಸುದ್ದಿ ಮುಖಪುಟದಲ್ಲಿ ಪ್ರಕಟವಾಗಲಿಲ್ಲ ಯಾಕಂದ್ರೆ ತಪ್ಪು ಕಂಪನಿಯದು. ತಪ್ಪೇನಾದ್ರೂ ಕನ್ನಡದವರದ್ದಾಗಿದ್ದರೆ, ಮುಖಪುಟದಲ್ಲಿ namma benaguru ವ್ಯಕ್ತಿಗಳಿಂದ ಹಲ್ಲೆ, ದಾಂಧಲೆ ಅಂತೆಲ್ಲಾ ಬರೀತಿತ್ತು..!
ಮೊನ್ನೆ ಮೊನ್ನೆ ನೆಡೆದ ಕನ್ನಡ ರಾಜ್ಯೋತ್ಸವದ ವಿಚಾರನೇ ತೊಗೊಳ್ಳಿ. ಇಡೀ ರಾಜ್ಯಕ್ಕೆ ರಾಜ್ಯಾನೇ ಸಿಂಗಾರ ಮಾಡಿಕೊಂಡು ಕನ್ನಡ ರಾಜ್ಯೋತ್ಸವ ಆಚರಿಸುತ್ತಾ ಇದ್ರೆ, ಒಂದು ಸಾಲಾದ್ರೂ ಬಂದಿತ್ತಾ ಟೈಮ್ಸ್‌ನಲ್ಲಿ? ಅಸಲಿಗೆ ಕನ್ನಡವೇ ಬರದ ಇಬ್ಬರು ಬೇನಾಮಿ ವ್ಯಕ್ತಿಗಳು(ಜೆನ್ನಿಫರ್, ಧ್ಯಾನ್) ಕನ್ನಡ ಬಾವುಟ ಹಿಡ್ಕಂಡಿರದು ಫೋಟೋ ಬಂದಿತ್ತು we are so proud to hold this flag ಅನ್ನೋ ಶೀರ್ಷಿಕೆಯೊಂದಿಗೆ ಐನಾತಿ Bangalore Timesನಲ್ಲಿ ಬಂದಿತ್ತು..!
ಅದೇ ಬೆಂಗಳೂರಲ್ಲಿ ಬಾರು, ಪಬ್ಬು, ಗಬ್ಬು ಎಲ್ಲಾ ಸಮಾವೇಶ ನೆಡೆಸಲಿ ಅಲ್ಲಿಯ ವರದಿ ಮುಖಪುಟದಲ್ಲಿ ಪ್ರಕಟವಾಗುತ್ತೆ! ಇನ್ನಾದ್ರೂ ಗೊತ್ತಾಯ್ತಾ ಕನ್ನಡದವರು ಹೋರಾಡಬೇಕಾಗಿರೋದು ಬೆಂಗಳೂರಲ್ಲಿ ಝಾಂಡಾ ಊರಿರುವ ಪರ್ದೇಸಿಗಳೊಂದಿಗೆ ಮಾತ್ರವಲ್ಲ. ಬರೀ ಪರ್ದೇಸಿಗಳಿಗೆ ಪ್ರಚಾರ ಸೌಲಭ್ಯ ಒದಗಿಸಿ ಅವರಿಗೆ 'ಸ್ವಲ್ಪವೂ ನೋವಾಗದಂತೆ' ನೋಡಿಕೊಳ್ಳುವ ಟೈಮ್ಸ್‌ನಂಥಾ ಇಂಗ್ಳೀಷ್ ಪತ್ರಿಕೆಗಳ ಜೊತೆಗೆ!
ಟೈಮ್ಸ್ ಪತ್ರಿಕೆಯಾಗಿ 'ದಲ್ಲಾಳಿ' ಕೆಲ್ಸನೂ ಮಾಡುತ್ತೆ. ಪಬ್‌ಗಳು ರಾತ್ರಿ 11.30ಕ್ಕೆ ಮುಚ್ಚುತ್ತಿದ್ದವು. ಇದನ್ನ 1.30ರ ವರೆಗೆ ವಿಸ್ತರಿಸಲು ಒತ್ತಡ ಹಾಕುವಲ್ಲಿ ಟೈಮ್ಸ್ ಯಶಸ್ವಿಯಾಗಿದೆ. ಬೆಂಗಳೂರಲ್ಲಿ ಪಬ್ಬುಗಳು 11.30ಕ್ಕೇ ಮುಚ್ಚಿಬಿಟ್ರೆ ಜಾಗತಿಕ ಮಟ್ಟದ 'ಕಾಸ್ಮೋಪಾಲಿಟನ್' ನಗರದ ಚರ್ಯೆ ಬದಲಾಗಿಹೋಗುತ್ತದೆ ಅಂತೆಲ್ಲಾ ಬರೀತು. ಡಿಸ್ಕೋಗಳಲ್ಲಿ ಡ್ಯಾನ್ಸ್ ಬಂದ್ ಮಾಡಿದಾಗ ಎಸ್ಸೆಮ್ಮೆಸ್ ಅಭಿಪ್ರಾಯ ಸಂಗ್ರಹಣೆಗೆ ತೊಡಗಿತು. ಈ ಅಭಿಪ್ರಾಯ ಸಂಗ್ರಹಗಳನ್ನು ಯಾವರೀತಿ ಬೇಕಾದ್ರೂ ಉಪಯೋಗಿಸಿಕೊಳ್ಳಬಹುದು ಬಿಡಿ. ಏನು ಬರೆಯಬಹುದಾಗಿತ್ತೋ ಅದನ್ನೇ ಬರೀತು.
ನಿನ್ನೆ ಪಾರ್ಟಿಗೆ ಯಾರ್‌ಯಾರು ಬಂದಿದ್ರು, ಯಾವಳು ಯಾವನ ಜೊತೆ ನಿನ್ನೆ ಮಲಗಿದ್ದಳು, ಇವತ್ತು ಯಾರ ಜೊತೆ ಮಲಗ್ತಾಳೆ, ನಿನ್ನೆ ಯಾವಳು ಚಡ್ಡಿ ಪ್ಯಾಂಟಿ ಹಾಕಿಕೊಂಡು ಮಲಗಿರಲಿಲ್ಲ ಅಂತಾ ಲಂಗ ಎತ್ತಿ ನೋಡಿಕೊಂಡು ಬಂದು ವರದಿ ಮಾಡುವ Banaglore Times ಹೊಂದಿರುವ The Times of India ಬಗ್ಗೆ ಕನ್ನಡಿಗರು ನಿರೀಕ್ಷೆ ಮಾಡುವಂಥದ್ದೇನೂ ಇಲ್ಲ. ಆದರೂ ಬೆಂಗಳೂರಲ್ಲಿ ಸರ್ಕ್ಯುಲೇಷನ್ ಇರೋ ಪತ್ರಿಕೆಯಲ್ಲಿ ಬೆಂಗಳೂರು, ಬೆಂಗಳೂರನ್ನ ರಾಜಧಾನಿಯಾಗಿ ಹೊಂದಿರುವ ಕರ್ನಾಟಕದ ಬಗ್ಗೆ ಸುದ್ದಿ ಪ್ರಕಟವಾಗಬೇಕು ಅಂತಾ ಬಯಸುವುದರಲ್ಲಿ ತಪ್ಪೇನಿದೆ?
ಏಕೆ ದೂರಾದೆ ಪ್ರಿಯೇ...
ಮನದ ಮುಗಿಲಿಂದ ಮಿಂಚಿನಂತೆ ಬಳುಕಿ..?
ಮನದ ಮಾತುಗಳು ಕೇಳದಾದವೇನು?
ಹೃದಯದಾಲಾಪ ಕೇಳದಾಯಿತೇನು?
ಕಟ್ಟಿದ ಕನಸಿನ ಕಾರ್ಮೋಡಗಳೇಕೋ ಮಳೆಯಾಗಿ ಸುರಿಯಲಿಲ್ಲ
ಹೃದಯದ ಮೇಲೆ ನಿನ್ನ ಹೆಸರ ಬರೆಯಲಿಲ್ಲ.
ಉತ್ತರಗಳೇ ಇಲ್ಲ.
ಪ್ರಶ್ನೆಗಳೇ ಎಲ್ಲ!
"ಉತ್ತರೆ"ಯಾಗು ಬಾ ಪ್ರಿಯೆ..!
ಮುನಿಸೇಕೆ ನನ್ನ ಕನಸಿನ ಕನ್ಯೆ?
ಹೇಳೊಮ್ಮೆ ಉತ್ತರವ ಮನದನ್ನೆ
ನಿನ್ನೀ ಮನಸೇಕೆ ಕನವರಿಸದೇ ನನ್ನ ಬಗ್ಗೆ..?
ನಾನಿರದ ಬಾಳಿನಲಿ ಕಂಡೀತೇ ನಗೆ ಬುಗ್ಗೆ..?!
ಬದುಕು-ಭಾವಗಳ ಬೆಸೆಯುವ ಅನುಬಂಧ
ಮಸುಕಾಯಿತೇ ಮಧುರ ಭಾವಬಂಧ?
ಎಲ್ಲಿ ಕಣ್ಮರೆಯಾಯಿತು ಸ್ನೇಹದ ಸಲುಗೆ
ಭಾವ-ಭಾವಗಳ ಬೆಸೆಯುವ ಬೆಸುಗೆ?
ಕಳೆದ ಕ್ಷಣಗಳ ಬೆಚ್ಚಗಿಟ್ಟಿದ್ದೇನೆ
ಈ ಹೃದಯದಾ ಅಂತರಾಳದಲಿ
ಕನವರಿಸುತ್ತಿದ್ದೇನೆ, ಬೆದರುತ್ತಿದ್ದೇನೆ
ಕೊನೆಯಾಯಿತೇ ಎಂದು ಪ್ರೇಮ, ಸ್ನೇಹದಲ್ಲಿ....
ಹೃದಯ ಹೃದಯಗಳ ನಡುವಿನ ಅನುಬಂಧ ಸದಾ ಇರಲಿ.
ಭಾವನೆಗಳ ಬೆಸೆದ ಅನುಕ್ಷಣವೂ ಅನುಗಾಲ ಹಸಿರಾಗಿರಲಿ.
ನೀ ಎಲ್ಲಾದರೂ ಇರು, ಹೇಗಾದರೂ ಇರು
ಹೃದಯದಾ ಮೂಲೆಯೊಂದನ್ನು ನನಗಾಗಿ ಇಟ್ಟಿರು..!
ಕನಸು ಮಾರುವ ಕಾರ್ಖಾನೆ.
ವಿಧಾನ ಸೌಧದಂಥಾ ಭವ್ಯ ಅರಮನೆ.
ಹೊಸತನ, ಹೊಸ ಹುರುಪು, ನವಚೈತನ್ಯ
ನನ್ನಂಥ ಕನಸು ಕಂಗಳ ಯುವಕನಿಗೆ ಎಲ್ಲ ಅನನ್ಯ.
ಹೊಸ ದಿಗಂತದೆಡೆ ಕೈಚಾಚಿ,
ಹೊಸ ಅನುಭವಗಳ ಹೊರಚಾಚಿ
ನಿಂತಿದ್ದೇನೆ ನಾ ಇಲ್ಲಿ ಅನನುಭವಿ.
ಮಾಯಾ ಲೋಕದ ಅನನುಭವಗಳ ಅನುಭವಿ!
ಒಂದು ದಿಗಂತದಲ್ಲಿ ನಾನು,
ಮತ್ತೊಂದು ದಿಗಂತಕ್ಕೆ ನನ್ನ ಕನಸು.
ಮಧ್ಯೆ ಸಾಗಿದರೂ ಸಾಗಿದರೂ ಸಾಗುವ ದಾರಿ ತೋರುವ ಎಂಜಿನಿಯರಿಂಗು
ಇವೆಲ್ಲ ಸಂಬಂಧಗಳ ನಡುವೆ ಮೂಕ ಪ್ರೇಕ್ಷಕ ಮನಸು!
ಮೊಗೆ-ಒಗೆದು ತೆಗೆದರೂ ಹಳತೆಂಬುದಿಲ್ಲ.
ತೆರೆ-ತೆರೆದು ನೋಡಿದರೂ ವಿಸ್ಮಯವೇ ಎಲ್ಲ!
ಲೋಕಕ್ಕೊಂದು ಕಾಣ್ಕೆಗೆ ಕನಸಿನಲೂ ನನಸಿನಲೂ ಅದೇ ಗುಂಗು.
ಹೊಸತನದ ಸಾಕ್ಷಿಗೆ, ದಿಗ್ದರ್ಶನಕೆ ಎಂಜಿನಿಯರಿಂಗು.
ನಾನು ನನ್ನವರಿಲ್ಲವೆಂಬ, ಇದ್ದರೂ ಕಡಿಮೆ ಎಂಬ ಅನಾಥ ಪ್ರಜ್ಞೆ.
ಇಂದಲ್ಲ ನಾಳೆ ನಮ್ಮರಾಗುವರು ಬಿಡು, ಅವಜ್ಞೆ.
ಕನಸಿನ ಕನ್ನಿಕೆಯರಾರೂ ದೊರಕಲಿಲ್ಲ ಸ್ನೇಹಕ್ಕೆ
ಬಿಡಿ, ಬೇಸರವಿಲ್ಲ ಅದಕ್ಕೆ..!
ಕಾರಿಡಾರುಗಳಲ್ಲಿ ತಾಜಾ ತರುಣಿಯರ ಮೆರವಣಿಗೆ.
ಪ್ರೇರಣೆ, ಪ್ರೇರೇಪಣೆಯೇ ಈ ಬರವಣಿಗೆ!
ಏಕೆ ಹಿಡಿಸಲಿಲ್ಲವೋ ನಾನು ತಿಲೋತ್ತಮೆಯರಂಥ ತರುಣಿಯರಿಗೆ
ಬಹುಷಃ ಇರಬೇಕೇನೋ ನನ್ನ ಕೊರವಣಿಗೆ!
ಕಾಲ ಬದಲಾದಂತೆ..,
ಕನಸುಗಳು ಮಾಸುತ್ತವೆ,
ಮನಸುಗಳು ಮಾಗುತ್ತವೆ,
ಕಾಯ ಬಾಗುತ್ತದೆ,
ಹೊಸತನವೂ ಹಳತಾಗುತ್ತದೆ.
ಹಳತಾಗುವ ಮುನ್ನ ಹೊಸತನವನ್ನೊಮ್ಮೆ
ಎಡತಾಗುವ, ಸವಿಯುವ ಬಯಕೆ!
ಈಗ ಸಿಕ್ಕವರಾರೂ ಮುಂದೆ ಸಿಗುವುದಿಲ್ಲ.
ಮುಂದೆ ಸಿಗುವವರನ್ನು ಒಮ್ಮೆಯೂ ನೋಡಿಲ್ಲ.
ಸಿಕ್ಕಾಗ ಮಜಾ ಉಡಾಯಿಸು ಎನ್ನುತ್ತೆ ಉಡಾಫೆಯ ಬ್ರೈನು.
ಯಾರು ಸಿಕ್ಕರೇನು, ಸಿಗದಿದ್ದರೇನು ಸಾಗುತ್ತದೆ ಜೀವನದ ಟ್ರೈನು!
ಮೊದಲ ತೊದಲುಗಳೆಲ್ಲ ಈಗ ಧ್ವನಿಯಾಗಿವೆ.
ಅದಲು ಬದಲಾಗಿ ಪ್ರತಿಧ್ವನಿಯಾಗಿವೆ.
ಮೊದಲು ಮೊದಲು ಎಲ್ಲವೂ ಸರಿಯಾಗಿರುತ್ತದೆ.
ಖುಶಿ ಕೊಡುತ್ತದೆ, "ಮೊದಲ" ವೈಶಿಷ್ಟ್ಯವೇ ಅದು ತಾನೇ..?
ಹಿಂತಿರುಗಿ ನೋಡಿದಾಗ,
ಮಸುಕು ಮಸುಕಾದ ಕನಸುಗಳ ಸಂತೆ.
ಪಿಸುಮಾತಿನ ಗುಸು-ಗುಸುಗಳ ಅಂತೆ ಕಂತೆ.
ಏನೇ ಆಗಲಿ, ಎಲ್ಲ ಇರಬೇಕಲ್ಲ
ನಾವು ಇಷ್ಟಪಟ್ಟಂತೆ..?..!!
ನಾನೊಬ್ಬ ಹುಚ್ಚ
ಹಿ೦ದೂ ಇಲ್ಲ, ಮು೦ದೂ ಇಲ್ಲ,
ಮಧ್ಯೆಯಾದರೂ ಇರಬೇಕಿದ್ದ
ನಾನೇ ಇಲ್ಲ.
ತಲೆಕಾಲು, ಹೊಟ್ಟೆಬೆನ್ನು
ಜಡ ಹೃದಯ, ಬರಿಯ ಒಡಲು
ಕೆಳಗೆ ಭೂಮಿ, ಮೇಲೆ ಆಕಾಶ,
ಮಧ್ಯೆ ನಾನೊಬ್ಬ ನೀಚ.
(೫೮)
ಮನದಲಿ ಜಿನುಗಿದ ಹನಿ ಹನಿಗಳು ಸೇರಿ ಭಾವ ಸಿಂಧುವಾಗಿದೆ...
ಹೆಜ್ಜೆ ಗುರುತು
ಮಳೆಗಾಲದೊಂದು ತಣ್ಣನೆಯ ರಾತ್ರಿಯಲಿ,
ಕಪೋಲ ಚುಂಬಿಸುವ ನಿನ್ನ ನೆನಪಿನಶ್ರು ಧಾರೆಯಲಿ,
ಒದ್ದೆಯಾದ ಮನದ ಅಂಗಳದ ತುಂಬೆಲ್ಲಾ,
ನೀ ನಲಿದು ಹೋದ ಹೆಜ್ಜೆಯದೇ ಗುರುತು
ಜಾಣ ಕಿವುಡು
ಹೃದಯದ ಪಿಸುಮಾತುಗಳಿಗೂ ಸ್ಪಂದಿಸಿ
ಕಿವಿಯಾದವಳೇ ಕೇಳು
ಈಗ ಕೂಗಿ ಕರೆದರೂ ಕೇಳೋಲ್ಲಾ ಅಂದ್ರೆ
ನಂಬೋದು ಹ್ಯಾಗೆ ಹೇಳು?
ಗಾಯ
ಕಣ್ಣಂಚಿನ ತೇವ ಆರಿ ಹೋದೀತು
ಇಂದಲ್ಲಾ ನಾಳೆ...
ಎದೆಯೊಳಗಿನ ಗಾಯಕ್ಕೆ
ಮದ್ದು ಗೊತ್ತಿದ್ದರೆ ಹೇಳೆ...
ಸುಳ್ಳೇ...?
ಈಗ ಕತ್ತಲಾದ ಮಾತ್ರಕ್ಕೆ
ಸೂರ್ಯ ಹುಟ್ಟಿದ್ದು ಸುಳ್ಳಾಗೋದೇ
ಮನಸು ಮುರಿದ ಮಾತ್ರಕ್ಕೆ
ಪ್ರೇಮಿಸಿದ ಹೃದಯ ಕಲ್ಲಾಗೋದೇ?
ವಿದ್ರೋಹ
ನಿನ್ನ ಪ್ರೀತಿಯ ಕೋಟೆಯೊಳಗೆ
ಸುರಕ್ಷಿತ ಅಂದುಕೊಂಡಿದ್ದೆ,
ಒಳಗೇ ಹೆಡೆಯೆತ್ತಿದ ನಿನ್ನ
ವಿದ್ರೋಹದ ಅರಿವಾಗುವ ತನಕ !
ಅಂತಃಸಾಕ್ಷಿ
ನಿನ್ನ ನಂಬಿಕೆದ್ರೋಹಕ್ಕೆ
ಶಿಕ್ಷೆ ಕೊಡಿಸೋಣ ಅಂದುಕೊಂಡರೆ
ಸಾಕ್ಷಿ ತರಲೆಲ್ಲಿಂದ ಹೇಳು?
ನಿನ್ನ ಅಂತಃಸಾಕ್ಷಿಗಿಂತ
ಅನ್ಯ ಸಾಕ್ಷಿಯು ಬೇಕೆ
ಏಕಾಂತದಲೊಮ್ಮೆ ಕಿವಿಗೊಟ್ಟು ಕೇಳು
ಹನಿದುಂಬಿ
ಎಲ್ಲೋ ಸುರಿದ ಮಳೆಗೆ ನದಿ
ಕೆಂಪಾಗಿ ಮೈತುಂಬಿಕೊಂಡಂತೆ
ಎಲ್ಲೋ ಇರುವ ನಿನ್ನ ನೆನಪಾಗಿ
ನನ್ನ ಕಣ್ತುಂಬಿ ಬಂತು
ಆದರೂ...
ಎತ್ತಲಾರೆ ನಿನಗಾಗಿ ಹತ್ತಾರು ಜನ್ಮ
ಬೆನ್ನಟ್ಟಲಾರೆ ಹಿಂಬಾಲಿಸಿ ಹಗಲಿರುಳು ನಿನ್ನ
ಆದರೇನು ಮಾಡಲಿ ಮರೆಯಲಾರೆ ಚಿನ್ನ
ನೆನಪಾಗುವೆ ಮತ್ತೊಮ್ಮೆ ಕೊನೆಯುಸಿರೆಳೆಯೋ ಮುನ್ನ
( ಕೊನೆಯ 2 ಕವನಗಳನ್ನು ನನ್ನ ಕವನ ಸಂಕಲನ ‘ಅಂತರಂಗದ ಆಪ್ತಸ್ವರ’ ದಿಂದ ಹೆಕ್ಕಿದ್ದು..)
ಮುಂಜಾನೆ ಮಿಂದು
ದೇವರಿಗೆ ನಮಿಸುವಾಗ
ಅಮ್ಮ ಹೇಳುತ್ತಿದ್ದಳಾಗ,
ಕೈ ಮುಗಿದು ಕಣ್ಮುಚ್ಚಿ ಬೇಡಿದರೆ
ಈಶ ಒಲಿವನೆಂದು..
ಸಂಧ್ಯಾವಂದನೆ ವೇಳೆ
ದೀಪ ಉರಿಸಿ ನನ್ನ ಅಜ್ಜಿ
ರಾಮನಾಮ ಜಪಿಸುತಿರಲು
ಕಣ್ಣೆರಡು ಮುಚ್ಚಿ ನಾನೂ
ದನಿಗೂಡಿಸುತ್ತಿದ್ದೆ..
ಇರುಳ ಬಾನಂಗಳದಲ್ಲಿ
ಕೋಟಿ ತಾರೆಗಳು ಮಿನುಗುವಾಗ
ನಿದ್ದೆ ಬರುತ್ತಿಲ್ಲ ತಾತ,
ಕತೆ ಹೇಳೆಂದು ಸತಾಯಿಸಿದಾಗ
ಸುಮ್ಮನೆ ಕಣ್ಣು ಮುಚ್ಚಿರು
ನಿದ್ದೆ ತಂತಾನೆ ಬರುವುದು
ಎಂದು ಅಪ್ಪ ಗದರಿಸಿದಾಗ
ಕಣ್ಣೆರಡು ಮುಚ್ಚಿ ಮಗ್ಗಲೆಳೆದು
ಆ ಸುಂದರ ರಾತ್ರಿಗಳಲ್ಲಿ ನಿದ್ದೆಗೆ ಜಾರಿದ್ದೆ
ಬಾಲ್ಯವೆಷ್ಟು ಮಧುರವಾಗಿತ್ತು!
ಕಣ್ತೆರೆದರೆ ಸುಂದರ ಲೋಕ
ಮುಚ್ಚಿದರೆ ಸ್ವಪ್ನ ಲೋಕಕ್ಕೆ
ಪಯಣ ಬೆಳೆಸುತಲಿದ್ದೆ
ಕಾಲ ಚಕ್ರವು ತಿರುಗುತಿರಲು
ಪ್ರಸ್ತುತಕ್ಕೆ ಮೊದಲ ಹೆಜ್ಜೆಯಿಟ್ಟು,
ಸುತ್ತ ಕಣ್ಣು ಹಾಯಿಸಿದರೆ...
ಹಗೆ ಹೊಗೆಯಾಡುವ ಜಗದಲ್ಲಿ
ನಗೆ ಮಾಸಿದ ಜೋಲು ಮುಖ!
ಜೀವ ತೆಗೆಯಲು ಕತ್ತಿ ಮಸೆಯುವ ಜನ,
ಇನ್ನೊಂದೆಡೆ,
ಜೀವಕ್ಕಾಗಿ ಬೇಡುವ ಮನ
ಹಣದಾಸೆಗಾಗಿ ಜೀವ ಹಿಂಡುವವರು,
ಬೇಡುವವರು, ಮುಂದೆ ಕೈ ಚಾಚಿ
ಜಗದಳುವಿನ ಮುಂದೆ
ನಿಸ್ಸಹಾಯಕ,ಮೂಕಪ್ರೇಕ್ಷಕ ನಾನು
ಹಿಂಸೆಗಳು ಕಣ್ಮುಂದೆ ನರ್ತನವಾಡಿದರೂ
ನಾ ಬಂಧಿ, ಕಟ್ಟುಪಾಡುಗಳ ಸೆರೆಮನೆಯಲ್ಲಿ
ದನಿಯೆತ್ತಲು ಚಡಪಡಿಸಿ ಸೋತಾಗ
ಎರಡು ಹನಿ ಕಣ್ಣೀರೆರೆದು
ಮತ್ತೆ,
ನನಗಿದರ ಅರಿವೇ ಇಲ್ಲದವನಂತೆ
ಕಣ್ಣು ಮುಚ್ಚಿಕೊಳ್ಳುತ್ತೇನೆ!
ಕಳೆದು ಹೋಗಿದೆ ಕನಸೊಂದು ಹುಡುಕಿಕೊಡುವೆಯಾ
ಹಳೆಯ ನೆನಪುಗಳ ಹಾಳೆಯ ನಡುವೆಲ್ಲೋ..
ಮರೆತು ಹೋಗಿದೆ ರಾಗವೊಂದು ನುಡಿಸುವೆಯಾ
ಅನುರಾಗ ಪಲ್ಲವಿಯ ಚರಣಗಳ ನಡುವೆಲ್ಲೋ...
ಮೂಕವಾಗಿದೆ ಮಾತು ದನಿಗೂಡಿಸುವೆಯಾ
ಏಕಾಂತ ಮೌನದ ಮುಸುಕಿನ ಅಡಿಯೆಲ್ಲೋ...
ಬಾಡಿಹೋಗಿದೆ ವನಸುಮವೊಂದು ಅರಳಿಸುವೆಯಾ
ನೆನಪುಗಳ ಕಾನನದ ನಟ್ಟ ನಡುವೆಯೆಲ್ಲೋ...
ಅಳಿದು ಹೋಗಿದೆ ನಂಬಿಕೆ ಉಳಿಸಿಕೊಡುವೆಯಾ
ಮುರಿದ ಸಂಬಂಧ ಸಂಕೋಲೆಯ ಕೊಂಡಿಯಲೆಲ್ಲೋ...
ಆತ್ಮೀಯತೆಯ ಅರ್ಥ ಕಲಿಸಿಕೊಡುವೆಯಾ
ಕೃತಕ ನಗುವಿನ ಅಲೆಗಳ ನಡುವೆಲ್ಲೋ...!!!
ಇತ್ತ ಚಿತ್ತ ಹಾಯಿಸಿ...
ಗಿಜಿಗುಡುವ ಮಾರ್ಕೇಟ್ ರಸ್ತೆ
ಮೊನ್ನೆಯ ಮಳೆಯಿಂದಾದ ಕೆಸರು ಕುಂಡಗಳು
ಅನಾಥವಾಗಿ ಬಿದ್ದ ಕೊಳೆತ ಕೋಸು
ಉರುಳುರುಳಿ ಬಂದ ನಿಂಬೆ ಹಣ್ಣು
ದೇಖರಿಕೆಯಿಲ್ಲದೇ ನಾರುವ
ಕಾರ್ಪೋರೇಶನ್ ತೊಟ್ಟಿ
ಪ್ಲಾಸ್ಟಿಕ್ ಧೂಮಕ್ಕೆ ತಲೆಯಾನಿಸುವ ಮತ್ತರು
ಚಿಂತೆಯೇಕೋ ಗೆಳೆಯಾ..? ಎಂಬ ಸಮಾಧಾನಗಳು
ರಪ್ಪಡಕ ಕೆಂಪು ಮೆತ್ತಿದ ಸ್ತಂಭ
ತೂತು ಬಿದ್ದ ನಾಲ್ಕಾರು ಪತಾಕೆಗಳು
ಬುಡದಲ್ಲಿ ಒಣಗಿದ ಮೈಸೂರ ಮಲ್ಲಿಗೆಯ ಹಾರ
ಅಲ್ಲಲ್ಲೇ ಕಕ್ಕಕ್ಕೆ ಕುಳಿತ ಸಿಂಬಳ ಸುರುಕ ಕೂಸುಗಳು
ಅವರ ಚೊಣ್ಣದಲ್ಲಿ ಬಣ್ಣಗಳ ದಿಬ್ಬಣ
ಮರೆಮಾಚಲು ಸಮರ್ಥವಾದ ಸೆರಗಿಲ್ಲದೇ
ಉಬ್ಬಿ ಕಾಣುವ ಕಡು ಕಪ್ಪು ಚೆಲುವೆಯ ಸ್ತನ
ರೆಪ್ಪೆಯಾಡಿಸದೇ ದೃಷ್ಟಿ ನೆಟ್ಟ ಪುಂಡರು
ನಿನ್ನದೆನ್ನಲು ತನುವೂ ಇಲ್ಲ, ಮನವೂ ಇಲ್ಲ
ಕಂಗಳಲ್ಲಿನ ಕನಸುಗಳೆಲ್ಲಾ ಸತ್ತು ತೇಲುತ್ತಿವೆ!
ದೂರದಲ್ಲೆಲ್ಲೋ ಚುನಾವಣಾ ಭಾಷಣ
ಮೇರಾ ಭಾರತ್ ಮಹಾನ್...
ಮೈಕ್ ಒದರುತ್ತಿದೆ ಬದಿಯಲ್ಲಿ............
ಟುರುಗುಟ್ಟುವ ಜಾತ್ರೆಯ ಉದ್ದನೆಯ ಪಿಸ್ತೂಲುಗಳು!
ಒಂದೇ ಮೊಳೆಯಲ್ಲಿ ತೂಗುವ, ಮುರಿದ ಫ್ರೇಮಿನ
ಒಡೆದ ಗಾಜಿನ, ಫೋಟೋದಡಿ ನಸು ನಗುವ ಗಾಂಧಿ
ಇತ್ತ ಚಿತ್ತ ಹಾಯಿಸಿ,
ಪಟ್ಟ ತೊಟ್ಟವರೇ...
ಹೇವರವ ಹೈರಾಣಾಗಿಸಿ
ಕೃಪೆ ತೋರಿರಿ...
ಹುಣ್ಣಿಮೆ ರಾತ್ರಿ - ಕುವೆಂಪು.
ಒ ನೋಡದೋ ರಂಜಿಸಿತಿದೆ ರಜನಿಯ ಕೈದೀಪ
ನೀಲಧಿಯಲಿ ತೇಲುತ್ತಿಹ ಜ್ಯೋತಿಯ ಸ್ವರ್ದ್ವೀಪ
ತೆಳುತೆಳ್ಳನೆ ಬೆಳು ಬೆಳ್ಳನೆ ಮುಗಿಲುಣ್ಣೆಯ ರಾಶಿ
ಹೊಂಜನ್ನದಿ ಮಿಂದಂತಿದೆ ಜೇನ್ಮಳೆಯನಿ ಸೂಸಿ
ಸಹ್ಯಾದ್ರಿಯ ಗಿರಿವರ್ಣದ ಕೊನೆಗಾಣದ ಲೀಲೆ
ಬಹುಯೋಜನ ವಿಸ್ತೀರ್ಣದ ವನರಾಜಿಯ ಮಾಲೆ
ಬಾಂದಳದಿಂದಿಳಿಯುತ್ತಿರೆ ಬೆಳ್ದಿಂಗಳ ಗಂಗೆ
ಹೊಳೆಯುತ್ತಿದೆ ಬರೆದಂದದಿ ದೂರದಿ ನದಿ ತುಂಗೆ
ಆಹ್! ಆಲಿಸು ಆಕಾಶದಿ ತೇನೆಯ ಸುರವಾಣಿ
ಜುಮ್ಮೆಂದಿದೆ ಅದನಾಲಿಸಿ ಸಹ್ಯಾದ್ರಿಯ ಶ್ರೇಣಿ
ಸೊಂದರ್ಯದ ಮಧುಪಾನದಿ ವಿಶ್ವವೇ ಉನ್ಮತ್ತ
ಧ್ಯಾನದ ರಸದಾನಂದದಿ ಸೃಷ್ಟಿ ಸಮಾಧಿಸ್ಥ
ಏಂ ನೀರವಮೇಂ ನಿಶ್ಚಲಮೀ ಹಿಣ್ಣಿಮೆಯಿರುಳು
ತಿಂಗಳ ಬೆಳಕಿಂಗಡಲಲಿ ತೇಲಿದೆ ತಿರಿಯರಳು
ಸುಧೆ ತುಂಬಿದ ಮಿದುಬಿಂಬದ ಮಧುಚಂದ್ರಿಕೆ ಮಾಯೆ
ನೆಲಬಾನ್ಗಳನೊಲಿದೊಪ್ಪಿರೆ ದ್ವೈತವು ಬರಿ ಛಾಯೆ
ಓ ರಾತ್ರಿಯೆ ಸಹ್ಯಾದ್ರಿಯೆ ಹುಣ್ಣಿಮೆ ಶಶಿಕಾಂತಿ
ನಿಮ್ಮೆಲ್ಲರ ಸಾನ್ನಿಧ್ಯವೆ ಪರಮಾತ್ಮನ ಶಾಂತಿ
ಹೂಳಿಟ್ಟ ಅಗಾಧ
ಆಸೆಗಳನ್ನ ಮತ್ತೆ
ಹೊರತೆಗೆದು
ಚಿಗುರೊಡೆಯುವಂತೆ
ಮಾಡಬೇಕಿದೆ...........
ಗಾಯಗೊಂಡ
ಎದೆಯ ಸೀಳಿ ಸೀಳಿ
ಮರಣಹೊಂದಿದ
ಕೆಲವು ನೆನಪುಗಳಿಗೆ
ಮತ್ತೆ ಜೀವ ಕೊಡಬೇಕಿದೆ.......
ನಡೆಯಬೇಕಾದ
ದಾರಿಯಲ್ಲಿರುವ
ಕೆಲವು ಮುಳ್ಳುಗಳಿಗೆ
ಹೂವಿನ ಸ್ನೇಹವ
ಮಾಡಿಸಬೇಕಿದೆ..................
ಎಲ್ಲಾ ಕಳೆದುಕೊಂಡ
ಈ ತೋಳುಗಳಿಗೆ
ತಬ್ಬಿಕೊಳ್ಳುವ
ಪರಿಯ ಹೇಳಬೇಕಿದೆ..............
ನೀನಿಲ್ಲದ ನಿನ್ನೆಗಳಿಗೆ
ನೀನಿರುವ ನಾಳೆಯ
ನದಿತೀರದ ಸಂಜೆಗಳ
ಕುರಿತುಹೇಳಲೇಬೇಕಿದೆ...........
ಆಗುಂಬೆಯಂತಾಗಿದ್ದ
ಕಣ್ಣುಗಳಿಗೆ ಸ್ವಲ್ಪ
ಬೆಳದಿಂಗಳನ್ನು ತುಂಬಬೇಕಿದೆ...........
ಮಾತುಗಳಿಲ್ಲದೆ ಮೌನವಾಗಿದ್ದ
ತುಟಿಗಳಿಗೀಗ ಮತ್ತೆ ಬೀಗ
ಹಾಕಿಕೊಳ್ಳುವ ಕಲೆಯ ಕಲಿಸಬೆಕಿದೆ..........
ಬೆಕ್ಕುಗಳಿಗೆ ಬಡಿವಾರವಿಲ್ಲ
ಮೆಲ್ಲನೆ ತೊಡೆಗೇರಿಸುತ್ತವೆ ಗಲ್ಲ
ಹೆಂಗಸರೋ ಗಂಡಸರೋ
ಅಥವಾ ಮತ್ತಿನ್ಯಾರೋ
ವಯಸಿನಂತರವೂ ಇಲ್ಲ
ಲಿಂಗ ಬೇಧವೂ ಇಲ್ಲ
ಉಣ್ಣುವ, ಮಲಗುವ
ಮುಂಚಿನ ಹೊರತು ರಿವಾಜೂ ಸಲ್ಲ!
ಮಡಿಲು ಬೆಚ್ಚಗಿದ್ದರೆ ಸರಿ
ಮಡಿಲೇರಿದ ಬೆಕ್ಕು
ಅಂಗಾಲು ಅಗಲಿಸಿ ನೆಕ್ಕು
ನೀಟಾಗಿ ಮಡಿಸಿ ಮಲಗಿ-
ದರೆ ದೃಷ್ಟಿಯಾಗಬೇಕು
ಮರುದಿನ ತಟ್ಟೆಗೆ ಹಾಕಿದ
ಹಾಲನ್ನೂ ಬಿಡೋವಷ್ಟು
ಅಥವಾ ಕುಡಿದು ಬಿಡೋವಷ್ಟು!
ಪಾಪಿ ಬೆಕ್ಕುಗಳು ಪಾಪದ
ಹಕ್ಕಿಗಳನ್ನು ಹೊಟ್ಟೆಗಾಕಿಕೊಳ್ಳುತ್ತವೆ
ಬರೀ ಚಕ್ಕಳದ ಗೂಡಿನ
ಚೆಂದದ ಬಟ್ಟೆತೊಟ್ಟವಾದರೂ
ತಿನ್ನುವ ಚಪಲವೇಕೋ?
ಮೊನ್ನೆ ಚಿಟ್ಟೆಯ ರೆಕ್ಕೆಯ
ಬಣ್ಣದ ರವೆ ನಮ್ಮನೆ ಬೆಕ್ಕಿನ
ಬಲ ಮೀಸೆಗಂಟಿತ್ತು!
ಬೆಕ್ಕು ನಮ್ಮನೆಯದೋ?
ಲಂಡನ್ನಿನ ರಾಣಿಯದೋ?
ಉದ್ದದ ನಿಲುವಂಗಿ ತೊಟ್ಟ
ಮಾಯಾಂಗನೆಯದೋ?
ಬೆಕ್ಕು ಬೆಕ್ಕಲ್ಲದೇ ಮತ್ತೇನಲ್ಲ!!!
ಹದಗೆಟ್ಟ ತರಕಾರಿ ಪಲ್ಯದೊಡನೆ
ಸೀದು ಹೋದ ಅನ್ನ
ಬೀಡು ಬಿಡುಸಾಗಿ ಎಸೆದದ್ದು
ಪ್ರತೀ ಕೊಚ್ಚಲೂ ಬರೀ ನಾರು
ಅಜ್ಜಿ ಹೇಳುವ ಕಥೆಗಳಂತೆ!
ಬುರುಡೆ ಉರಿಯುವ ಸದ್ದು
ಚಿಟಿ ಪಿಟಿ ಠೇಂಕರಿಸಿದ್ದು, ಠಪ್‌ಗುಟ್ಟಿದ್ದು
ಭಯದ ಅರ್ಥ ಕವುಚಿಕೊಂಡಿದ್ದಲ್ಲೇ
ಎದೆಯ ಮೇಲೆ ಚಿಮುರು ಕೂದಲುಗಳು
ಮೊಳೆಯಲಾರಂಭಿಸಿದಾಗ,
ಬೆವರ ಹನಿಗಳಲ್ಲಿ ಸಾಲುಗಟ್ಟತೊಡಗಿದಾಗ.
ಬೀಡಾಡಿ ಬಸವ ನೀನು, ಬೈಗುಳಗಳ ಬುಟ್ಟಿ,
ತೀರಾ ಕೊನೆಗೆ ಕಿಂಚಿತ್ ಭಾವನೆಗಳನ್ನೂ
ಆಪೋಶನ ತೆಗೆದು ಕೊಂಡಿದ್ದು.
ಶುಷ್ಕ ನೆಲದೊಳಗೆ ಅವಿತೇ ಇದ್ದೆ ನಾನು
ಗಮ್ಯ ಮಾತ್ರ ಅನಂತದೆತ್ತರಕ್ಕೆ ಯಾನ
ಪ್ರೇಯಸಿಯ ಸೆಟೆದ ಮೊಲೆಗಳಿಗೆ ಸಮಾನ
ಯೌವ್ವನದ ಕಸುವು ತುಂಬಿದ ಉಮೇದಿನಲ್ಲಿ
ಅಂದಾಜಿಗೆ ನಿಲುಕದ್ದು ಆಳೆತ್ತರಗಳು!
ಇನ್ನಾದರೂ ಹೊರಟೀತೆ ಮೆರವಣಿಗೆ;
ಪಲ್ಲಂಗವಿರುವ ಸಾಲು ಪಲ್ಲಕ್ಕಿಗಳೊಡನೆ?
ಇಂದಿಗೂ ಬಡಿದಾಡಲು ಸಿದ್ಧ;
ದೃಢವಾಗಿರಲೂ, ಬಂಡೆಗಲ್ಲಿನಂತೆ
ಆದರೆ ಬೆಳ್ಳಂಬೆಳಗಿನ ಹಸಿರಸಿರು ಚಿಗುರು,
ಬೆಚ್ಚಗೆ ತಬ್ಬಿದ ಮಿನುಗುವ ಇಬ್ಬನಿ,
ಪರಿಸ್ಥಿತಿಯನ್ನೇ ಕೆದಕುವ ಮುದಿ ಕೋಲುಗಳು,
ದಪ್ಪನೆಯ ಉಲ್ಲನ್ ಸ್ವೆಟರ್
ಕಪ್ಪು ಫ್ರೇಮಿನ ಅಗಲ ಕನ್ನಡಕದಡಿ
ಮಂಜುಗಟ್ಟಿದ ಅಣಕಿಸುವ ಕಿರುಗಣ್ಣುಗಳು...
ತೀರಾ ಅಧೀರನೆನಿಸುತ್ತಿದೆ
ಕೋಟ್ಯಂತರ ವರ್ಷಗಳೇ ಮುಗಿದು ಹೋದವಾ?
ನನಸಾಗುವ ನಿಟ್ಟಿನಲ್ಲಿ ಬಡಿದಾಡುತ್ತಿದ್ದ
ಕನಸುಗಳೂ ಕದನ ವಿರಾಮ ಘೋಷಿಸಿಬಿಟ್ಟವಾ?
ನನಗೀಗ ಅಂಜಿಕೆ!
ಬದುಕುವ ಭಯ
ಎದೆಯ ಮೇಲಿನ ಕೂದಲುಗಳು
ಮತ್ತೆ ಮತ್ತೆ ನಗುತ್ತಿವೆ
ಕಪ್ಪು ಕಪ್ಪಾಗೇ...
ಅದಕ್ಕೇ ಹೆದರಿಕೆ!!
ನನಗೆ ಎಂಟೋ ಒಂಭತ್ತೋ, ಅಪ್ಪನ ಕಳ
ಕೊಂಡು ತಿಂಗಳೊಂದೋ ಎರಡೋ
ಸಲಿಗೆತ್ತು ಆತನಲ್ಲಿ
ಸಡಗರ"ತ್ತು ಆತನಿದ್ದಲ್ಲಿ
ಈಗ ಆ ಜಾಗದಲ್ಲಿ
"ಷಾದವೋ ತಿಳಿಯದನೋ"ದೆ ಅನ್ನಿಸುತ್ತಿದೆ
ಗುಲಗಂಜಿಯ ಗುಡ್ಡೆ ಹಾಕು
ಅಪ್ಪ ಹುಡುಕಿ ಬರುತ್ತಾನೆ ಎಂದವ
ಹನ್ನೆರಡರ ಮದ್ಯಾಹ್ನದ
ಭೂರೀ ಭೋಜನದ
ನಂತರ ಪತ್ತೆಗೆ ಸಿಗಲಿಲ್ಲ,
’ಡೆಲ್ಲಿ’ಗೇ ಹೋಗಿರಬೇಕು...!
ಬರುವನೇನೋ ಇಂದು, ನಾಳೆ
ಅಮ್ಮ ಭದ್ರ ಮಾಡಿದ್ದ
ಅಪ್ಪನ ಮಾಸಿದ ಪಂಚೆಗೆ
ಗುಲಗಂಜಿ ತುಂಬಿಸಿ ಬಿಗಿಗೊಳಿಸಿದ್ದೇನೆ
ನಡುರಾತ್ರಿ ದಾಟಿದರೂ
ನಿದ್ದೆ ಹತ್ತುತ್ತಿಲ್ಲವಲ್ಲ ?! ಕಾಯು"ಕೆಗೆ
ಕನಸಲ್ಲೂ ಹಾಜರಿ ಕಡ್ಡಾಯ
ಹ್ಞಾ ! ಈಗ ನಿದ್ರೆ ಬರುತ್ತಿದೆ!!
ಆ ’ಕೆಂಪು’ ಮರಗಳ ನಡುವೆ
ಮೊಲಗಳ ಗುಂಪೇ ಅದು?
ಅಸ್ಪಷ್ಟ ಕಾಡೋ, ಕಣ್ಣೋ? ಓಹ್...!
ಗುಲಗಂಜಿ ತುಂಬಿಸಿಟ್ಟ ಚೀಲಗಳು
ಬಹಳಿವೆ ಎಲ್ಲಾ ಅರೆ ಬೆತ್ತಲು
ನನ್ನ ಗಂಟು..., ಅದೋ ಆ ಮೂಲೆಗಿದೆ
ಬಿಳಿ ಮೊಲದ ಸನಿಹದಲ್ಲಿ, ಅಷ್ಟು ಕೆಂಪಗಾಗಿ...!!
ಒಂದು ಎರಡು
ಬಾಳೆಲೆ ಹರಡು
ಮೂರು ನಾಕು
ಅನ್ನ ಹಾಕು
ಐದು ಆರು
ಬೇಳೆ ಸಾರು
ಏಳು ಎಂಟು
ಪಲ್ಯಕೆ ದಂಟು
ಒಂಬತ್ತು ಹತ್ತು
ಎಲೆ ಮುದಿರೆತ್ತು
ಒಂದರಿಂದ ಹತ್ತು ಹೀಗುತ್ತು
ಊಟದ ಆಟವು ಮುಗಿದಿತ್ತು
ಉಂಡಾಡಿ ಗುಂಡ
ಅಜ್ಜಿ ಮನೇಗೆ ಹೋದ
ಎಂಟು ಲಾಡು ತಿಂದ
ಹೊಟ್ಟೆ ನೋವು ಎಂದ
ಕೈ ಕಟ್ ಬಾಯ್ ಮುಚ್
ಕವಿ: ಕುವೆಂಪು
ತುಂಗಾ ತೀರದ ಬಲಗಡೆಯಲ್ಲಿ ಹಿಂದಲ್ಲಿದ್ದುದು ಬೊಮ್ಮನ ಹಳ್ಳಿ
ಅಲ್ಲೇನಿಲಿಗಳ ಕಾಟವೆ ಕಾಟ ಅಲ್ಲಿನ ಜನಗಳಿಗತಿಗೋಳಾಟ
ಇಲಿಗಳು ಬಡಿದವು ನಾಯಿಗಳ ಇಲಿಗಳು ಕಡಿದವು ಬೆಕ್ಕುಗಳ
ಕೆಲವನು ಕೊಂದವು ಕೆಲವನು ತಿಂದವು ಕೆಲವನು ಬೆದರಿಸಿ ಹಿಂಬಾಲಿಸಿದವು
ಅಲ್ಲಿಯ ಮೂಶಿಕ ನಿಕರವು ಸೊಕ್ಕಿ ಎಲ್ಲರ ಮೇಲೆಯು ಕೈಬಾಯಿಕ್ಕಿ
ಹೆದರಿಕೆಯಿಲ್ಲದೆ ಬೆದರಿಕೆಯಿಲ್ಲದೆ ಕುಣಿದವು ಯಾರನು ಲೆಕ್ಕಿಸದೆ
ಹಾಲಿನ ಮಡಕೆಯನೊಡೆದವು ಕೆಲವು ಅನ್ನದ ಗಡಿಗೆಯ ಪುಡಿ ಮಾಡಿದವು
ಬಡಿಸುವ ಅಡುಗೆಯ ಭಟ್ಟನ ತಡೆದು ಕೈಯಲ್ಲಿರುವಾ ಸಟ್ಟುಗವ
ಭೀತಿಯೆ ಇಲ್ಲದೆ ನೆಕ್ಕಿದವು ಈ ಪರಿ ತಿನ್ನುತ ಸೊಕ್ಕಿದವು
ಧಾನ್ಯವನೆಲ್ಲವ ಬಿಕ್ಕಿದವು
ಟೋಪಿಯ ಒಳಗಡೆ ಗೂಡನು ಮಾಡಿ ಹೆತ್ತವು ಮರಿಗಳನು
ಪೇಟದ ಒಳಗಡೆ ಆಟವನಾಡಿ ಕಿತ್ತವು ಸರಿಗೆಯನು
ಗೋಡೆಗೆ ತಗುಲಿಸಿದಂಗಿಯ ಜೇಬಿನ ದಿನವೂ ಜಪ್ತಿಯ ಮಾಡಿದವು
ಮಲಗಿರೆ ಹಾಸಿಗೆಯನ್ನೇ ಹರಿದವು ಕೇಶಛೇದನ ಮಾಡೀದವು
ಬೆಣ್ಣೆಯ ಕದ್ದವು ಬೆಲ್ಲವ ಮೆದ್ದವು ಎಣ್ಣೆಗೆ ಬಿದ್ದವು ದಿನದಿನವು
ಗೌಡರು ಮಾತಾಡುತ ಕುಳಿತಲ್ಲಿ ಬಹಳ ಗಲಾಟೆಯ ಮಾಡಿದವು
ಗರತಿಯರಾಡುವ ಹರಟೆಗೆ ತುಂಬಾ ತೊಂದರೆಯಿತ್ತು ಗಿಜಿಬಿಜಿ ಮಾಡಿ
ಊರಿನ ಮಕ್ಕಳ ಕೈಯಲ್ಲಿದ್ದಾ ತಿಂಡಿಯ ಕಸಿದವು ಧೈರ್ಯದಲಿ
ಇಲಿಗಳ ಕೊಲ್ಲಲು ಊರಿನ ಜನರು ತುಂಬಾ ಯತ್ನವ ಮಾಡಿದರು
ಕಡಿದರೆ ಮುರಿದುವು ಕತ್ತಿಗಳೆಲ್ಲ ಹೋಡೆದರೆ ಮಡಿದವು ಕೋಲುಗಳೆಲ್ಲ
ಇಲಿಗಳ ಬೇಟೆಯನಾಡುತಲಿರಲು ಮುರಿದವು ತಿಮ್ಮನ ಕಾಲುಗಳು
ಭೃಂಗಾಮಲಕದ ತೈಲವ ಹಚ್ಚಿದ ಶೇಶಕ್ಕನ ನುಣ್ಣನೆ ಫಣಿವೇಣಿ
ಬೆಳಗಾಗೇಳುತ ಕನ್ನದಿ ನೋಡೆ ಇಲಿಗಳಿಗಾಗಿತ್ತೂಟದ ಫೇಣಿ
ನುಗ್ಗುತ ಕೊಟ್ಟಿಗೆಗಿರುಳಿನ ಹೊತ್ತು ಉಂಡವು ತಿಂದವು ದನಗಳ ಕೆಚ್ಚಲು
ಹರಿದವು ಕರುಗಳ ಬಾಲಗಳ
ಸಿದ್ದೋಜೈಗಳು ಶಾಲೆಗೆ ಹೋಗಿ ಪಾಟವ ಬೊಧಿಸುತಿದ್ದಾಗ
ಅಂಗಿಯ ಜೇಬಿಂ ಹೆಳವಿಲಿಯೊಂದು ಛಂಗನೆ ನೆಗೆಯಿತು ತೂತನು ಮಾಡಿ
ಲೇವಡಿಯೆಬ್ಬಿಸೆ ಬಾಲಕರೆಲ್ಲ ಗುರುಗಳಿಗಾಯಿತು ಬಲುಗೇಲಿ
ಬೇಟೆಯನಾಡಲು ಅಡುಗೆಯ ಮನೆಯಲಿ ಬಿದ್ದಳು ಬಳೆಯೊಡೆದಚ್ಚಮ್ಮ
ಮೂಶಿಕ ಯಾಗವ ಮಾಡಿದರು ದೇವರ ಪೂಜೆಯ ಮಾಡಿದರು
ಹರಕೆಯ ಹೊತ್ತರು ಕಾಣಿಕೆ ತೆತ್ತೆರು ಮಂತ್ರವ ದಿನದಿನ ಹೇಳಿದರು
ನಿಶ್ಫಲವಾದವು ಮಂತ್ರಗಳೆಲ್ಲ ಬಾಯಿ ಬಾಯಿ ಕಳೆದರು ಶಾಸ್ತ್ರಿಗಳೆಲ್ಲ
ಕಣ್ ಕಣ್ ಬಿಟ್ಟರು ಪಂಡಿತರೆಲ್ಲ ಕಂಬನಿಗರೆದರು ಜನರೆಲ್ಲ
ಮುಂದಿನ ಮಾರ್ಗವ ಕಾಣದೆ ಜನರು ಗೌಡನ ಬಳಿ ಹೋದರು ಗುಂಪಾಗಿ
ಗೌಡನು ಜನರನು ಕುರಿತಿಂತೆಂದನು
ಇಲಿಗಳ ಕೊಲ್ಲಲು ದಾರಿಯನಾರು ತೋರಿಸಿಕೊಡುವಿರೊ ಅವರಿಗೆ ಆರು
ಸಾವಿರ ನಾಣ್ಯಗಳೀಯುವೆ ನಾನು ತಿಳಿದವರಿದ್ದರೆ ಬನ್ನಿರಿಯೇನು ?
ಏನಿದು ಗುಜುಗುಜು ಗುಂಪಿನಲಿ ? ನೋಡಿದರೇನಾಶ್ಚರ್ಯವನು
ಆಲಿಸಿ ದೂರದ ಕಿಂದಿರಿನಾದ ಬರುವನು ಯಾರೋ ಕಿಂದರಿ ಜೋಗಿ
ಹತ್ತಿರ ಹತ್ತಿರಕವನೈತಂದ ಬಂದಿತು ಜನರಿಗೆ ಬಲು ಆನಂದ
ನೋಡಿರಿ ನೋಡಿರಿ ಕಿಂದರಿ ಜೋಗಿ ನೋಡಿದರೆಲ್ಲರು ಬೆರಗಾಗಿ
ಬಂದನು ಬಂದನು ಕಿಂದರಿ ಜೋಗಿ ಕೆದರಿದ ಕೂದಲ ಗಡ್ಡದ ಜೋಗಿ
ನಾನಾ ಬಣ್ಣದ ಬಟ್ಟೆಯ ಜೋಗಿ ಕೈಯಲಿ ಕಿಂದರಿ ಹಿಡಿದಾ ಜೋಗಿ
ಜೋಗಿಯು ಹತ್ತಿದ ಗೌಡನ ಕಟ್ಟೆಯ ಗೌಡನ ಹೃದಯವು ಬಾಯಿಗೆ ಬಂದಿತು
ಗಡಗಡ ನಡುಗಿದನು
ತೊದಲುತ ಬೆದರುತ ಕಂಪಿತ ಕಂಠದಿ ನೀನಾರೆಂದನು ಜೋಗಿಯ ಕುರಿತು
ಅದಕಾ ಜೋಗಿಯು ಇಂತೆಂದ ಕೇಳಿದರೆಲ್ಲರು ಬಾಯಿಬಿಟ್ಟು
ಹಿಮಗಿರಿಯಲ್ಲಿಹ ಜೋಗಿಯು ನಾನು ಪರಮೇಶ್ವರನಿಗೆ ಗೆಳೆಯನು ನಾನು
ನಿಮ್ಮೀ ಗೋಳನು ಕೇಳಿದ ಶಿವನು ನನ್ನನ್ನಿಲ್ಲಿಗೆ ಕಳುಹಿದನು
ಇಲಿಗಳನೆಲ್ಲಾ ಕೊಂದರೆ ಆರು ಸಾವಿರ ನಾಣ್ಯಗಳೀಯುವೆಯೇನು ?
ಉಬ್ಬಿತು ಉಕ್ಕಿತು ಗೌಡನ ಸಂತಸ ಶಹಭಾಸೆಂದರು ಜನರೆಲ್ಲ
ಗೌಡನು ಜೋಗಿಯ ಕುರಿತಿಂತೆಂದನು ಜನರದನೆಲ್ಲಾ ಕೇಳಿದರು
ಬೇಕಾದುದ ನಾ ಕೊಡುವೆನು ಜೋಗಿ ಆರೇಕಿನ್ನೆರಡಾದರು ಕೊಡುವೆನು
ಬೇಕಾದುದನೆಲ್ಲವ ನೀ ಕೇಳು ಊರೇ ನಿನ್ನದು ನಾ ನಿನ್ನಾಳು
ಮರು ಮಾತಾಡದೆ ಕಿಂದರಿ ಜೋಗಿ ಕಟ್ಟೆಯನಿಳಿದನು ಬೀದಿಗೆ ಹೋಗಿ
ಗಡ್ಡವ ನೀವುತ ಸುತ್ತಲು ನೋಡಿ ಮಂತ್ರವ ಬಾಯಲಿ ಮಣಮಣ ಹಾಡಿ
ಕಿಂದರಿ ಬಾರಿಸತೊಡಗಿದನು ಜಗವನೆ ಮೋಹಿಸಿತಾ ನಾದ !
ಏನಿದು ? ಏನಿದು ಗಜಿಬಿಜಿಯೆಲ್ಲಿ ? ಊರನೆ ಮುಳುಗಿಪ ನಾದವಿದೆಲ್ಲಿ ?
ಇಲಿಗಳೂ ! ಇಲಿಗಳೂ ! ಇಲಿಗಳ ಹಿಂಡು ಬಳಬಳ ಹರಿದವು ಇಲಿಗಳ ದಂಡು
ಅನ್ನದ ಮಡಕೆಯನಗಲಿದವು ಟೋಪಿಯ ಗೂಡನು ತ್ಯಜಿಸಿದವು
ಬಂದವು ಅಂಗಿಯ ಜೇಬನು ಬಿಟ್ಟು ಮಕ್ಕಳ ಕಾಲಿನ ಚೀಲವ ಬಿಟ್ಟು
ಹಾರುತ ಬಂದವು ಓಡುತ ಬಂದವು ನೆಗೆಯುತ ಬಂದವು ಕುಣಿಯುತ ಬಂದವು
ಜೋಗಿಯು ಬಾರಿಸೆ ಕಿಂದರಿಯ ಸಣ್ಣಿಲಿ, ದೊಡ್ಡಿಲಿ, ಮೂಗಿಲಿ, ಸುಂಡಿಲಿ
ಅಣ್ಣಿಲಿ, ತಮ್ಮಿಲಿ, ಅವ್ವಿಲಿ, ಅಪ್ಪಿಲಿ, ಮಾವಿಲಿ, ಭಾವಿಲಿ, ಅಕ್ಕಿಲಿ, ತಂಗಿಲಿ,
ಗಂಡಿಲಿ, ಹೆಣ್ಣಿಲಿ, ಮುದುಕಿಲಿ, ಹುಡುಗಿಲಿ ಎಲ್ಲಾ ಬಂದವು ಓಡೋಡಿ
ಜೋಗಿಯು ಬಾರಿಸೆ ಕಿಂದರಿಯ ! ಬಂದವು ನಾನಾ ಬಣ್ಣದ ಇಲಿಗಳು
ಕೆಂಪಿನ ಇಲಿಗಳು, ಹಳದಿಯ ಇಲಿಗಳು, ಬೆಳ್ಳಿಲಿ, ಕರಿಯಿಲಿ, ಗಿರಿಯಿಲಿ, ಹೊಲದಿಲಿ,
ಕುಂಕುಮ ರಾಗದ, ಚಂದನ ರಾಗದ, ಹಸುರಿನ ಬಣ್ಣದ, ಪಚ್ಚೆಯ ವರ್ಣದ,
ಸಂಜೆಯ ರಾಗದ, ಗಗನದ ರಾಗದ ನಾನಾ ವರ್ಣದ ಇಲಿಗಳು ಬಂದವು
ಕುಣಿಯುತ ನಲಿಯುತ ಸಂತಸದಿ ಜೋಗಿಯು ಬಾರಿಸೆ ಕಿಂದರಿಯ
ನೋಡಿರಿ ! ಕಾಣಿರಿ ! ಬರುತಿಹವಿನ್ನೂ ಅಟ್ಟದ ಮೇಲಿಂ ಬರುವುವು ಕೆಲವು,
ಕಣಜದ ಕಡೆಯಿಂ ಬರುವುವು ಹಲವು, ಓಹೋ ! ಬಂದವು ಹಿಂಡಿಂಡಾಗಿ !
ಕುಂಟಿಲಿ, ಕಿವುಡಿಲಿ, ಹೆಳವಿಲಿ, ಮೂಗಿಲಿ ಚೀ ಪೀ ಎನ್ನುತ ಕೂಗುತಲೋಡಿ
ಗಹಗಹಿಸುತ ನೆರೆ ನೆರೆನಲಿದಾಡಿ ಬಂದಿತು ಮೂಶಿಕ ಸಂಕುಲವು
ಜೋಗಿಯು ಬಾರಿಸೆ ಕಿಂದರಿ ನಾದ !
ಬೊಮ್ಮನ ಹಳ್ಳಿಯ ಕಿಂದರಿ ಜೋಗಿ ಹೊರಟನು ತುಂಗಾ ನದಿಯೆಡೆಗಾಗಿ
ಕಿಂದರಿ ನಾದವು ಗಗನಕ್ಕೇರಿತು ಇಲಿಗಳನೆಲ್ಲಾ ಮನಮೋಹಿಸಿತು
ಕಿಂದರಿ ಜೋಗಿಯ ಹಿಂಬಾಲಿಸಿದರು ಜನಗಳು ನೋಡಲು ಕೌತುಕವ
ಜೋಗಿಯು ನಡೆದನು, ಇಲಿಗಳು ನಡೆದವು ಸೇರಿದರೆಲ್ಲರು ನದಿಯೆಡೆಯ
ಹೊಳೆಯಾ ಮರಳಿನ ಗುಡ್ಡೆಯ ತುಂಬಾ ನೋಡಿದರೆಲ್ಲೆಲ್ಲಿಯು ಇಲಿ-ಇಲಿ ಗುಂಪೆ !
ಉಸಿರಾಡದೆ ನಿಂತರು ಜನರೆಲ್ಲಾ ಮುಂದೇನಾಗುವುದೆಂದಲ್ಲಿ
ದಿವಿಜರು ಕವಿದರು ಗಗನದಲಿ ಹೂಮಳೆ ಕರೆದರು ಹರುಶದಲಿ
ದುಂದುಭಿ ನಾದವ ಮಾಡಿದರು ಕಾಣದ ಬೆರಗನು ನೋಡಿದರು
ಸುತ್ತಲು ನೋಡಿಮ್ ಕಿಂದರಿ ಜೋಗಿ ನಡೆದನು ಹೊಳೆಯ ನೀರಿನ ಮೇಲೆ
ಸೇರಿದ ಜನರೆಲ್ಲರು ಬೆರಗಾಗಿ ಜಯಜಯ ಜೋಗಿ ಎಂದರು ಕೂಗಿ
ಇಲಿಗಳು ಒಂದರ ಮೇಲೊಂದು ಹಿಂಬಾಲಿಸಿದವು ಜೋಗಿಯನು
ಬುಳುಬುಳು ನೀರೊಳು ಮುಳುಗಿದವೆಲ್ಲಾ ಹೆಣವಾಗಲ್ಲಿಯೆ ತೇಲಿದವು
ಕಿಂದರಿ ಜೋಗಿಯು ಹಿಂದಕೆ ಬಂದು ಗೌಡನೆ ನಾಣ್ಯಗಳನು ಕೊಡು ಎಂದ
ಗೌಡನು ನೋಡಿದ ಬೆರಗಾಗಿ ! ಸಾವಿರ ಆರೂ ಎಂದನು ಜೋಗಿ !
ಗೌಡನು ನಿಂತನು ತಲೆತೂಗಿ ! ಕಿಂದರಿ ಜೋಗಿಯೆ ಹೇಳುವೆ ಕೇಳು
ಸಾವಿರ ಆರನು ನಾ ಕೊಡಲಾರೆನು ನೀ ಮಾಡಿದ ಕೆಲಸವು ಹೆಚ್ಚಲ್ಲ
ಸುಮ್ಮನೆ ಕಿಂದರಿ ಬಾರಿಸಿದೆ ಇಲಿಗಳ ಹೊತ್ತೆಯ ನೀನೇನು ?
ಅವುಗಳು ತಮ್ಮಷ್ಟಕೆ ತಾವೇ ಬಿದ್ದವು ಹೊಳೆಯಲಿ ಮುಳುಗಿದವು
ಕೊಡುವೆ ನೀ ಪಟ್ಟಿಹ ಶ್ರಮಕಾಗಿ ಕಾಸೈದಾರನು ಕೊಡುವೆನು ಜೋಗಿ
ಪುರಿಗಡಲೆಯನು ಕೊಂಡುಕೊ ಹೋಗಿ !
ಗೌಡನು ಈ ಪರಿ ನುಡಿಯಲು ಜೋಗಿಯು ಕಂಗಳ ಕೆರಳಿಸುತಿನ್ತೆಂದ
ಆಡಿದ ಭಾಶೆಯ ತಪ್ಪುವೆಯ ? ಸಾವಿರ ಆರನು ಕೊಡದಿರೆ ನೀನು
ಮತ್ತೀ ಕಿಂದರಿ ಬಾರಿಸುವೆ ! ನಿಮ್ಮೀ ಹಳ್ಳಿಯನಾರಿಸುವೆ !
ಸಾವಿರವಾರನು ಕೊಡುವವರಾರು ಅಪ್ಪನ ಗಂಟೇ ? ಹೊಗೋ ಜೋಗಿ
ನೀ ಮಾಡುವುದೇನನು ನೋಡುವೆನು ಮರುಮಾತಾಡದೆ ತೊಲಗಿಲ್ಲಿಂದ !
ಹೆಚ್ಚಿಗೆ ಮಾತೇನಾದರು ನೀನಾಡಿದರೆ ಕಿಂದರಿಯೊಡೆಸುವೆ ಗಡ್ಡವ ಸುಡಿಸುವೆ
ನಿನ್ನೀ ತಲೆಯನು ಬೋಳಿಸುವೆ ಕಿಂದರಿ ತಂತಿಯು ಹರಿಯುವವರೆಗೂ
ಬಾರಿಸು ! ಬೇಡೆಂದವರಾರು ? ಬಲ್ಲೆಯ ನಾನಾರೆಂಬುದನು ?
ಊರ ಪಟೇಲ ಹಳ್ಳಿಗೆ ಗೌಡ ! ನಡೆನಡೆ ಮರುಮಾತಾಡದಿರು
ಗೌಡನ ನುಡಿಯನು ಕೇಳಿದ ಜೋಗಿ ಕಿಂದರಿ ಬಾರಿಸತೊಡಗಿದನು
ನಾದವು ಉಬ್ಬಿತು ಊರೊಳಗೆಲ್ಲ ಕರೆಯಿತು ಊರಿನ ಹುಡುಗರನೆಲ್ಲ
ಓಡುತ ಬಂದರು ಬಾಲಕರು ಕೇಳದೆ ಹಿರಿಯರ ಮಾತುಗಳ
ಬೊಮ್ಮನ ಹಳ್ಳಿಯ ಕಿಂದರಿ ಜೋಗಿ ಕಿಂದರಿ ಬಾರಿಸಿದನು ಇಂಪಾಗಿ
ಟಿಂಗ್ ಟಿಂಗ್ ಟಿಂಗ್ ಟಿಂಗ್ ನಾದವ ಕೇಳಿ ಚಂಗ್ ಚಂಗ್ ನೆಗೆದರು ಬಾಲಕರಾದಿ
ಕಿಂದರಿ ಜೋಗಿಯು ಹೊರಟನು ಮುಂದೆ ಬಾಲಕರೆಲ್ಲರು ಹರಿದರು ಹಿಂದೆ
ಊರಿನ ಜನರೆಲ್ಲರು ಭಯದಿಂದ ಎಂದರು ಮಕ್ಕಳ ಗೌಡನೆ ಕೊಂದ
ಹಾಳಾದೆವು ಗೌಡನ ದೆಸೆಯಿಂದ ಗೌಡನು ಕೂಗಿದ ಹೆದರಿಕೆಯಿಂದ
ಜೋಗಿ, ಜೋಗಿ, ಹಿಂದಿರುಗೆಂದ ಕಿಂದರಿ ಜೋಗಿಯು ನಡೆದನು
ಮುಂದೆಮಕ್ಕಳು ಓಡುತ ಹೋದರು ಹಿಂದೆ
ಕುಂಟರು ಭರದಿಂದೋಡಿದರು ಕುರುಡರು ನೋಟವ ನೋಡಿದರು
ಮೂಗರು ಸವಿ ಮಾತಾಡಿದರು ಕಿವುಡರು ನಾದವ ಕೇಳಿದರು
ಜನರೆಲ್ಲಾ ಗೋಳಾಡಿದರು ಬೊಮ್ಮನ ಹಳ್ಳಿಯ ಕಿಂದರಿ ಜೋಗಿ
ಮಕ್ಕಳ ಹೊಳೆಯೊಳಗಿಳಿಸುವನೆಂದು ಓಡಿದರೆಲ್ಲರು ಜೋಗಿಯ ಹಿಂದೆ
ಬೆಟ್ಟದ ಬುಡವನು ಸೇರಿದ ಜೋಗಿ ನಿಲ್ಲುವನೆಂದೆಲ್ಲಾ ಬಯಸಿದರು
ಏನಿದು ನಿಂತರು ಜನರೆಲ್ಲ ? ಅಯ್ಯೋ ಮಕ್ಕಳೆ ಎಂದೆನುತ !
ಜೋಗಿಯು ಬಾರಿಸೆ ಕಿಂದರಿಯ ಬಂಡೆಯು ದವಡೆಯನಾಕಳಿಸುತ್ತ
ಬಾಯನು ತೆರೆಯಿತು ಆ ಗಿರಿಯ ! ಜೋಗಿಯು ನುಗ್ಗಿದನದರಲ್ಲಿ
ಹಿಂದೆಯೆ ಹೋದರು ಬಾಲಕರು ! ಬೆಟ್ಟವು ಹಾಕಿತು ಬಾಗಿಲ ಬೇಗ
ಹಿಂದಕ್ಕುಳಿದವನೊಬ್ಬನೆ ಕುಂಟ ಅಲ್ಲಿಗೆ ಬಂದರು ಜನರೋಡಿ
ಕುಂಟನ ಕಂಡರು ಒಂಟಿಯಲಿ ಕುಂಟನು ಉಳಿದವರೆಲ್ಲೆಂದು
ಕೇಳಲು ಬೆಟ್ಟವ ತೋರಿದನು ಕಂಬನಿಗರೆದರು ಗೋಳಾಡಿದರು
ಉಳಿದಾ ಕುಂಟನು ಅಳುತಿಂತೆಂದ
ಅಯ್ಯೋ ಹೋಯಿತೆ ಆ ನಾಕ ! ಅಯ್ಯೋ ಬಂದಿತೆ ಈ ಲೋಕ !
ಕವಿ : ಜಿ.ಪಿ.ರಾಜರತ್ನಂ
ನಾಯಿಮರಿ ನಾಯಿಮರಿ ತಿಂಡಿ ಬೇಕೆ
ತಿಂಡಿ ಬೇಕು ತೀರ್ಥ ಬೇಕು ಎಲ್ಲ ಬೇಕು
ನಾಯಿಮರಿ ನಿನಗೆ ತಿಂಡಿ ಯಾಕೆ ಬೇಕು
ತಿಂಡಿ ತಿಂದು ಗಟ್ಟಿಯಾಗಿ ಮನೆಯ ಕಾಯಬೇಕು
ನಾಯಿಮರಿ ಕಳ್ಳ ಬಂದರೆ ಎನು ಮಾಡುವೆ
ಲೊಳ್ ಲೊಳ್ ಬೊವ್ ಎಂದು ಕೂಗಿ ಆಡುವೆ
ಜಾಣಮರಿ ತಾಳು ಹೋಗಿ ತಿಂಡಿ ತರುವೆನು
ತಾ ನಿನ್ನ ಮನೆಯ ನಾನು ಕಾಯುತಿರುವೆನು
ಕವಿ - ಕುವೆಂಪು
ನಮ್ಮ ಮನೆಯಲೊಂದು ಸಣ್ಣ ಪಾಪವಿರುವುದು
ಎತ್ತಿಕೊಳಲು ಹೋದರದಕೆ ಕೋಪ ಬರುವುದು
ಕೋಪ ಬರಲು ಗಟ್ಟಿಯಾಗಿ ಕಿರಿಚಿಕೊಳುವುದು
ಕಿರಿಚಿಕೊಂಡು ತನ್ನ ಮೈಯ ಪರಚಿಕೊಳುವುದು
ಮೈಯ ಪರಚಿಕೊಂಡು ಪಾಪ ಅತ್ತು ಕರೆವುದು
ಅಳಲು ಕಣ್ಣಿನಿಂದ ಸಣ್ಣ ಮುತ್ತು ಸುರಿವುದು
ಪಾಪ ಅತ್ತರಮ್ಮ ತಾನೂ ಅತ್ತುಬಿಡುವಳು
"ಅಯ್ಯೋ ಪಾಪ" ಎಂದುಕೊಂಡು ಮುತ್ತು ಕೊಡುವಳು
ಪಾಪ ಪಟ್ಟು ಹಿಡಿದ ಹಟವು ಸಾರ್ಥಕವಾಯಿತು
ಕಿರಿಚಿ ಪರಚಿ ಅಳುವುದೆಲ್ಲ ಅರ್ಥವಾಯಿತು
ಕವಿ : ಜಿ. ಪಿ. ರಾಜರತ್ನಂ
ಬಣ್ಣದ ತಗಡಿನ ತುತ್ತೂರಿ
ಕಾಸಿಗೆ ಕೊಂಡನು ಕಸ್ತೂರಿ
ಸ-ರಿ-ಗ-ಮ-ಪ-ದ-ನಿ-ಸ ಊದಿದನು
ಸ-ನಿ-ದ-ಪ-ಮ-ಗ-ರಿ-ಸ ಊದಿದನು
ತನಗೇ ತುತ್ತೂರಿ ಇದೆಯೆಂದ
ಬೇರಾರಿಗು ಅದು ಇಲ್ಲೆಂದ
ತುತ್ತೂರಿ ಊದುತ ಕೊಳದ ಬಳಿ
ಕಸ್ಥೂರಿ ನಡೆದನು ಸಂಜೆಯಲಿ
ಜಂಬದ ಕೋಳಿಯ ರೀತಿಯಲಿ
ಜಾರಿತು ನೀರಿಗೆ ತುತ್ತೂರಿ
ಗಂಟಲು ಕಟ್ಟಿತು ನೀರೂರಿ
ಸ-ರಿ-ಗ-ಮ ಊದಲು ನೋಡಿದನು
ಗ-ಗ-ಗ-ಗ ಸದ್ದನು ಮಾಡಿದನು
ಬಣ್ಣವು ನೀರಿನ ಪಾಲಾಯ್ತು
ಜಂಬದ ಕೋಳಿಗೆ ಗೋಳಾಯ್ತು
ಭೀಕರ ಮಳೆಗಾಲ
ವಸುದೆಯ ಹರುಶಕ್ಕೆ ಸಾಟಿಯೇ ?
ಮಯ್ಯ ತುಂಬಾ ತೆನೆತುಂಬಿ
ತೂಗುತ್ತಿದ್ದಾಳೆ, ನಲಿಯುತ್ತಿದ್ದಾಳೆ
ಎಸ್ಟೊಂದು ವ್ಯತ್ಯಾಸ !
ಇಲ್ಲಿ ಮಾನವ ಮನದಲ್ಲಿ ಒಸರು
ಬತ್ತಿ ಹೋಗಿದೆ- ಪ್ರೀತಿಯ ಒಸರು.
ಬರಡಾದ ಎದೆಗೆ ವಿಕ್ರತ
ವಿದ್ವಂಸತೆಯ ಅಟ್ಟಹಾಸ
ಪ್ರೀತಿಯ ಬೆಳೆ ಬೆಳೆಯುವಿದೇ ಇಲ್ಲ
ಮಾನವೀಯತೆಯ ಸೆಲೆ
ಹುಟ್ಟುವುದೇ ಇಲ್ಲ. 'ನಾವು
ದೇವಮಾನವರು' ಅಹಮಿನ
ಟೇಂಕಾರಕ್ಕೆ ಸಾದ್ವಿಗಳ ಎದೆ ನಡುಗುತ್ತದೆ.
ಸಂವತ್ಸರಗಳು 50 ಕಳೆದವು ..
ಸುಗ್ಗಿ ಸಮ್ರದ್ದಿಯಾಗಬೇಕಿದ್ದ ಕಾಲ
ಭಯದ ಮಾರುತ ನುಗ್ಗಿ ಚೆಲ್ಲಾಪಿಲ್ಲಿ.
ಒಂದೆಡೆ ಸೆಳೆತ, ಮತ್ತೊಂದೆಡೆ ಎಳೆತ
ಮದ್ದುಂಟೇ ಈ ಕ್ರೂರತೆಗೆ .
ಅಹುದು .......,
ಮಳೆ ಸುರಿಯಬೇಕು ಎದೆ ಹೊಲಕ್ಕೆ
ಪ್ರೀತಿಯ ಮಳೆ.
ಪ್ರೀತಮ್ ಕೆಮ್ಮಯಿ
ಪಳಪಳನೆ ಹೊಳೆಯುವ ಸೂರ್ಯನ ಕಿರಣಕೆ
ಸದಾ ಮೈಯ್ಯೊಡ್ಡಿ ಬೆವರನ್ನು ಹರಿಸಿ
ಸದಾ ನೀಳವಾಗಿ ನಳನಳಿಸುತ್ತಿರುವ
ಜಲಧಿಯ ಉದರದಿ೦ದ ಜನಿಸಿತ್ತು - ನಕ್ಷತ್ರ ಮೀನು !
ಮೈಯ್ಯೆಲ್ಲಾ ನೀಲ ವರ್ಣ
ಚಿನ್ನದ೦ತಿರುವ ಹುರುಪೆಗಳ ಚರ್ಮ
ಪುಷ್ಪಗುಚ್ಚದ ಬಾಲ
ಕಣ್ಣೆರಡು ಗಾಜಿನ ಗೋಲ !
ತಿಳಿನೀರ ಸಾಗರದಿ ಭರಭರನೆ ಈಜುತ್ತಾ
ಧೈತ್ಯರಾಕ್ಷಸರಿಗೆ ಮರೀಚಿಕೆಯಾಗಿ
ನಿರ್ಭೀಡತೆಯಿ೦ದ ಗಮಿಸುತ್ತಿತ್ತು
ನೀಲವರ್ಣದ ಮೀನು, ನಕ್ಷತ್ರ ಮೀನು.
ಬಡವನಾಗಿದ್ದೇನೆ ನಾನು
ನನ್ನಲ್ಲೀಗ ಯೌವ್ವನದ
ನೆತ್ತರಿಲ್ಲ,
ಆಸೆ ಆಕಾ೦ಕ್ಷೆಗಳ ಹೊತ್ತ ಮನದಿ
ಹುರುಪಿಲ್ಲ,
ಬಿದ್ದಾಗ ಎತ್ತುವ,
ಖಿನ್ನವಾದಾಗ ಉತ್ತೇಜಿಸುವ,
ಸ೦ಕಷ್ಟದಲ್ಲಿ ನೆರವಾಗುವ
ಬದುಕಿನ ಕೊ೦ಡಿಗಳು
ಕಳಚಿಕೊ೦ಡಿವೆ
ಎ೦ದು ಹಲುಬಿದ ಮನ
ಅಣಿಯಾಗುತ್ತಿತ್ತು
ಕ್ಷಣಕ್ಷಣವೂ
ಧೀರ್ಘ ಶಯ್ಯೆಗೆ
ಅರಿಯದ ಪಯಣಕ್ಕೆ.
ಅಹಲ್ಯೆ ಕಾದಿರುವಳು ರಾಮ
ಬೇಗ ಬಾ, ನೀ ಬೆಗ ಬಾ
ಹಗಲಿರುಳೆನ್ನದೆ ತಪಿಸುತಿಹಳು
ಹ೦ಬಲಿಕೆಯ ಹಸಿವ ನೀಗಿಸಲು ಬಾ
ವಿಧಿಯ ಮೋಸದಾಟದಿ ಬೆ೦ದು,
ತನ್ನ ಕರ್ಮಗಳಿ೦ದ ಬಹುವಾಗಿ ನೊ೦ದು
ರೂಪಸಿಯಾಗಿದ್ದದ್ದೇ ತನ್ನ ತಪ್ಪು ಎ೦ದು
ನರಳುತ್ತ ಕಲ್ಲಾಗಿಹಳು, ಬಹುಬೇಗ ಬಾ
ಯಾರು ಕಾರಣ ಅಹಲ್ಯೆಯ ಈ ಸ್ತಿತಿಗೆ?
ಇನಿಯನೋ, ವಿಧಿಯೋ, ಇ೦ದ್ರನೋ?
ಯಾರೊಬ್ಬರೇ ಇರಲಿ, ಕ್ರೂರತೆ ಅವಳಿಗೇ
ನೊ೦ದಿರುವ ಜೀವಕ್ಕೆ ಮುದನೀಡು ಬಾ
ಪೂರ್ವಜನ್ಮದ ವಿಕೃತ ಪಾಪ
ಇ೦ದೂ ಪಡುತ್ತಿಹಳು ಪಶ್ಚಾತ್ತಾಪ
ಸ್ವಲ್ಪ ಹೆಚ್ಚೇ ಆಯಿತು ವಿಧಿಯ ಕೋಪ
ಸಹನೆಗೂ ಮಿತಿಯು೦೦ಟು ರಾಮ,
ಆದಷ್ಟು.., ಸಾಧ್ಯವಾದಷ್ಟು ಬೇಗ ಬಾ.
ಬೆಳದಿ೦ಗಳಿರುಳಲ್ಲಿ
ಕನಸುಗಳ ತಿಕ್ಕಾಟ
ಮನದ೦ತರಾಳದಲ್ಲಿ
ಭಾವಗಳ ಒಡನಾಟ
ಮುಖದ ಮೇಲೆ ಮಾತೆಅ
ತಿಳಿ ಮ೦ದಹಾಸ !
ಒತ್ತಟ್ಟಿಗಿರುವ ಯೌವ್ವನ
ನಗುಮುಖದ ಮೇಲೆ ಮುಗ್ಧ ಮೌನ
ಚರ್ಯೆ-ಪ್ರತಿಚರ್ಯೆಗಳ ಸ೦ಧಾನ
ಪ್ರಶಾ೦ತತೆಯ ಪ್ರತಿಬಿ೦ಬ ವದನ
ಅದೆಲ್ಲವ ಮೀರಿಸಿದೆ ಚ೦ಚಲೆಯ ನಯನ !
ನಿಸರ್ಗದ ಸು೦ದರ ಶಿಲ್ಪ
ಈಕೆ ಇನ್ನಾರೂ ಅಲ್ಲ,
ಇವಳು.., ಇವಳೇ ಎಲ್ಲಾ
ಮಿಕ್ಕದ್ದು ಆ ಬ್ರಹ್ಮನೇ ಬಲ್ಲ !